Homeಮುಖಪುಟ"ಶ್ರಮಿಕ್ ರೈಲುಗಳ" ಮಾರ್ಗಸೂಚಿ ಮಾರ್ಪಾಡು ಮಾಡಿದ ಸಚಿವಾಲಯ

“ಶ್ರಮಿಕ್ ರೈಲುಗಳ” ಮಾರ್ಗಸೂಚಿ ಮಾರ್ಪಾಡು ಮಾಡಿದ ಸಚಿವಾಲಯ

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿವಿಧ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರನ್ನು ಕರೆದೊಯ್ಯುವ ‘ಶ್ರಮಿಕ್’ ವಿಶೇಷ ರೈಲುಗಳ ಮಾರ್ಗಸೂಚಿಯನ್ನು ರೈಲ್ವೆ ಸಚಿವಾಲಯ ಮಾರ್ಪಡು ಮಾಡಿದೆ.

ವಿಶೇಷ ರೈಲುಗಳ ಸಾಮರ್ಥ್ಯವನ್ನು ಅಸ್ತಿತ್ವದಲ್ಲಿರುವ 1,200 ಸೀಟುಗಳ ಸಂಖ್ಯೆಯಿಂದ 1,700 ಕ್ಕೆ ಹೆಚ್ಚಿಸಲು ಸಚಿವಾಲಯ ನಿರ್ಧರಿಸಿದೆ. ಪರಿಷ್ಕೃತ ಮಾರ್ಗಸೂಚಿಗಳು ರೈಲುಗಳ ಸಾಮರ್ಥ್ಯವು ಸ್ಲೀಪರ್ ಬೆರ್ತ್‌ಗಳ ಸಂಖ್ಯೆಗೆ ಸಮನಾಗಿರಬೇಕು ಎಂದು ಹೇಳುತ್ತದೆ.

ಅಲ್ಲದೆ, ಕೊನೆ ನಿಲ್ದಾಣವನ್ನು ಹೊರತುಪಡಿಸಿ ಈಗ ಮೂರು ನಿಲುಗಡೆಗಳನ್ನು ಹೊಂದಬಹುದಾಗಿದೆ.

ಜೊತೆಗೆ ತಮ್ಮ ರಾಜ್ಯಗಳಿಗೆ ರೈಲುಗಳು ಬರುವಂತೆ ಧಾರಾಳವಾಗಿ ಅನುಮೋದನೆಗಳನ್ನು ನೀಡುವಂತೆ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ. ಕೆಲವು ರಾಜ್ಯಗಳು ಕೆಲವೇ ರೈಲುಗಳಿಗೆ ಮಾತ್ರ ತಮ್ಮ ರಾಜ್ಯಕ್ಕೆ ಪ್ರವೇಶಿಸುವಂತೆ ಅವಕಾಶ ಮಾಡಿಕೊಟ್ಟಿವೆ. ಗೃಹ ಕಾರ್ಯದರ್ಶಿ ಭಾನುವಾರ ರಾಜ್ಯಗಳೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಪತ್ರ ಬರೆದಿದ್ದಾರೆ.

ವಲಸೆ ಕಾರ್ಮಿಕರಿಗಾಗಿ ಹೆಚ್ಚು ‘ಶ್ರಮಿಕ್’ ವಿಶೇಷ ರೈಲುಗಳನ್ನು ಓಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೈಲ್ವೆಗೆ ಸಹಕರಿಸಬೇಕು ಎಂದು ಗೃಹ ಸಚಿವಾಲಯದ ಅಜಯ್ ಭಲ್ಲಾ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಲಸೆ ಕಾರ್ಮಿಕರು ರಸ್ತೆಗಳು, ರೈಲು ಹಳಿಗಳಲ್ಲಿ ನಡೆಯಲು ಆಶ್ರಯಿಸದೆ, ಲಭ್ಯವಿರುವ ವಿಶೇಷ ರೈಲುಗಳನ್ನು ಬಳಸುವಂತೆ ನೋಡಿಕೊಳ್ಳಬೇಕು ಎಂದು ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದ್ದಾರೆ.

ಭಾರತೀಯ ರೈಲ್ವೆ ಮೇ 1 ರಿಂದ 428 ‘ಶ್ರಮಿಕ್’ ವಿಶೇಷ ರೈಲುಗಳನ್ನು ಓಡಿಸಿದ್ದು, ಕೊರೊನಾ ಲಾಕ್‌ಡೌನ್ ಮಧ್ಯೆ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ 4.5 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ಮನೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 9 ರವರೆಗೆ ಓಡಿದ 287 ರೈಲುಗಳಲ್ಲಿ ಉತ್ತರ ಪ್ರದೇಶದಲ್ಲಿ 127 ,ಬಿಹಾರದಲ್ಲಿ 87 , ಮಧ್ಯಪ್ರದೇಶದಲ್ಲಿ 24 ಒಡಿಶಾದಲ್ಲಿ 20, ಜಾರ್ಖಂಡ್ನಲ್ಲಿ 16, ರಾಜಸ್ಥಾನದಲ್ಲಿ ನಾಲ್ಕು, ಮಹಾರಾಷ್ಟ್ರದಲ್ಲಿ ಮೂರು, ತೆಲಂಗಾಣ ಮತ್ತು ಪಶ್ಚಿಮದಲ್ಲಿ ತಲಾ ಎರಡು ಬಂಗಾಳ, ಮತ್ತು ಆಂಧ್ರಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶ್ರಮಿಕ್’ ರೈಲುಗಳು 24 ಬೋಗಿಗಳನ್ನು ಹೊಂದಿದ್ದು, ಪ್ರತಿ ಬೋಗಿಯಲ್ಲಿ 72 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ, ಈ ರೈಲುಗಳು ಪ್ರತಿ ಕೋಚ್‌ನಲ್ಲಿ 54 ಪ್ರಯಾಣಿಕರೊಂದಿಗೆ ಸಾಮಾಜಿಕ ಅಂತರದ ಮಾನದಂಡಗಳಿಂದ ಓಡುತ್ತಿವೆ.


ಇದನ್ನೂ ಓದಿ: ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರ ಕಾರ್ಮಿಕರಿಗೆ ರೈಲು ಸೇವೆ ಆರಂಭ


ನಮ್ಮ ಯೂಟ್ಯೂಬ್ ವಾನೆಲ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...