Homeರಂಜನೆಕ್ರೀಡೆವರ್ಡ್‌ಕಪ್‌ ಗೆಲುವಿನ ನಂತರ ನಿವೃತ್ತಿಯ ಯೋಚನೆಯಿಂದ ಹಿಂದೆ ಸರಿದ ಮೆಸ್ಸಿ

ವರ್ಡ್‌ಕಪ್‌ ಗೆಲುವಿನ ನಂತರ ನಿವೃತ್ತಿಯ ಯೋಚನೆಯಿಂದ ಹಿಂದೆ ಸರಿದ ಮೆಸ್ಸಿ

- Advertisement -
- Advertisement -

“ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯವೇ ನನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಬಹುದು” ಎಂದು ಹೇಳಿಕೊಂಡಿದ್ದ ಅರ್ಜೆಂಟೀನಾದ ಫುಲ್‌ಬಾಲ್‌ ಸ್ಟಾರ್‌‌ ಲಿಯೋನೆಲ್‌ ಮೆಸ್ಸಿಯವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಒಂದು ತಿಂಗಳ ಹಿಂದೆ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲಿನ ನಂತರ ಅರ್ಜೆಂಟೀನಾ 16ರ ಸುತ್ತಿಗೆ ಪ್ರವೇಶಿಸಲು ಹೋರಾಡುತ್ತಿತ್ತು. ಲಿಯೋನೆಲ್ ಮೆಸ್ಸಿಯವರು ತಮ್ಮ ಅಭಿಮಾನಿಗಳಿಗೆ ನಂಬಿಕೆ ಇಡುವಂತೆ ಮನವಿ ಮಾಡಿದ್ದರು. ಜೊತೆಗೆ ಫೈನಲ್‌ವರೆಗೂ ಅರ್ಜೆಂಟೀನಾವನ್ನು ಮುನ್ನಡೆಸಿ, ಫ್ರಾನ್ಸ್‌ ವಿರುದ್ಧ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಮೂರು ದಶಕಗಳ ನಂತರ ಅರ್ಜೆಂಟೀನಾಕ್ಕೆ ವಿಶ್ವಕಪ್ ದೊರೆತಿದೆ.

ಅರ್ಜೆಂಟೀನಾ ನಾಯಕ ಮೆಸ್ಸಿಯವರು ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಎರಡು ಬಾರಿ ಗೋಲು ಗಳಿಸಿದ್ದರು. ತಮ್ಮ ಅವಿಸ್ಮರಣೀಯ ಫಿಫಾ ಜರ್ನಿಯಲ್ಲಿ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟರು.

ವಿಶ್ವಕಪ್ ಫೈನಲ್ ಪಂದ್ಯಾವಳಿಯೇ ತನ್ನ ಕೊನೆಯ ಪ್ರದರ್ಶನ ಎಂದು ಮೆಸ್ಸಿ ಈ ಹಿಂದೆ ಎರಡು ಬಾರಿ ಸ್ಪಷ್ಟಪಡಿಸಿದ್ದರು. ಆದರೆ ಗೆಲುವಿನಿಂದ ಖುಷಿಯಾಗಿರುವ ಅರ್ಜೆಂಟೀನಾ ನಾಯಕ ತನ್ನ ನಿಲುವನ್ನು ಬದಲಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಕತಾರ್‌ನಲ್ಲಿ ವಿಶ್ವಕಪ್ ಪ್ರಾರಂಭವಾಗುವ ಮೊದಲು 35 ವರ್ಷದ ಮೆಸ್ಸಿಯವರು ಈ ಟೂರ್ನಿಯೇ ಅಂತಿಮ ಪ್ರದರ್ಶನ ಎಂದು ಹೇಳಿದ್ದರು. ಕಳೆದ ವಾರ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಕ್ರೊಯೇಷಿಯಾವನ್ನು ಸೋಲಿಸಿದ ನಂತರ ಇದೇ ಮಾತನ್ನು ಮತ್ತೆ ಹೇಳಿದ್ದರು.

ಆದಾಗ್ಯೂ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ತಮ್ಮ ಬಹು ಕಾಲದ ಕನಸು ನನಸಾದ ನಂತರ ಮೆಸ್ಸಿ, ಅರ್ಜೆಂಟೀನಾ ಪರ ಆಡುವುದನ್ನು ಮುಂದುವರಿಸುವುದಾಗಿ ಬಹಿರಂಗಪಡಿಸಿದ್ದಾರೆ.

“ಇದು ನಿಜಕ್ಕೂ ನಂಬಲಾಗದ ಸಂಗತಿ. ದೇವರು ನನಗೆ ಕಪ್ ನೀಡಲಿದ್ದಾನೆ ಎಂದು ನನಗೆ ತಿಳಿದಿತ್ತು. ನನಗೆ ಖಚಿತವಾಗಿತ್ತು – ಇದು ನಮಗೆ ದೊಡ್ಡ ಸಂತೋಷದ ಸಂಗತಿಯಾಗಿತ್ತು. ನಾನು ಬಹಳ ದಿನಗಳಿಂದ ಈ ದೊಡ್ಡ ಕನಸನ್ನು ಹೊಂದಿದ್ದೆ. ನಾನು ವಿಶ್ವಕಪ್‌ನೊಂದಿಗೆ ನನ್ನ ವೃತ್ತಿಜೀವನವನ್ನು ಕೊನೆಗಾಣಿಸಲು ಬಯಸಿದ್ದೆ. ಇದಕ್ಕಿಂತ ಹೆಚ್ಚಿನದನ್ನು ನಾನು ಕೇಳಲಾರೆ. ಇಲ್ಲ, ನಾನು ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದಲು ಹೋಗುವುದಿಲ್ಲ. ನಾನು ಅರ್ಜೆಂಟೀನಾ ಶರ್ಟ್‌ನೊಂದಿಗೆ ವಿಶ್ವಕಪ್ ಚಾಂಪಿಯನ್ ಆಗಿ ಆಡುವುದನ್ನು ಮುಂದುವರಿಸಲು ಬಯಸುತ್ತೇನೆ” ಎಂದಿದ್ದಾರೆ ಮೆಸ್ಸಿ. ಆ ಮೂಲಕ ಮತ್ತಷ್ಟು ಕಾಲ ಫುಟ್ಬಾಲ್‌ ಅಭಿಮಾನಿಗಳಿಗೆ ತಮ್ಮ ಕಾಲ್ಚಳಕವನ್ನು ಪ್ರದರ್ಶಿಸುವ ಸೂಚನೆ ನೀಡಿದ್ದಾರೆ.

ಪೆನಾಲ್ಟಿ ಶೂಟೌಟ್ ಮೂಲಕ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ವಿರುದ್ಧ ಗೆದ್ದಿತು. ಫೈನಲ್‌ನ ನಂತರ ಅರ್ಜೆಂಟೀನಾದ ಫುಟ್‌ಬಾಲ್ ಕೋಚ್ ಸ್ಕಾಲೋನಿ ಮಾತನಾಡಿ, “ಮೆಸ್ಸಿ ಇನ್ನೂ 2026ರಲ್ಲಿ ಮುಂದಿನ ವಿಶ್ವಕಪ್‌ವರೆಗೆ ಆಡಬಹುದು” ಎಂದಿದ್ದಾರೆ. ಅರ್ಜೆಂಟೀನಾ ನಾಯಕನಿಗೆ ಬಾಗಿಲು ತೆರೆದಿದ್ದು, ನಿರ್ಧಾರವನ್ನು ಅವರಿಗೆಯೇ ಬಿಟ್ಟಿದ್ದಾರೆ.

“ಅವರು (ಮೆಸ್ಸಿ) ಆಡಬೇಕೆಂದು ಭಾವಿಸಿದರೆ ಮುಂದಿನ ವಿಶ್ವಕಪ್‌ಗೆ ನಾವು 10ನೇ ಸಂಖ್ಯೆಯ ಜೆರ್ಸಿಯನ್ನು ಸಿದ್ಧಪಡಿಸಬೇಕು ಎಂದು ನಾನು ಭಾವಿಸುತ್ತೇನೆ. ನಾವು ಅವರನ್ನು ಮುಂದಿನ ವಿಶ್ವಕಪ್‌ಗೆ ಉಳಿಸಬೇಕಾಗಿದೆ. ಮೆಸ್ಸಿಯವರು ಆಟವಾಡಲು ಬಯಸಿದರೆ, ಅವರು ನಮ್ಮೊಂದಿಗೆ ಇರುತ್ತಾರೆ. ಅವರು ಈಗ ತಮ್ಮ ವೃತ್ತಿಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸಲು ಹೆಚ್ಚು ಅರ್ಹರಾಗಿದ್ದಾರೆ” ಎಂದಿದ್ದಾರೆ.

“ನಾನು ತುಂಬಾ ಹೆಮ್ಮೆಪಡುತ್ತೇನೆ. ವಿಶ್ವಕಪ್ ವಿಜೇತನಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾವು 90 ನಿಮಿಷಗಳಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಆದರೆ ಹೆಚ್ಚಿನ ಸಮಯ ತೆಗೆದುಕೊಂಡೆವು. ಆದರೆ ಹೋರಾಡಿ ಗೆದ್ದೆವು” ಎಂದಿದ್ದಾರೆ.

“ಈ ಆಟಗಾರರು ಜನರಿಗಾಗಿ ಆಡುತ್ತಾರೆ, ಅವರು ಅರ್ಜೆಂಟೀನಾ ಅಭಿಮಾನಿಗಳಿಗಾಗಿ ಆಡುತ್ತಾರೆ, ಅವರು ಇಡೀ ದೇಶಕ್ಕಾಗಿ ಆಡುತ್ತಾರೆ” ಎಂದು ಬಣ್ಣಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...