Homeಮುಖಪುಟಮೊಯಿತ್ರಾ-ಹಿರಾನಂದಾನಿ ನಡುವಿನ ನಗದು ವಹಿವಾಟಿನ ತನಿಖೆಗೆ ಸಮಿತಿ ಶಿಫಾರಸ್ಸು

ಮೊಯಿತ್ರಾ-ಹಿರಾನಂದಾನಿ ನಡುವಿನ ನಗದು ವಹಿವಾಟಿನ ತನಿಖೆಗೆ ಸಮಿತಿ ಶಿಫಾರಸ್ಸು

- Advertisement -
- Advertisement -

ಟಿಎಂಸಿ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನೆಗಾಗಿ ನಗದು ಆರೋಪಕ್ಕೆ ಸಂಬಂಧಿಸಿ ನಿನ್ನೆ ಲೋಕಸಭೆ ನೈತಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಸಮಿತಿಯು ವರದಿಯಲ್ಲಿ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಕುರಿತು ಪರಿಶೀಲಿಸಲು ಸರ್ಕಾರ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಬಿಜೆಪಿ ಸಂಸದ ವಿನೋದ್ ಸೋಂಕರ್ ನೇತೃತ್ವದ ಲೋಕಸಭೆ ಸಮಿತಿಯು 502 ಪುಟಗಳ ವರದಿಯಲ್ಲಿ, ಮಹುವಾ ಅವರ ನಡವಳಿಕೆಯು ಅನೈತಿಕ ಮತ್ತು ಮಹುವಾ ಅವರ ಐಡಿ, ಪಾಸ್‌ವರ್ಡ್ ಸೇರಿದಂತೆ ಲೋಕಸಭೆಯ ಲಾಗಿನ್ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳೊಂದಿಗೆ  ಹಂಚಿಕೊಂಡಿರುವುದು ಸದನದ ನಿಯಮಗಳ ಉಲ್ಲಂಘನೆ. ಇದರಿಂದಾಗಿ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಹಿರಾನಂದನಿ ಜೊತೆಗೆ ಈ ವಿಚಾರಗಳನ್ನು ಹಂಚಿಕೊಳ್ಳಲು ಮಹುವಾ ನಗದು ಸ್ವೀಕರಿಸಿದ್ದಾರೆ ಎಂದು ವರದಿಯು ಹೇಳಿದೆ.

ಮಹುವಾ ಮೊಯಿತ್ರಾ ಮತ್ತು ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಬಗ್ಗೆ ಭಾರತ ಸರ್ಕಾರವು ತನಿಖೆ ನಡೆಸಬೇಕು ಎಂದು ವರದಿ ಹೇಳಿದೆ. ಬಿಎಸ್‌ಪಿ ಸಂಸದ ಕುನಾವರ್ ಡ್ಯಾನಿಶ್ ಅಲಿ ಅವರು ಸೋಂಕರ್ ಅವರು ಮೊಯಿತ್ರಾಗೆ ಕೇಳಿದ ಪ್ರಶ್ನೆಗಳನ್ನು ಕುತಂತ್ರದಿಂದ ತಿರುಚಿದ್ದಾರೆ ಎಂದು ವರದಿಯು ಆರೋಪಿಸಿದೆ ಅವರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದೆ.

​ತನ್ನ ಲಾಗಿನ್ ಮಾಹಿತಿಗಳನ್ನು ಹಂಚಿಕೊಂಡ ನಂತರ, ಮಹುವಾ ಐಫೋನ್‌ಗಳು, ವಜ್ರ ಮತ್ತು ಮೌಲ್ಯಯುತ ಐಷಾರಾಮಿ ವಸ್ತುಗಳು ಮತ್ತು ದುಬಾರಿ 35 ಜೋಡಿ ಶೂಗಳನ್ನು ಸ್ವೀಕರಿಸಿದ್ದಾರೆ. ಉಡುಗೊರೆಗಳಲ್ಲಿ ಹತ್ತಾರು ದುಬಾರಿ ಫ್ರೆಂಚ್ ಮತ್ತು ಇಟಾಲಿಯನ್ ವೈನ್‌ಗಳ ಬಾಟಲಿಗಳು, ದುಬೈನಿಂದ ಐಷಾರಾಮಿ ಸೌಂದರ್ಯವರ್ಧಕಗಳ ಗಿಫ್ಟ್‌ , ಬ್ಯಾಗ್‌ಗಳು ಮತ್ತು ಬರ್ಲುಟಿಯಿಂದ ಮೊಸಳೆ ಚರ್ಮದಿಂದ ನಿರ್ಮಿಸಿದ ಬ್ಯಾಗ್‌ಗಳು ಮತ್ತು ನಗದನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ವಿವಿಧ ಸಚಿವಾಲಯಗಳಿಂದ ಮಾಹಿತಿಗಳನ್ನು ಈ ಬಗ್ಗೆ ಸಂಗ್ರಹಿಸಿದೆ. ಹಿರಾನಂದನಿ ಅವರು ಮಹುವಾ ಅವರ ಖಾತೆಗೆ  ಜುಲೈ 8, 2019ರಿಂದ ಏಪ್ರಿಲ್ 4, 2023ರ ನಡುವೆ 61 ಬಾರಿ ಲಾಗಿನ್‌ ಆಗಿದ್ದಾರೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮಾಹಿತಿ ಉಲ್ಲೇಖಿಸಿದ್ದಾರೆ.

ಅನಧಿಕೃತ ವ್ಯಕ್ತಿಗಳಿಗೆ ಲೋಕಸಭೆಯ ಲಾಗಿನ್‌ ಮಾಹಿತಿ ನೀಡುವುದರಿಂದ ವಿದೇಶಿ ಘಟಕಗಳಿಗೆ ಸೂಕ್ಷ್ಮ ಮಾಹಿತಿ ಸೋರಿಕೆಯ ಸಾಧ್ಯತೆ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಹಿರಾನಂದನಿ ಲಾಗಿನ್ ಮಾಡಿದ ಅವಧಿಯಲ್ಲಿ ಮಹುವಾ 4 ಬಾರಿ ದುಬೈಗೆ ಭೇಟಿ ನೀಡಿದ್ದರು ಎಂದು ಗೃಹ ಸಚಿವಾಲಯ  ಗಮನಿಸಿದೆ.

2023ರ ಅ.20ರಂದು  ಉರ್ಮಿಲ್ ಅಸಿವಾಲ್ ಅವರ ಸಮ್ಮುಖದಲ್ಲಿ ಹಿರನಂದಾನಿ ಅವರು ತಮ್ಮ ಅಫಿಡವಿಟ್‌ಗೆ ಸಹಿ ಹಾಕಿದ್ದಾರೆ ಮತ್ತು ಅಸಿವಾಲ್ ಅವರ ಸೀಲ್ ಮತ್ತು ಸಹಿ ಎರಡನ್ನೂ ಅಧಿಕೃತವೆಂದು ದೃಢಪಡಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ ಎಂದು ಲೋಕಸಬೆಯ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನು ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...