HomeUncategorizedಗಾಝಾದಲ್ಲಿನ ಪತ್ರಕರ್ತರಿಗೆ ಒಗ್ಗಟ್ಟು ಪ್ರದರ್ಶಿಸಿ ಪತ್ರ ಬರೆದ ಮಾದ್ಯಮ ಸಂಸ್ಥೆಗಳು

ಗಾಝಾದಲ್ಲಿನ ಪತ್ರಕರ್ತರಿಗೆ ಒಗ್ಗಟ್ಟು ಪ್ರದರ್ಶಿಸಿ ಪತ್ರ ಬರೆದ ಮಾದ್ಯಮ ಸಂಸ್ಥೆಗಳು

- Advertisement -
- Advertisement -

ಗಾಝಾದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿ 30ಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳು ಪತ್ರಬರೆದಿದ್ದು, ಪತ್ರಕರ್ತರ ರಕ್ಷಣೆ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಕರೆ ನೀಡಿವೆ.

ಪತ್ರಕರ್ತರನ್ನು ರಕ್ಷಿಸುವ ಸಮಿತಿಯ(CPJ) ಪತ್ರಕ್ಕೆ ಜಾಗತಿಕ ಸುದ್ದಿ ಸಂಸ್ಥೆಗಳಾದ AFP, AP ಮತ್ತು ರಾಯಿಟರ್ಸ್ ಮತ್ತು ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, BBC ನ್ಯೂಸ್ ಮತ್ತು ಇಸ್ರೇಲ್‌ನ ಹಾರೆಟ್ಜ್ ಸೇರಿದಂತೆ ಇತರ ಪ್ರಮುಖ 36ಕ್ಕೂ ಅಧಿಕ ಸುದ್ದಿ ಮಾಧ್ಯಮಗಳು ಸಹಿ ಹಾಕಿ ಒಗ್ಗಟ್ಟನ್ನು ಪ್ರದರ್ಶಿಸಿದೆ.

ಇಸ್ರೇಲ್‌- ಹಮಾಸ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಸುಮಾರು ಐದು ತಿಂಗಳಿನಿಂದ ಗಾಝಾದಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಭೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಸಿಪಿಜೆ ಪ್ರಕಾರ, ಗಾಜಾದಲ್ಲಿ ಕನಿಷ್ಠ 89 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ಪ್ಯಾಲೆಸ್ತೀನ್‌ ಪತ್ರಕರ್ತರು ಎನ್ನುವುದನ್ನು ಇಸ್ರೇಲ್‌ ಬಹಿರಂಗಪಡಿಸಿದೆ.

AFP ಪ್ರಕಾರ, ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,160 ಜನರು ಮೃತಪಟ್ಟಿದ್ದಾರೆ. ಗಾಝಾ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲ್‌ ನಡೆಸಿದ ಹತ್ಯಾಕಾಂಡಕ್ಕೆ ಗಾಝಾದಲ್ಲಿ 30,035 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಪತ್ರಕರ್ತರು ನಾಗರಿಕರಾಗಿದ್ದಾರೆ. ಇಸ್ರೇಲ್‌ ಅಧಿಕಾರಿಗಳು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಪತ್ರಕರ್ತರನ್ನು ಯುದ್ಧೇತರರಾಗಿ ರಕ್ಷಿಸಬೇಕು ಎಂದು ಪತ್ರವು ಹೇಳಿದ್ದು, ಪತ್ರಕ್ಕೆ ಅಸೋಸಿಯೇಷನ್ ​​ಫಾರ್ ಇಂಟರ್ನ್ಯಾಷನಲ್ ಬ್ರಾಡ್‌ಕಾಸ್ಟರ್ಸ್ ಮತ್ತು ವರ್ಲ್ಡ್ ಅಸೋಸಿಯೇಶನ್ ಆಫ್ ನ್ಯೂಸ್ ಪೇಪರ್ಸ್ ಮತ್ತು ನ್ಯೂಸ್ ಪಬ್ಲಿಷರ್ಸ್ (WAN-IFRA) ಸಹಿ ಮಾಡಿದೆ. ದೀರ್ಘಕಾಲದ ಯಾವುದೇ ಕಾನೂನು ಉಲ್ಲಂಘನೆಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಒಗ್ಗಟ್ಟಿನ ಪ್ರದರ್ಶನದಲ್ಲಿ ಹೆಚ್ಚಿನ ಸಂಸ್ಥೆಗಳು ಭಾಗವಹಿಸಲು ಸ್ವಾಗತಾರ್ಹ ಎಂದು ಸಿಪಿಜೆಯ ಮುಖ್ಯ ಕಾರ್ಯನಿರ್ವಾಹಕ ಗಿನ್ಸ್‌ಬರ್ಗ್ ಹೇಳಿದ್ದಾರೆ. ಅಂತರಾಷ್ಟ್ರೀಯ ಪತ್ರಿಕಾ ಸಮುದಾಯ ನಮ್ಮ ಪ್ಯಾಲೆಸ್ತೀನ್‌  ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ನಾವು ತೋರಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಪತ್ರದಲ್ಲಿ ಇಸ್ರೇಲ್‌ನ್ನು ಒಮ್ಮೆ ಮಾತ್ರ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಪ್ರವೇಶ ಅವಕಾಶಕ್ಕೆ  ಸಿಪಿಜೆ ಪ್ರತಿಪಾದಿಸಿದ್ದು, ಈ ವಿಚಾರದಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಗಿನ್ಸ್‌ಬರ್ಗ್ ಹೇಳಿದ್ದಾರೆ.

ಇದನ್ನು ಓದಿ: FACT CHECK: ಬಿಜೆಪಿ ಆರೋಪಿಸಿದಂತೆ ‘ಹಿಂದೂ ದೇವಾಲಯಗಳ ಹಣ’ವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಳಸಲಾಗುತ್ತಿದೆಯಾ? ‘ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ’ ಕುರಿತ ವಾಸ್ತವಾಂಶಗಳೇನು?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...