Homeಮುಖಪುಟ'ಮೋದಿ ಸರ್ವಾಧಿಕಾರಿ, ಅವರ ಮರಳುವಿಕೆ ದೇಶಕ್ಕೆ ವಿನಾಶಕಾರಿ': ಪರಕಾಲ ಪ್ರಭಾಕರ್

‘ಮೋದಿ ಸರ್ವಾಧಿಕಾರಿ, ಅವರ ಮರಳುವಿಕೆ ದೇಶಕ್ಕೆ ವಿನಾಶಕಾರಿ’: ಪರಕಾಲ ಪ್ರಭಾಕರ್

- Advertisement -
- Advertisement -

ಪ್ರಧಾನಿಯಾಗಿ ನರೇಂದ್ರ ಮೋದಿಯವರ 10 ವರ್ಷಗಳ ಅಧಿಕಾರಾವಧಿಯನ್ನು ಕಟುವಾಗಿ ಟೀಕಿಸಿರುವ ಲೇಖಕ, ಆರ್ಥಿಕ ತಜ್ಞ ಹಾಗೂ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರು, “ಮೋದಿ ಸರ್ವಾಧಿಕಾರಿಯಾಗಿದ್ದಾರೆ ಮತ್ತು ನಮ್ಮ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ನಮ್ಮ ಸಾಮಾಜಿಕ ಸ್ವರೂಪಕ್ಕೆ ಧಕ್ಕೆಯುಂಟಾಗಿದೆ. ನಮ್ಮ ಆರ್ಥಿಕತೆಯು ಅಪಾಯದಲ್ಲಿದೆ ಮತ್ತು ನಮ್ಮನ್ನು ಕತ್ತಲಯುಗಕ್ಕೆ ಮರಳಿ ತಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

ಸುದ್ದಿ ವೆಬ್‌ಸೈಟ್‌ thewire.in ಗಾಗಿ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪ್ರಭಾಕರ್, ಪ್ರಸ್ತುತ ಸರ್ಕಾರ ಮತ್ತೆ ಅಧಿಕಾರಕ್ಕೆ ಮರಳಿದರೆ, ಅದು ಭಾರತದ ಪಾಲಿಗೆ ವಿನಾಶಕಾರಿಯಾಗಲಿದೆ ಎಂದಿದ್ದಾರೆ.

ಆದಾಗ್ಯೂ, ಇದು ಸಂಭವಿಸುವ ಸಾಧ್ಯತೆಯಿಲ್ಲ ಎಂದಿರುವ ಪ್ರಭಾಕರ್, ಮುಂಬರುವ ಚುನಾವಣೆಯಲ್ಲಿ ಬಿಜೆಪಿ 220-230ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಹೆಣಗಾಡಲಿದೆ ಎಂದು ಹೇಳಿದ್ದಾರೆ.

“ಬಿಜೆಪಿ ಉತ್ತರ ಭಾರತದಲ್ಲಿ 50-60 ಸ್ಥಾನಗಳನ್ನು ಕಳೆದುಕೊಳ್ಳಬಹುದು. ದಕ್ಷಿಣದಲ್ಲಿ 10-12 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದಿದ್ದಾರೆ.

“ಮೋದಿಯವರ ಗಳಿಕೆ 230ಕ್ಕೆ ಸೀಮಿತಗೊಳಿಸಿದರೆ ಬಹುಮತವನ್ನು ಕ್ರೋಡೀಕರಿಸುವ ಚಾಕಚಕ್ಯತೆಯು ಅವರ ಬಳಿ ಇಲ್ಲ ಅಥವಾ ಅದಕ್ಕೆ ನೆರವಾಗಬಹುದಾದ ಜನರೂ ಅವರ ಬಳಿಯಿಲ್ಲ. ಆದ್ದರಿಂದ ಅವರು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದು ಅನಿವಾರ್ಯವಾಗಲಿದೆ” ಎಂದೂ ಪ್ರಭಾಕರ್ ಹೇಳಿದ್ದಾರೆ.

“ಆದರೆ, ಒಂದು ವೇಳೆ ಮೋದಿ ಮೂರನೇ ಅವಧಿಗೂ ಗೆದ್ದರೆ ಮಣಿಪುರದಲ್ಲಿ ಇಂದು ಸಂಭವಿಸುತ್ತಿರುವುದು ದೇಶದ ಪ್ರತಿಯೊಂದೂ ರಾಜ್ಯದಲ್ಲಿ ಸಂಭವಿಸುವ ಸಾಧ್ಯತೆಯಿದೆ ಮತ್ತು ಪ್ರತಿಪಕ್ಷಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ಸಮಗ್ರ ಪ್ರತಿಪಕ್ಷ ನಾಯಕತ್ವವು ಜೈಲು ಸೇರಬೇಕಾಗುತ್ತದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಿರುದ್ಯೋಗ, ಹಣದುಬ್ಬರದ ಬಗ್ಗೆ ಉಲ್ಲೇಖವಿಲ್ಲ: ಬಿಜೆಪಿ ಪ್ರಣಾಳಿಕೆ ಬಗ್ಗೆ ವಿಪಕ್ಷಗಳ ನಾಯಕರು ಏನೇನು ಹೇಳಿದ್ರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...