Homeಮುಖಪುಟಮಣಿಪುರ ಹಿಂಸಾಚಾರ: ಅಪ್ರಚೋದಿತ ಗುಂಡಿನ ದಾಳಿ; ಯೋಧನಿಗೆ ಗಾಯ

ಮಣಿಪುರ ಹಿಂಸಾಚಾರ: ಅಪ್ರಚೋದಿತ ಗುಂಡಿನ ದಾಳಿ; ಯೋಧನಿಗೆ ಗಾಯ

- Advertisement -
- Advertisement -

ಹಿಂಸಾಚಾರ ಪೀಡಿತ ಮಣಿಪುರದ ಚಿಂಗ್‌ಮಾಂಗ್ ಗ್ರಾಮದ ಕಡೆಗೆ ಜೂನ್ 18 ಮತ್ತು 19 ರ ಮಧ್ಯರಾತ್ರಿಯಲ್ಲಿ  ಸಶಸ್ತ್ರ ದುಷ್ಕರ್ಮಿಗಳು ಕಾಂಟೋ ಸಬಲ್‌ನಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದರಿಂದ ಭಾರತೀಯ ಸೇನೆಯ ಸಿಬ್ಬಂದಿಗೆ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಗಾಯಗೊಂಡ ಸಿಬ್ಬಂದಿಯನ್ನು ಲೀಮಾಖೋಂಗ್‌ನ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಗ್ರಾಮಸ್ಥರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇನಾ ತಂಡಗಳು ಪ್ರತೀಕಾರದ ಗುಂಡಿನ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿವೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಣಿಪುರದಲ್ಲಿ ಮೈತಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರ ಆರಂಭವಾಗಿ 45 ದಿನಗಳು ಉರುಳಿದರೂ ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಸಧ್ಯ ರಾಜ್ಯದಲ್ಲಿ ಕರ್ಫ್ಯೂ ಸಡಿಲಿಸಲು ಅಧಿಕಾರಿಗಳು ನಿರ್ಧರಿಸಿದ ನಂತರ ಈ ಘಟನೆ ನಡೆದಿದೆ.

ಭದ್ರತಾ ಪಡೆಗಳು ಇನ್ನೂ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಬಿಗಿಯಾದ ಜಾಗರೂಕತೆಯನ್ನು ನಿರ್ವಹಿಸುತ್ತಿವೆ ಮತ್ತು ಭಾರತೀಯ ಸೇನೆಯು ಇಂಫಾಲ್ ಕಣಿವೆಯಲ್ಲಿ ಭಾನುವಾರ ಧ್ವಜ ಮೆರವಣಿಗೆಯನ್ನು ನಡೆಸಿತು.

ಇದನ್ನೂ ಓದಿ: ಮಣಿಪುರದಲ್ಲಿ ಹೆಚ್ಚಾದ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ!

ಈ ಹಿಂಸಾಚಾರದಿಂದ ಇಲ್ಲಿಯವರೆಗೆ 115 ಜನರು ಪ್ರಾಣ ಕಳೆದುಕೊಂಡಿದ್ದು, 60 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಸಚಿವರ ಮನೆಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಶಾಂತಿ ಪುನರ್ ಸ್ಥಾಪನೆಗೆ ಭಾರತೀಯ ಸೇನೆ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಸಂಘರ್ಷ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ.

ಮತ್ತೊಂದೆಡೆ ಕೇಂದ್ರ ಮತ್ತು ಮಣಿಪುರದ ಬಿಜೆಪಿ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಳ್ಳುವ ಸಂಬಂಧ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತಿವೆ. ಇದರ ಭಾಗವಾಗಿಯೇ ಮೈತೇಯಿ ಮತ್ತು ಕುಕಿ ಸಮುದಾಯದ ಬೇಡಿಕೆ ಈಡೇರಿಸುವುದಾಗಿ ಹೇಳಿದರೂ ಶಾಂತಿ ಸ್ಥಾಪನೆಯು ಮರೀಚಿಕೆಯಾಗಿದೆ.

ನೆರೆಯ ಈಶಾನ್ಯ ರಾಜ್ಯಗಳು ನಿರಾಶ್ರಿತರಿಗೆ ಆಶ್ರಯ ಪಡೆಯಲು ಸಹಾಯ ಮಾಡುತ್ತಿವೆ. ತಮ್ಮ ಯೋಗಕ್ಷೇಮ ಮತ್ತು ಭದ್ರತೆಗೆ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಮಣಿಪುರದ ಹಿಂಸಾಚಾರದ ಸುತ್ತಲಿನ ರಾಜಕೀಯವು ತೀವ್ರಗೊಳ್ಳುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ನಾಯಕರು ಸರ್ಕಾರವನ್ನು ದೂಷಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಹಲವು ಬಾರಿ ಪ್ರವಾಸ ಕೈಗೊಂಡಿದ್ದು, ಹಿಂಸಾಚಾರದ ಘಟನೆಯ ತನಿಖೆಗೆ ಸಮಿತಿಗಳನ್ನು ಕೂಡ ರಚಿಸಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕಲು ಸುಮಾರು 40,000 ಕೇಂದ್ರ ಭದ್ರತಾ ಪಡೆಗಳು ಮಣಿಪುರ ಪೊಲೀಸರಿಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಸಚಿವಾಲಯ ದೃಢಪಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read