Homeಮುಖಪುಟಮಣಿಪುರ ಕ್ರೌರ್ಯ: ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ

ಮಣಿಪುರ ಕ್ರೌರ್ಯ: ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ

- Advertisement -
- Advertisement -

ಮೇ 4 ರಂದು ಮಣಿಪುರದಲ್ಲಿ ನಡೆದಿರುವ ಇಬ್ಬರು ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಘಟನೆಯ ವಿಡಿಯೋಗಳು ದೇಶವನ್ನೇ ತಲ್ಲಣಗೊಳಿಸಿವೆ. ಆ ಹೀನ ಘಟನೆಯ ನಂತರವೂ ಇಂಫಾಲ ಜಿಲ್ಲೆಯಲ್ಲಿ ಮತ್ತಿಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈಯಲಾಗಿದೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಆದರೆ ಈ ಸಂಬಂಧ ಯಾವುದೇ ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿಲ್ಲ. ಎಲ್ಲೆ ಇಲ್ಲದೆ ನಡೆದ ಈ ಮಣಿಪುರದ ಕ್ರೌರ್ಯದ ವಿವರಗಳು ಗೊತ್ತಿದ್ದರೂ ಮಣಿಪುರ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಕ್ರಮ ತೆಗೆದುಕೊಳ್ಳದೇ ಇರುವುದು ದೊಡ್ಡ ದುರಂತವಾಗಿದೆ.

ಈ ಅಮಾನುಷ ಘಟನೆಗಳು ಒಂದು ಗಂಟೆಯ ಅಂತರದಲ್ಲಿ ನಡೆದಿದ್ದು ಸಂತ್ರಸ್ತರು ಕುಕಿ ಸಮುದಾಯದವರಾಗಿದ್ದರೆ, ಆರೋಪಿಗಳು ಮೈತೇಯಿ ಸಮುದಾಯಕ್ಕೆ ಸೇರಿದವರು ಎಂದು ಎಫ್‌ಐಆರ್ ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬೆತ್ತಲೆ ಪ್ರಕರಣದ 30 ಸೆಕೆಂಡ್‌ಗಳ ಅಮಾನವೀಯ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಮೇಲೆ 77 ದಿನಗಳ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಇಂಫಾಲ ಜಿಲ್ಲೆಯ ಅತ್ಯಾಚಾರ, ಕೊಲೆಯ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಎನ್ನಲಾಗಿದೆ.

ಇಂಫಾಲ್‌ನಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಇಬ್ಬರು ಮಹಿಳೆಯರು 21 ಮತ್ತು 24 ವರ್ಷ ವಯಸ್ಸಿನ ಸಹೋದರಿಯರಾಗಿದ್ದು, ನಗರದ ಕಾರ್‌ವಾಶ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಅವರ ಮನೆಗೆ ನುಗ್ಗಿ ಕೊಲ್ಲುವ ಮೊದಲು ಅತ್ಯಾಚಾರ ನಡೆಸಿತು ಅವರ ತಂದೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

“ನಾವು ಕುಕಿ ಸಮುದಾಯದವರು. ನನ್ನ ಹಿರಿಯ ಮಗಳ ಸ್ನೇಹಿತೆ ಮೈತೇಯಿ ಸಮುದಾಯಕ್ಕೆ ಸೇರಿದ್ದು, ಆಕೆ ಪುರುಷರು ಮತ್ತು ಮಹಿಳೆಯರ ಗುಂಪೊಂದು ಅವರ ಮನೆಗೆ ನುಗ್ಗಿ ಅವರನ್ನು ಹತ್ಯೆ ಮಾಡಿದೆ ಎಂದು ನಮಗೆ ತಿಳಿಸಿಳು. ನಾನು ಪೊಲೀಸ್ ಅಧಿಕಾರಿಯೊಂದಿಗೆ ಶವಾಗಾರಕ್ಕೆ ಹೋದೆ. ಅಲ್ಲಿ ನನ್ನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ದೂರು ದಾಖಲಿಸಿದ್ದೇನೆ. ಪೊಲೀಸರು ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನನಗೆ ಮಾಹಿತಿ ನೀಡಿಲ್ಲ. ತನಿಖೆಗಾಗಿ ದೇಹಗಳನ್ನು ಸಂರಕ್ಷಿಸಲಾಗಿದೆ ಎಂದು ಅವರು ಹೇಳಿದರು” ಎಂದು ಸಂತ್ರಸ್ತರ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಅಪರಾಧವು ಮೇ 4 ರಂದು ಇಂಫಾಲ್‌ನ ಮೈತೇಯಿ ಪ್ರಾಬಲ್ಯದ ಕೊನುಂಗ್ ಮನಂಗ್ ಪ್ರದೇಶದಲ್ಲಿ ಅವರ ಮನೆಯಲ್ಲಿ ನಡೆದಿದೆ. ಸುಮಾರು 100-200 ಜನಸಮೂಹವು ಮೈತೇಯಿ ಯುವ ಸಂಘಟನೆಗಳಾದ ಮೀಟೆ ಲೀಪುನ್, ಕಂಗ್ಲೇಪಕ್ ಕನ್ಬಾ ಲುಪ್ (ಕೆಕೆಎಲ್), ಅರಾಂಬೈ ತೆಂಗೋಲ್ ಮತ್ತು ವರ್ಲ್ಡ್ ಮೈಟೈ ಕೌನ್ಸಿಲ್‌ನ ಸದಸ್ಯರೆಂದು ಶಂಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿ-ಭದ್ರತೆ ಸ್ಥಾಪಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿರಲು ಹಕ್ಕಿಲ್ಲ: ಮೋದಿ ಹಳೆಯ ಟ್ವೀಟ್ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...