Homeಮುಖಪುಟಉ. ಪ್ರದೇಶದ ಗೋಹತ್ಯೆ ತಡೆ ಕಾಯ್ದೆ ಗೋಮಾಂಸ ಸಾಗಾಟ ನಿಷೇಧಿಸಿಲ್ಲ: ಅಲಹಾಬಾದ್ ಹೈಕೋರ್ಟ್‌

ಉ. ಪ್ರದೇಶದ ಗೋಹತ್ಯೆ ತಡೆ ಕಾಯ್ದೆ ಗೋಮಾಂಸ ಸಾಗಾಟ ನಿಷೇಧಿಸಿಲ್ಲ: ಅಲಹಾಬಾದ್ ಹೈಕೋರ್ಟ್‌

- Advertisement -
- Advertisement -

ಉತ್ತರ ಪ್ರದೇಶದ ಗೋಹತ್ಯೆ ತಡೆ ಕಾಯ್ದೆಯು ಗೋಮಾಂಸ ಸಾಗಣೆಯನ್ನು ನಿಷೇಧಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿ ಎನ್‌ಡಿ ಟಿವಿ ವರದಿ ಮಾಡಿದೆ.

ಗೋಮಾಂಸ ಸಾಗಾಟ ಆರೋಪದ ಮೇಲೆ ಗೋಹತ್ಯೆ ನಿಷೇಧ ಕಾಯ್ದೆಯಡಿ ವಸೀಂ ಅಹ್ಮದ್ ಎಂಬವರ ಮೋಟಾರ್‌ ಸೈಕಲ್‌ ಅನ್ನು ಜಪ್ತಿ ಮಾಡಲು ಫತೇಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ವಸೀಂ ಅಹ್ಮದ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ಗೋಹತ್ಯೆ ಕಾಯ್ದೆಯಡಿ ಗೋಮಾಂಸ ಸಾಗಾಟವನ್ನು ನಿಷೇಧಿಸಿಲ್ಲ ಎಂದು ಹೇಳಿದ್ದಾರೆ.

ವಸೀಂ ಅವರ ಅರ್ಜಿ ವಿಚಾರಣೆ ವೇಳೆ ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಾಲಯ, ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಅದರ ನಿಯಮಗಳು ಹಸು, ಗೋಳಿ ಎತ್ತು ಸಾಗಣೆಗೆ ಮಾತ್ರ ನಿಷೇಧ ಹೇರಿವೆ. ಆದರೆ, ಗೋಮಾಂಸ ಸಾಗಾಟಕ್ಕೆ ಯಾವುದೇ ನಿಷೇಧ ಅಥವಾ ನಿರ್ಬಂಧ ವಿಧಿಸಿಲ್ಲ ಎಂದು ತಿಳಿಸಿದೆ.

ಗೋಹತ್ಯೆ ಕಾಯ್ಡೆಯಡಿ ರಾಜ್ಯದಲ್ಲಿ ಮೋಟಾರ್ ವಾಹನಗಳಲ್ಲಿ ಗೋಮಾಂಸ ಸಾಗಾಟಕ್ಕೆ ಯಾವುದೇ ನಿಷೇಧ ವಿಧಿಸಿಲ್ಲ. ಹಾಗಾಗಿ, ಪ್ರಸ್ತುತ ಪ್ರಕರಣದಲ್ಲಿ ಗೋಮಾಂಸ ಸಾಗಾಟದ ಆರೋಪದಡಿ ವಾಹನ ಜಪ್ತಿ ಮಾಡಲು ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : 100 ಕೋಟಿ ರೂ. ವಂಚನೆ ಪ್ರಕರಣ: ನಟ ಪ್ರಕಾಶ್ ರಾಜ್‌ಗೆ ಇಡಿ ಸಮನ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...