Homeಕರ್ನಾಟಕ‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಮಂಗಳೂರಿನ ಯುವಕ ಮೊಹಮ್ಮದ್ ಆಶಿಕ್

‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಮಂಗಳೂರಿನ ಯುವಕ ಮೊಹಮ್ಮದ್ ಆಶಿಕ್

- Advertisement -
- Advertisement -

ಮುಂಬೈಯಲ್ಲಿ ಸೋನಿ ಲೈವ್ ಓಟಿಟಿ ಪ್ಲಾಟ್ ಫಾರ್ಮ್ ಆಯೋಜಿಸಿರುವ ‘ಮಾಸ್ಟರ್ ಶೆಫ್ ಇಂಡಿಯಾ-2023’ ಪ್ರಶಸ್ತಿಯನ್ನು ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್ ಗೆದ್ದುಕೊಂಡಿದ್ದಾರೆ.

ಮಂಗಳೂರಿನ 24 ವರ್ಷದ ಯುವಕ ಮೊಹಮ್ಮದ್ ಆಶಿಕ್ ಅವರು ಮಾಸ್ಟರ್ ಚೆಫ್ ಇಂಡಿಯಾ 2023ರ ವಿಜೇತರಾಗಿ ಹೊರಹೊಮ್ಮಿದ್ದು, ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್ ರನ್ನರ್ ಅಪ್  ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಆಶಿಕ್, ನಾನು ಮಾಸ್ಟರ್‌ಚೆಫ್ ಇಂಡಿಯಾದಲ್ಲಿ ಗೆಲುವಿಗೆ  ಕೃತಜ್ಞನಾಗಿದ್ದೇನೆ. ಎಲಿಮಿನೇಷನ್ ಎದುರಿಸುವುದರಿಂದ ಹಿಡಿದು ಟ್ರೋಫಿ ಹಿಡಿಯುವವರೆಗೆ ಪ್ರತಿ ಕ್ಷಣವೂ ಆಳವಾದ ಪಾಠವಾಗಿತ್ತು. ಈ ಅನುಭವವು ನನ್ನ ಜೀವನವನ್ನು ಸಂಪೂರ್ಣವಾಗಿ ಮರು ರೂಪಿಸಿದೆ. ನಾನು ಸಂಪೂರ್ಣವಾಗಿ ಪಾಕಶಾಲೆಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ನಾನು ತೀರ್ಪುಗಾರರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇನೆ. ತೀರ್ಪುಗಾರರಾದ ವಿಕಾಸ್, ರಣವೀರ್ ಮತ್ತು ಪೂಜಾ, ಸಹ ಸ್ಪರ್ಧಿಗಳು, ಪ್ರೇಕ್ಷಕರು ಮತ್ತು ಅಡುಗೆಮನೆಯಲ್ಲಿ ಪ್ರತಿ ದಿನವೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಕಳೆದ ವರ್ಷ ಮೊಹಮ್ಮದ್ ಆಶಿಕ್ ಮಾಸ್ಟರ್‌ಚೆಫ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲು ಕಂಡಿದ್ದರು. ಈ ಬಾರಿ ಸತತ ಪ್ರಯತ್ನದ ಮೂಲಕ ಮಾಸ್ಟರ್‌ಚೆಫ್ ಇಂಡಿಯಾ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಮಾಸ್ಟರ್ ಶೆಫ್ ಇಂಡಿಯಾ ಫೈನಲ್‌ಗೆ  ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಮತ್ತು ಮುಹಮ್ಮದ್ ಆಶಿಕ್ ಪ್ರವೇಶಿಸಿದ್ದರು.

ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬ ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮಂಗಳೂರು ನಗರದ ಜೆಪ್ಪು ಸಮೀಪದ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಆಶಿಕ್‌ಗೆ ಅಡುಗೆ ತಯಾರಿಯೆಂದರೆ ಅಚ್ಚುಮೆಚ್ಚು. ಹೋಟೆಲ್ ಮ್ಯಾನೇಜ್ ಮೆಂಟ್ ಕಲಿಯಬೇಕೆಂಬ ಬಯಕೆಯಿತ್ತು. ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿರದ ಕಾರಣ ದ್ವಿತೀಯ ಪಿಯುಸಿಯಲ್ಲಿ ಶಿಕ್ಷಣ ನಿಲ್ಲಿಸಿದ್ದರು. ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲಿ ರುಚಿಯಾದ ಹೊಸ ಶೈಲಿಯ ಆಹಾರಗಳನ್ನು ತಯಾರಿಸಿ ಕೊಡುತ್ತಿದ್ದರು. ಇದಲ್ಲದೆ ನಗರದ ಕಾಲೇಜುಗಳಲ್ಲಿ ಕಾರ್ಯಕ್ರಮಗಳು ನಡೆಯುವಾಗ ಸ್ಟಾಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ಕುಲ್ಕಿ ಶರ್ಬತ್ ಸೇರಿ ಹಲವು ಬಗೆಯ ಪಾನೀಯಗಳನ್ನು ತಯಾರಿಸುತ್ತಿದ್ದರು.

ಮೊಹಮ್ಮದ್ ಆಶಿಕ್ ಅವರ ಪಾಕ ಕಲೆಯನ್ನು ಗುರುತಿಸಿದ ಅವರ ಸಂಬಂಧಿ ಮುಹಮ್ಮದ್ ಅಲಿ ಎಂಬವರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದರು. ಅದರಂತೆ ತನ್ನ 20ರ ಹರೆಯದಲ್ಲಿ ನಗರದ ಬಲ್ಮಠದಲ್ಲಿ ಮೊಹಮ್ಮದ್‌ ಆಶಿಕ್‌ ‘ಕುಲ್ಕಿ ಹಬ್’ ತೆರೆದಿದ್ದರು. ಪೂರ್ಣಪ್ರಮಾಣದಲ್ಲಿ ‘ ಶೆಫ್ ’ ಆಗಿದ್ದ ಮೊಹಮ್ಮದ್‌ ಆಶಿಕ್‌  ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

 

ಇದನ್ನು ಓದಿ: ಮುಂದಿನ 30 ವರ್ಷ ಸಂಸತ್ತಿನ ಒಳಗೆ- ಹೊರಗೆ ನಿಮ್ಮ ವಿರುದ್ಧ ಹೋರಾಡುತ್ತೇನೆ: ಮಹುವಾ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...