Homeಮುಖಪುಟಮದುವೆಯಲ್ಲಿ ನೀಡುವ ಉಡುಗೊರೆಗಳು ವರದಕ್ಷಿಣೆಯಲ್ಲ: ಕೇರಳ ಹೈಕೋರ್ಟ್

ಮದುವೆಯಲ್ಲಿ ನೀಡುವ ಉಡುಗೊರೆಗಳು ವರದಕ್ಷಿಣೆಯಲ್ಲ: ಕೇರಳ ಹೈಕೋರ್ಟ್

- Advertisement -
- Advertisement -

ವರದಕ್ಷಿಣೆ ನಿಷೇಧ ಕಾಯಿದೆ-1961ರ ಅಡಿಯಲ್ಲಿ ವಧುವಿನ ಒಳಿತಿಗಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.

“ಮದುವೆಯ ಸಮಯದಲ್ಲಿ ವಧುವಿಗೆ ಯಾವುದೇ ಬೇಡಿಕೆಯಿಲ್ಲದೆ ನೀಡಿದ ಉಡುಗೊರೆಗಳು ಮತ್ತು ಈ ಕಾಯಿದೆಯಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಲಾದ ಪಟ್ಟಿಯಲ್ಲಿ ನಮೂದಿಸಲಾದ ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದನ್ನು ನಿಷೇಧಿಸುವ ಸೆಕ್ಷನ್ 3 (1) ರ ವ್ಯಾಪ್ತಿಯಲ್ಲಿ ಬರುವುದಿಲ್ಲ” ಎಂದು ನ್ಯಾಯಮೂರ್ತಿ ಎಂ.ಆರ್. ಅನಿತಾ ಹೇಳಿದ್ದಾರೆ.

ಇದನ್ನೂ ಓದಿ:ವರದಕ್ಷಿಣೆ ಅನಿಷ್ಟ ಕೊನೆಗೊಳಿಸಲು ಕಾನೂನುಗಳಿದ್ದರೂ ಕೂಡ, ಜನರು ತಮ್ಮೊಳಗೆ ಬದಲಾಗಬೇಕು: ಸುಪ್ರೀಂಕೋರ್ಟ್

ಕೊಲ್ಲಂನ ವರದಕ್ಷಿಣೆ ನಿಷೇಧ ಅಧಿಕಾರಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಕೇರಳ ಹೈಕೋರ್ಟ್‌ನ ತೀರ್ಪು ಈ ನೀಡಿದೆ. ಕೊಲ್ಲಂ ನಿವಾಸಿಯಾಗಿರುವ ಅರ್ಜಿದಾರರೊಬ್ಬರಿಗೆ ಅವರ ಪತ್ನಿಯ ಕುಟುಂಬದವರು ಉಡುಗೊರೆಯಾಗಿ ನೀಡಿದ ಆಭರಣಗಳನ್ನು ಮತ್ತೇ ಅವರಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿತ್ತು.

ದಂಪತಿಯ ಹೆಸರಿನಲ್ಲಿ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿತ್ತು. ಪತಿಯೊಂದಿಗೆ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ಪತ್ನಿ ವರದಕ್ಷಿಣೆ ನಿಷೇಧ ಅಧಿಕಾರಿಯನ್ನು ಸಂಪರ್ಕಿಸಿದ್ದರು ಮತ್ತು ಎಲ್ಲಾ ಉಡುಗೊರೆಗಳನ್ನು ಹಿಂತಿರುಗಿಸಲು ಒತ್ತಾಯಿಸಿದ್ದರು.

ಆಭರಣಗಳು ಅಥವಾ ಉಡುಗೊರೆಗಳು ವರದಕ್ಷಿಣೆಯಾಗಿದ್ದರೆ ಮಾತ್ರ ಅಂತಹ ಆದೇಶವನ್ನು ಹೊರಡಿಸಲು ವರದಕ್ಷಿಣೆ ನಿಷೇಧ ಅಧಿಕಾರಿಗೆ ಅಧಿಕಾರವಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಉಡುಗೊರೆಗಳು ವರದಕ್ಷಿಣೆ ಅಲ್ಲ ಎಂದು ಹೇಳಿದೆ.

ಇದನ್ನೂ ಓದಿ:ವರದಕ್ಷಿಣೆ ಕಿರುಕುಳ ಪರಿಶೀಲನೆಗೆ ಕರಡು ಮಸೂದೆ ಸಲ್ಲಿಸಿದ ಕೇರಳ ಮಹಿಳಾ ಆಯೋಗ

ಆದರೆ, ವಿಷಯ ಇತ್ಯರ್ಥವಾಗಿದ್ದು, ಆಭರಣಗಳನ್ನು ಹಿಂದಿರುಗಿಸಲು ಅರ್ಜಿದಾರರು ಒಪ್ಪಿದ ನಂತರವೇ ಅರ್ಜಿಯ ವಿಚಾರಣೆ ನಡೆಯಿತು.

2021 ರಲ್ಲಿ, ಕೇರಳ ಸರ್ಕಾರವು ವರದಕ್ಷಿಣೆ ನಿಷೇಧ ಕಾನೂನನ್ನು ತಿದ್ದುಪಡಿ ಮಾಡಿತ್ತು ಮತ್ತು ರಾಜ್ಯದಲ್ಲಿ ವರದಕ್ಷಿಣೆ-ಸಂಬಂಧಿತ ಕಿರುಕುಳ ಮತ್ತು ಅಪರಾಧವನ್ನು ತಡೆಗಟ್ಟಲು ಜಿಲ್ಲೆಗಳಲ್ಲಿ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಿಸಿತ್ತು.

ಮದುವೆ ಸಮಾರಂಭದಲ್ಲಿ ನೀಡಿದ ಬೆಲೆಬಾಳುವ ವಸ್ತುಗಳನ್ನು ಮೂರು ತಿಂಗಳೊಳಗೆ ಮಹಿಳೆಗೆ ವರ್ಗಾಯಿಸಬೇಕು ಎಂದು ಈ ಕಾನೂನು ಆದೇಶಿಸುತ್ತದೆ.

ವರನ ಕುಟುಂಬವು ವರದಕ್ಷಿಣೆಗೆ ಬೇಡಿಕೆಯಿಟ್ಟು, ತಮ್ಮ ಬೇಡಿಕೆ ಪೂರೈಸದಿದ್ದರೆ ಮದುವೆ ನಿಲ್ಲಿಸುವುದಾಗಿ ಬೆದರಿಸುವ ಪ್ರಕರಣಗಳನ್ನು ಸಹ ಈ ಅಧಿಕಾರಿಗಳು ಪರಿಶೀಲಿಸುತ್ತಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ಅವರ ಜಿಲ್ಲೆಗಳಲ್ಲಿ ವರದಕ್ಷಿಣೆ ನಿಷೇಧ ಅಧಿಕಾರಿಗಳಂತೆ ಕಾರ್ಯನಿರ್ವಹಿಸುವ ಅಧಿಕಾರವನ್ನು ನೀಡಲಾಗಿದೆ.

ಇದನ್ನೂ ಓದಿ:ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...