Homeಅಂತರಾಷ್ಟ್ರೀಯವಿಮಾನ ಅಪಘಾತದಲ್ಲಿ ಮಲಾವಿ ದೇಶದ ಉಪಾಧ್ಯಕ್ಷರು ಸೇರಿ 10 ಮಂದಿ ಮೃತ್ಯು

ವಿಮಾನ ಅಪಘಾತದಲ್ಲಿ ಮಲಾವಿ ದೇಶದ ಉಪಾಧ್ಯಕ್ಷರು ಸೇರಿ 10 ಮಂದಿ ಮೃತ್ಯು

- Advertisement -
- Advertisement -

ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಮಂದಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಲಾವಿ ಅಧ್ಯಕ್ಷರ ಕಾರ್ಯದರ್ಶಿ ಕೊಲೀನ್ ಸಾಂಬಾ ಮಂಗಳವಾರ ಖಚಿತಪಡಿಸಿದ್ದಾರೆ.

ಮಲಾವಿಯ ಉಪಾಧ್ಯಕ್ಷ ಸೌಲೋಸ್ ಕ್ಲಾಸ್ ಚಿಲಿಮಾ ಮತ್ತು ಇತರ ಒಂಬತ್ತು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ನಾಪತ್ತೆ ವಿಚಾರ ತಿಳಿದು ಬಂದ ಬೆನ್ನಲ್ಲಿ ವ್ಯಾಪಕವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಕಾಣೆಯಾದ ವಿಮಾನವು ಚಿಕಂಗವಾ ಅರಣ್ಯದಲ್ಲಿ ಪತ್ತೆಯಾಗಿದೆ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಮಲಾವಿ ಅಧ್ಯಕ್ಷರ ಕಚೇರಿ ಅಪಘಾತದ ಬಗ್ಗೆ ಹೇಳಿಕೆಯನ್ನು ನೀಡಿದೆ. ಮಲಾವಿ  ಉಪಾಧ್ಯಕ್ಷ ಸೌಲೋಸ್ ಚಿಲಿಮಾ, ಮಾಜಿ ಪ್ರಥಮ ಮಹಿಳೆ ಶನಿಲ್ ಡಿಜಿಂಬಿರಿ ಮತ್ತು ಚಿಲಿಮಾ ಅವರ ಪತ್ನಿ ಮೇರಿ ಸೇರಿ ಇತರ ಎಂಟು ಜನರನ್ನು ಹೊತ್ತ ವಿಮಾನವು ರಾಜಧಾನಿಯಿಂದ ಹೊರಟಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಏರ್ ಟ್ರಾಫಿಕ್ ಕಂಟ್ರೋಲ್ ಪೈಲಟ್‌ಗಳಿಗೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಬೇಡಿ ಎಂದು ಸಿಗ್ನಲ್‌ ನೀಡಿದ್ದರು. ಆ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನದ ಸಂಪರ್ಕವನ್ನು ಕಳೆದುಕೊಂಡಿದೆ ಮತ್ತು ಸ್ವಲ್ಪ ಸಮಯದ ನಂತರ ಅದು ರಾಡಾರ್‌ನಿಂದ ಕಣ್ಮರೆಯಾಗಿದೆ ಎಂದು ಹೇಳಿಕೊಂಡಿದೆ.

ಚಿಲಿಮಾ ಅವರು ಮಲಾವಿಯಲ್ಲಿ 2014ರಿಂದ ಉಪಾಧ್ಯಕ್ಷರಾಗಿದ್ದರು. ಫೆಬ್ರವರಿ 12, 1973ರಂದು ಜನಿಸಿದ ಚಿಲಿಮಾ ಅವರು ಬೋಲ್ಟನ್ ವಿಶ್ವವಿದ್ಯಾನಿಲಯದಿಂದ  ಪಿಎಚ್‌ಡಿ ಪದವಿ ಪಡೆದುಕೊಂಡಿದ್ದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಮತ್ತು ಅರ್ಥಶಾಸ್ತ್ರದಲ್ಲಿ ಮಲಾವಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 2020ರಲ್ಲಿ ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಕಳೆದ ತಿಂಗಳು, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದೊಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು.

ಇದನ್ನು ಓದಿ: ಮಲಾವಿ ದೇಶದ ಉಪಾಧ್ಯಕ್ಷರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಮೃತದೇಹಗಳು ಇಂದು ಕೇರಳಕ್ಕೆ ಆಗಮನ

0
ಎರಡು ದಿನಗಳ ಹಿಂದೆ ಗಲ್ಫ್ ದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11...