Homeಮುಖಪುಟಮಮತಾ ಬ್ಯಾನರ್ಜಿ ಬಿಜೆಪಿಗೆ ಹೆದರುತ್ತಿದ್ದಾರೆ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

ಮಮತಾ ಬ್ಯಾನರ್ಜಿ ಬಿಜೆಪಿಗೆ ಹೆದರುತ್ತಿದ್ದಾರೆ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

- Advertisement -
- Advertisement -

ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹಳೆಯ ಪಕ್ಷವು 40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

‘ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಬರುವುದನ್ನು ಬಿಜೆಪಿ ಅಥವಾ ಮಮತಾ ಬ್ಯಾನರ್ಜಿ ಬಯಸುವುದಿಲ್ಲ. ಇಂಡಿಯಾ ಬ್ಲಾಕ್‌ನ ನಾಯಕರೊಬ್ಬರು ಈ ರೀತಿ ಹೇಳಿದರೆ ಅದು ದುರಾದೃಷ್ಟಕರ. ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದಾರೆ. ಆದರೆ, ಅವರು ಬಿಜೆಪಿಗೆ ಹೆದರುತ್ತಾರೆ; ಆದ್ದರಿಂದ ಅವರು ತಮ್ಮ ನಿಲುವನ್ನು ಬದಲಾಯಿಸುತ್ತಿದ್ದಾರೆ’ ಎಂದು ಬಂಗಾಳ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಚೌಧರಿ ಅವರು ಮುರ್ಷಿದಾಬಾದ್‌ನಲ್ಲಿ ಹೇಳಿದರು.

‘ಕಾಂಗ್ರೆಸ್ ಮುಗಿಯಿತು, ಕಾಂಗ್ರೆಸ್ ಏನೂ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಗೆ ಪ್ರತಿಧ್ವನಿಸಿದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ 40 ಸ್ಥಾನ ಪಡೆದರೂ ಸಾಕು ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ ಎಂದು ಹೇಳಿದರೆ, ಮಮತಾ ಬ್ಯಾನರ್ಜಿ ಕೂಡ ಅದನ್ನೇ ಹೇಳುತ್ತಾರೆ’ ಎಂದು ಅವರು ಬಿಜೆಪಿ-ಟಿಎಂಸಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿ ಮತ್ತು ದೀದಿ ಏಕೆ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ?… ನಿಮಗೆ (ಮಮತಾ ಬ್ಯಾನರ್ಜಿ) ರಾಜ್ಯ ನಂತರ. ಆದರೆ, ರಾಹುಲ್ ಗಾಂಧಿ ಅವರಿಗೆ ದೇಶ ಮೊದಲು, ಉಳಿದೆಲ್ಲವೂ ನಂತರ…” ಎಂದು ಹೇಳಿದರು.

‘ನಿಮಗೆ ಧೈರ್ಯವಿದ್ದರೆ, ಯುಪಿ, ಬನಾರಸ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ’ ಎಂದು ಟಿಎಂಸಿ ರಾಜ್ಯದ ಎಲ್ಲಾ 42 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಘೋಷಿಸಿದ ನಂತರ ಸವಾಲು ಹಾಕಿದ್ದಾರೆ.

ಸಿಪಿಎಂ ಪಕ್ಷವನ್ನು ಎಂದಿಗೂ ಕ್ಷಮಿಸುವುದಿಲ್ಲ

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಇಂಡಿಯಾ ಮಿತ್ರಪಕ್ಷಗಳಾದ ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿವೆ. ಮಮತಾ ಬ್ಯಾನರ್ಜಿ ಅವರು 2011 ರಲ್ಲಿ ತಮ್ಮ ಪಕ್ಷದಿಂದ ಸೋಲಿಸುವ ಮೊದಲು 34 ವರ್ಷಗಳ ಕಾಲ ಬಂಗಾಳವನ್ನು ಆಳಿದ ಸಿಪಿಎಂ ನೇತೃತ್ವದ ಎಡಪಕ್ಷಗಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವವರೆಗೆ ಕಾಂಗ್ರೆಸ್‌ನೊಂದಿಗೆ ಒಂದೇ ಒಂದು ಸ್ಥಾನವನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

‘ನಾನು ಅವರಿಗೆ (ಕಾಂಗ್ರೆಸ್) ಒಂದು ಸ್ಥಾನವನ್ನೂ ಬಿಡುವುದಿಲ್ಲ ಎಂದು ಹೇಳಿದ್ದೆ. ಮೊದಲು ಸಿಪಿಐ(ಎಂ) ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ನಾನು ಅವರನ್ನು ಕೇಳಿದೆ. ಸಿಪಿಐ(ಎಂ) ನಮ್ಮ ಕಾರ್ಯಕರ್ತರನ್ನು ಹೇಗೆ ಹಿಂಸಿಸಿತ್ತು ಎಂಬುದನ್ನು ನಾನು ಮರೆತಿಲ್ಲ’ ಎಂದು ಮಮತಾ ಹೇಳಿದ್ದರು.

ಇದನ್ನೂ ಓದಿ; ಬಿಜೆಪಿ ಪರ ಪ್ರಚಾರಕ್ಕೆ ತೆರಳಲು ಸಾರ್ವಜನಿಕ ಬೊಕ್ಕಸದ ಕೋಟ್ಯಾಂತರ ರೂ. ಹಣ ಬಳಸಿದ ಅಸ್ಸಾಂ ಸಿಎಂ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...