Homeಮುಖಪುಟದಾರಿ ತಪ್ಪಿಸುವ ಜಾಹೀರಾತು; ಪತಂಜಲಿ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ದಾರಿ ತಪ್ಪಿಸುವ ಜಾಹೀರಾತು; ಪತಂಜಲಿ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

- Advertisement -
- Advertisement -

‘ದಾರಿ ತಪ್ಪಿಸುವ’ ಜಾಹೀರಾತುಗಳ ಕುರಿತು ಆಯುರ್ವೇದ ಪತಂಜಲಿ ಕಂಪನಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರೋಗಗಳು ಅಥವಾ ಇತರ ವೈದ್ಯಕೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ಯಾವುದೇ ಉತ್ಪನ್ನವನ್ನು ಜಾಹೀರಾತು ಮಾಡದಂತೆ ಕಂಪನಿಯನ್ನು ತಾಕೀತು ಮಾಡಿದ್ದು, ಇಂತಹ ತಪ್ಪುದಾರಿಗೆಳೆಯುವ ಜಾಹೀರಾತುಗಳ ಮೂಲಕ ಇಡೀ ದೇಶಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪತಂಜಲಿ ಆಯುರ್ವೇದದ ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಸಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ನಂತರ ಈ ತೀರ್ಪು ನೀಡಲಾಗಿದೆ.

ಇದಲ್ಲದೆ, ವಿವಿಧ ಮಾಧ್ಯಮ ವೇದಿಕೆಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಹರಡುವಲ್ಲಿ ತೊಡಗಿರುವ ಪತಂಜಲಿ ಆಯುರ್ವೇದ ಮತ್ತು ಆಚಾರ್ಯ ಬಾಲಕೃಷ್ಣನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ ಉತ್ತರಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ.ಅಮಾನುಲ್ಲಾ ಅವರು ಪತಂಜಲಿ ಆಯುರ್ವೇದ್ ಕಳೆದ ವರ್ಷ ಹಿಂದಿನ ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದ ಆಕ್ರೋಶ ವ್ಯಕ್ತಪಡಿಸಿತು.

ತನ್ನ ಉತ್ಪನ್ನಗಳು ಕೆಲವು ಕಾಯಿಲೆಗಳನ್ನು “ಗುಣಪಡಿಸಬಹುದು” ಎಂದು ಸುಳ್ಳು ಹೇಳಿಕೆ ನೀಡಿದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ನವೆಂಬರ್ 2023ರಲ್ಲಿ ಪತಂಜಲಿಗೆ ಎಚ್ಚರಿಸಿದೆ.

ಪತಂಜಲಿಗೆ ಅವರ ಹಿಂದಿನ ಎಚ್ಚರಿಕೆಯನ್ನು ಉಲ್ಲೇಖಿಸುವಾಗ, ಪೀಠವು, “ನಮ್ಮ ಎಚ್ಚರಿಕೆಯ ಹೊರತಾಗಿಯೂ ನಿಮ್ಮ ಉತ್ಪನ್ನಗಳು ರಾಸಾಯನಿಕ ಆಧಾರಿತ ಔಷಧಿಗಳಿಗಿಂತ ಉತ್ತಮವೆಂದು ನೀವು ಹೇಳುತ್ತಿದ್ದೀರಿ” ಎಂದು ಹೇಳಿದರು.

ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಪ್ರತಿಕ್ರಿಯೆಯಾಗಿ ಆಯುಷ್ ಸಚಿವಾಲಯ ಕೈಗೊಂಡ ಕ್ರಮಗಳನ್ನು ಪೀಠವು ಪ್ರಶ್ನಿಸಿತು.

ಪತಂಜಲಿ ಆಯುರ್ವೇದ್‌ನಿಂದ ದೂರುಗಳು ಮತ್ತು ಉಲ್ಲಂಘನೆಗಳ ಕುರಿತು ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಹೇಳಿದರು. ಆದಾಗ್ಯೂ, ಸಚಿವಾಲಯದ ಪ್ರತಿಕ್ರಿಯೆಗೆ ಪೀಠವು ಅತೃಪ್ತಿ ವ್ಯಕ್ತಪಡಿಸಿತು. ಅಂತಹ ಜಾಹೀರಾತುಗಳಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಮತ್ತು ಸ್ವಯಂ ನಿಗಾ ವಹಿಸುವಂತೆ ಸೂಚನೆ ನೀಡಿತು.

ಇದನ್ನೂ ಓದಿ; ಅಡ್ಡ ಮತದಾನ ಮಾಡುವಂತೆ ಎಸ್‌ಪಿ ಶಾಸಕರಿಗೆ ಬಿಜೆಪಿಯಿಂದ ಬೆದರಿಕೆ: ಅಖಿಲೇಶ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...