Homeಮುಖಪುಟರಾಷ್ಟ್ರಗೀತೆ ಹಾಡುವಂತೆ ಪೊಲೀಸರ ಸಮ್ಮುಖದಲ್ಲೇ ಹಿಂಸೆಗೊಳಗಾದ ವ್ಯಕ್ತಿ ಸಾವು

ರಾಷ್ಟ್ರಗೀತೆ ಹಾಡುವಂತೆ ಪೊಲೀಸರ ಸಮ್ಮುಖದಲ್ಲೇ ಹಿಂಸೆಗೊಳಗಾದ ವ್ಯಕ್ತಿ ಸಾವು

- Advertisement -
- Advertisement -

ಈಶಾನ್ಯ ದೆಹಲಿ ಗಲಭೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ರಾಷ್ಟ್ರಗೀತೆ ಹಾಡುವಂತೆ ರಾಡುಗಳಿಂದ ಹೊಡೆಯಲ್ಪಟ್ಟವರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.

ದೆಹಲಿಯ ವೈರಲ್ ವಿಡಿಯೋವೊಂದರಲ್ಲಿ 23 ವರ್ಷದ ಯುವಕನೊಬ್ಬ ಕಾಣಿಸಿಕೊಂಡಿದ್ದು, ಇದರಲ್ಲಿ ಪೊಲೀಸರು ಮತ್ತು ಇತರ ನಾಲ್ಕು ಯುವಕರು ಸೇರಿ ರಾಷ್ಟ್ರಗೀತೆ ಹಾಡುವಂತೆ ಹಿಂಸೆಗೊಳಪಡಿಸಿದ್ದರು. ಇದನ್ನು ಆಲ್ಟ್ ನ್ಯೂಸ್ ಪರಿಶೀಲಿಸಿತ್ತು.

ಹಿಂಸಾಚಾರಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಈಶಾನ್ಯ ದೆಹಲಿಯ ಕಾರ್ಡಂಪುರಿಯ ನಿವಾಸಿ “ಫೈಜಾನ್” ಎಂದು ಗುರುತಿಸಲಾಗಿದೆ. ಫೈಜಾನ್ ಗುರುವಾರ ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಫೈಜಾನ್ ಮೃತಪಟ್ಟಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಗಾಯಗೊಂಡು ಬಿದ್ದಿರುವವರೊಂದಿಗೆ ದುಷ್ಕರ್ಮಿಯೊಬ್ಬ “ಚೆನ್ನಾಗಿ ಹಾಡಿ” ಎನ್ನುವ ಧ್ವನಿಯನ್ನು ಆ ವಿಡಿಯೊದಲ್ಲಿ ಕೇಳಬಹುದು.

ಪೊಲೀಸರು ಫೈಜಾನ್ ರನ್ನು ಕಸ್ಟಡಿಗೆ ತೆಗೆದುಕೊಂಡ ನಂತರವೂ ಥಳಿಸಲಾಯಿತು ಎಂದು ಅವರ ಕುಟುಂಬ ಆರೋಪಿಸಿದೆ.

“ಅವನನ್ನು ಮತ್ತು ಇತರರೊಂದಿಗೆ ತೀವ್ರವಾಗಿ ಥಳಿಸಲಾಗಿದೆ. ಅವನಿಗೆ ಕಬ್ಬಿಣದ ರಾಡ್ ಗಳಿಂದ ಹೊಡೆದಿದ್ದಾರೆ. ಇದರಿಂದಾಗಿ ಅವನ ಕಾಲುಗಳು ಮುರಿದುಹೋಗಿದ್ದವು. ಹೊಡೆತದಿಂದಾಗಿ ಅವನ ಇಡೀ ದೇಹವು ಕಪ್ಪಾಗಿತ್ತು. ಮೊದಲು ಅವನನ್ನು ರಸ್ತೆಯಲ್ಲಿ ಥಳಿಸಲಾಯಿತು. ನಂತರ ಪೊಲೀಸ್ ಅವನನ್ನು ಕರೆದೊಯ್ದಿರಬೇಕು, ಆದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಫೈಜಾನ್ ತಾಯಿ ಹೇಳಿದ್ದಾರೆ.

ಫೈಜಾನ್ ತಾಯಿ “ನನಗೆ ಮಾಹಿತಿ ತಿಳಿದ ನಂತರ ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಅವನನ್ನು ಕಾಣದಿದ್ದಾಗ ಜ್ಯೋತಿ ಕಾಲೋನಿಯಲ್ಲಿರುವ ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಪೊಲೀಸರಿಗೆ ಫೈಝನ್ ಫೋಟೋವನ್ನು ತೋರಿಸಿದ ನಂತರ ಅವನು ಅಲ್ಲಿದ್ದಾನೆ ಎಂದು ಪೊಲೀಸರು ದೃಡಪಡಿಸಿದರು. ನಾನು ರಾತ್ರಿ 1 ಗಂಟೆಯವರೆಗೆ ಕಾಯುತ್ತಿದ್ದೆ ಪೊಲೀಸರು ನನ್ನನ್ನು ಭೇಟಿಯಾಗಲು ಬಿಡಲಿಲ್ಲ” ಎಂದರಲ್ಲದೆ “ಮರುದಿನ ಬೆಳಿಗ್ಗೆ ಇತರ ಇಬ್ಬರೊಂದಿಗೆ ಪೊಲೀಸ್ ಠಾಣೆಗೆ ಮರಳಿದಾಗ ಬಂಧನದ ಬೆದರಿಕೆ ಹಾಕಲಾಯಿತು. ನಂತರ ರಾತ್ರಿ 11 ಗಂಟೆಗೆ ಅವನು ಸಾಯುತ್ತಿರುವಾಗ ನನ್ನನ್ನು ಕರೆದರು” ಎಂದು ಹೇಳಿದ್ದಾರೆ.

ಫೈಜಾನ್ ಅವರನ್ನು ಪೊಲೀಸರು ಬಿಡುಗಡೆ ಮಾಡಿದ ನಂತರ, ಕುಟುಂಬವು ಅವರನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ಯಿದಿದ್ದಾರೆ. ಅಲ್ಲಿಗೆ ತಲುಪಿದಾಗ ಫೈಜಾನ್ ರ ರಕ್ತದೊತ್ತಡ ಮತ್ತು ನಾಡಿಮಿಡಿತ ಕಡಿಮೆಯಾಗಿತ್ತು. ತಲೆಗೆ ಮತ್ತು ಆಂತರಿಕ ಗಾಯಗಳಾಗಿದ್ದವು. ಗಾಯಗಳಿಂದ ಬೆನ್ನು ನೀಲಿ ಬಣ್ಣವಾಗಿತ್ತು ಎಂದು ಅಲ್ಲಿನ ವೈದ್ಯರಾದ ಡಾ. ಖಲೀಕ್ ಅಹ್ಮದ್ ಹೇಳಿದ್ದಾರೆ.

“ಅವನನ್ನು ನನ್ನ ಬಳಿಗೆ ಕರೆ ತಂದಾಗ, ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಎರಡು ದಿನಗಳ ನಂತರ ಬಿಟ್ಟು ಹೋಗಿದ್ದಾರೆ ಎಂದು ಅವರ ತಾಯಿ ಹೇಳುತ್ತಿದ್ದರು” ಎಂದು ಡಾ. ಖಲೀಕ್ ಅಹ್ಮದ್ ಹೇಳಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 500 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಗಳು ನಡೆಯುತ್ತಿದ್ದ ಅನೇಕ ಸ್ಥಳಗಳಲ್ಲಿ, ಕನಿಷ್ಠ ಪೊಲೀಸ್ ಉಪಸ್ಥಿತಿಯಿರಲಿಲ್ಲ ಎಂಬ ಆರೋಪಗಳಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...