Homeಮುಖಪುಟಮಣಿಪುರ: ‘ಒಂದೇ ಸಭಾಂಗಣದಲ್ಲಿ 500 ಜನರು, ಸ್ನಾನಗೃಹವಿಲ್ಲ,’ -ಹೃದಯ ವಿದ್ರಾವಕವಾಗಿವೆ ಶಿಬಿರಗಳು; INDIA ನಿಯೋಗ

ಮಣಿಪುರ: ‘ಒಂದೇ ಸಭಾಂಗಣದಲ್ಲಿ 500 ಜನರು, ಸ್ನಾನಗೃಹವಿಲ್ಲ,’ -ಹೃದಯ ವಿದ್ರಾವಕವಾಗಿವೆ ಶಿಬಿರಗಳು; INDIA ನಿಯೋಗ

- Advertisement -
- Advertisement -

ಮಣಿಪುರದಲ್ಲಿ ನಡೆದ ಹಿಂಸಾಚಾರದಿಂದಾಗಿ ನಿರಾಶ್ರಿತರಾಗಿರುವ ಜನರು ಸರ್ಕಾರ ಮಂಜೂರು ಮಾಡಿದ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಅಲ್ಲಿಯ ಜನರು ವಿರೋಧ ಪಕ್ಷಗಳ ಒಕ್ಕೂಟ INDIAದ ನಿಯೋಗದ ಎದುರು ನೋವು ತೋಡಿಕೊಂಡಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡಿರುವ INDIAದ ನಿಯೋಗದ ಪರವಾಗಿ ಮಾತನಾಡಿದ ಕಾಂಗ್ರೆಸ್ ಸಂಸದೆ ಫುಲೋದೇವಿ ನೇತಂ ಅವರು, ”…ಒಂದು ಸಭಾಂಗಣದಲ್ಲಿ 400-500 ಜನರು ತಂಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ದಾಲ್-ಚವಾಲ್ ನೀಡುತ್ತಿದೆ, ಮಕ್ಕಳಿಗೆ ಇಡೀ ದಿನ ತಿನ್ನಲು ಬೇರೆ ಏನೂ ಸಿಗುತ್ತಿಲ್ಲ. ಶೌಚಾಲಯ ಅಥವಾ ಸ್ನಾನದ ವ್ಯವಸ್ಥೆ ಇಲ್ಲ. ಶಿಬಿರಗಳಲ್ಲಿ ಜನರು ವಾಸಿಸುವ ರೀತಿ ತುಂಬಾ ಹೃದಯ ವಿದ್ರಾವಕವಾಗಿದೆ … ”

”ರಾಜ್ಯವು ಶಾಂತಿಯುತವಾಗಿದೆ ಎಂಬ ಸರ್ಕಾರದ ಹೇಳಿಕೆ ನಿಜವಾಗಿದ್ದರೆ, ಕಳೆದ ಮೂರು ತಿಂಗಳಿನಿಂದ ಬಂದಿರುವ ಪರಿಹಾರ ಶಿಬಿರಗಳನ್ನು ನಡೆಸುವ ಅಗತ್ಯವೇನು?” ಎಂದು ಅವರು ಪ್ರಶ್ನಿಸಿದ್ದಾರೆ.

ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಜನಾಂಗೀಯ ಗಲಭೆಗಳ ಸಂತ್ರಸ್ತರನ್ನು ಭೇಟಿ ಮಾಡಲು 21 ಸಂಸದರ ಪ್ರತಿಪಕ್ಷಗಳ ನಿಯೋಗ ಶನಿವಾರ ಮಣಿಪುರಕ್ಕೆ ಆಗಮಿಸಿದೆ. ಭಾನುವಾರ ಅವರು ರಾಜಭವನದಲ್ಲಿ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಿ ತಮ್ಮ ಅವಲೋಕನಗಳ ಕುರಿತು ಜ್ಞಾಪಕ ಪತ್ರವನ್ನು ಸಲ್ಲಿಸಿದರು.

ಸಭೆಯ ನಂತರ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ”ಮಣಿಪುರ ಜನಾಂಗೀಯ ಸಂಘರ್ಷವನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಅದು ದೇಶಕ್ಕೆ ಭದ್ರತಾ ಸಮಸ್ಯೆಗಳನ್ನು ಉಂಟುಮಾಡಬಹುದು” ಎಂದು ಪ್ರತಿಪಾದಿಸಿದರು.

”ರಾಜ್ಯಪಾಲರು ನಮ್ಮ ಅವಲೋಕನಗಳನ್ನು ಆಲಿಸಿದರು ಮತ್ತು ಅದಕ್ಕೆ ಸಮ್ಮತಿಸಿದರು. ಅವರು ಹಿಂಸಾಚಾರದ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಮತ್ತು ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಜನರೊಂದಿಗೆ ಮಾತನಾಡಲು ಸರ್ವಪಕ್ಷಗಳ ನಿಯೋಗ ಮಣಿಪುರಕ್ಕೆ ಭೇಟಿ ನೀಡಬೇಕು” ಎಂದು ಅವರು ಹೇಳಿದರು.

ಭೇಟಿ ನೀಡುವ ಸಂಸದರು ಮಣಿಪುರದ ಬಗ್ಗೆ ತಮ್ಮ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ಚೌಧರಿ ಹೇಳಿದರು.

ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಮಣಿಪುರ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದರು.

ಮಣಿಪುರದ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಹೇಯ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಯುದ್ಧವೇ ನಡೆಯಿತು. ಈ ವಿಚಾರವಾಗಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದರು. ಆದರೆ ಪ್ರಧಾನಿ ಮಾತ್ರ ಸಂಸತ್ತಿನಲ್ಲಿ ಮಾತನಾಡಲು ನಿರಾಕರಿಸಿದರು. ಹಾಗಾಗಿ ಕಲಾಪಕ್ಕೆ ಅಡಚಣೆಗಳು ಮತ್ತು ಮುಂದೂಡಿಕೆಗಳು ಹೆಚ್ಚಾದವು..

ಇದನ್ನೂ ಓದಿ: ಮಹಿಳೆಯರ ಬೆತ್ತಲೆ ಮೆರವಣಿಗೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಧೃತರಾಷ್ಟ್ರನಂತೆ ಕುರುಡಾಗಿದೆ: ಉದ್ಭವ್ ಠಾಕ್ರೆ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...