Homeಮುಖಪುಟ2019-20 ರಲ್ಲಿ ಕಾರ್ಪೋರೇಟ್‌ ಮತ್ತು ಇತರರು ಬಿಜೆಪಿಗೆ ನೀಡಿದ್ದು 785 ಕೋಟಿಗಿಂತಲೂ ಹೆಚ್ಚು!

2019-20 ರಲ್ಲಿ ಕಾರ್ಪೋರೇಟ್‌ ಮತ್ತು ಇತರರು ಬಿಜೆಪಿಗೆ ನೀಡಿದ್ದು 785 ಕೋಟಿಗಿಂತಲೂ ಹೆಚ್ಚು!

ಕಾಂಗ್ರೆಸ್‌‌, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ ಪಡೆದ ಒಟ್ಟು ದೇಣಿಗಿಂತಲೂ ಮೂರು ಪಟ್ಟು ಹೆಚ್ಚಿನ ದೇಣಿಗೆಯನ್ನು ಬಿಜೆಪಿ ಪಡೆದಿದೆ.

- Advertisement -
- Advertisement -

2019-20 ರಲ್ಲಿ ರಾಜಕೀಯ ಪಕ್ಷಗಳಿಗೆ ಸಿಕ್ಕಿದ ದೇಣಿಗೆಗಳಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ. ಪಕ್ಷವು ಟ್ರಸ್ಟ್‌ಗಳು, ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸೇರಿದಂತೆ ಒಟ್ಟು 5,576 ದೇಣಿಗೆಗಳ ಮೂಲಕ 20 ಸಾವಿರ ರೂ. ಗಿಂತಲೂ ಹೆಚ್ಚಿನ ದೇಣಿಗೆಯನ್ನು ಪಡೆದಿದ್ದು, ಇದರ ಒಟ್ಟು ಮೊತ್ತ 785.77 ಕೋಟಿ ರೂ. ಆಗುತ್ತದೆ ಎಂದು ಸರ್ಕಾರೇತರ ಸಂಸ್ಥೆಯಾದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಬಿಡುಗಡೆ ಮಾಡಿದೆ.

ವಿರೋಧ ಪಕ್ಷವಾದ ಕಾಂಗ್ರೆಸ್ 350 ದೇಣಿಗೆದಾರರಿಂದ 139.016 ಕೋಟಿ ರೂ. ಗಳಿಸಿದೆ. ಇದು ಬಿಜೆಪಿ ಸ್ವೀಕರಿಸಿದ ಮೊತ್ತಕ್ಕಿಂತ ಐದು ಪಟ್ಟು ಕಡಿಮೆ ಮೊತ್ತವಾಗಿದೆ.

ಕಾಂಗ್ರೆಸ್‌‌, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ ಪಡೆದ ಒಟ್ಟು ದೇಣಿಗೆಯ ಮೊತ್ತ 228.035 ಕೋಟಿಯಾಗಿದ್ದು, ಈ ಎಲ್ಲಾ ಪಕ್ಷಗಳು ಪಡೆದ ಒಟ್ಟು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಿನ ದೇಣಿಗೆಯನ್ನು ಬಿಜೆಪಿ ಪಡೆದಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯಿಂದ 4.80 ಲಕ್ಷ ರೂ. ಬಿಜೆಪಿಗೆ ವರ್ಗಾವಣೆ!

ಕುತೂಹಲಕಾರಿ ಘಟನೆಯಲ್ಲಿ ಮಹಾರಾಷ್ಟ್ರ ಅಮರಾವತಿ ಮುನ್ಸಿಪಲ್ ಕಾರ್ಪೊರೇಶನ್‌ನಿಂದ 4.80 ಲಕ್ಷ ರೂ. ದೇಣಿಗೆ ಪಡೆದಿರುವುದಾಗಿ ಬಿಜೆಪಿ ಘೋಷಿಸಿದೆ. ಈ ದೇಣಿಗೆ ನೀಡಿದವರ ವಿಳಾಸ, ಬ್ಯಾಂಕ್ ಹೆಸರು, ಪ್ಯಾನ್ ಇತ್ಯಾದಿಗಳ ವಿವರಗಳನ್ನು ಪಕ್ಷವು ಬಹಿರಂಗಪಡಿಸಿಲ್ಲ. ಅದಾಗ್ಯೂ, ಸರ್ಕಾರಿ ಸಂಸ್ಥೆಯೊಂದು ರಾಜಕೀಯ ಪಕ್ಷಕ್ಕೆ ಕೊಡುಗೆ ನೀಡುವುದು ಕಾನೂನಾತ್ಮಕವಾಗಿ ಸರಿಯೆ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಎಡಿಆರ್‌ ಹೇಳಿದೆ.

ಇಷ್ಟೇ ಅಲ್ಲದೆ, ಬಿಜೆಪಿ ತನ್ನ ಘೋಷಣೆಯಲ್ಲಿ ಕನಿಷ್ಠ ಮೂರು ದಾನಿಗಳಿಂದ 1.516 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆಯಲಾಗಿದೆ ಎಂದು ಹೇಳಿದೆ. “ಈ ಮೂರು ದೇಣಿಗೆಗಳು ಬಿಹಾರದ ಝಂಜಾರಪುರದಿಂದ ನೀಡಲಾಗಿದ್ದು, ಒಂದೊಂದು ಭೂಮಿಯು 36.80 ಲಕ್ಷ ರೂ., 50 ಲಕ್ಷ ರೂ., ಮತ್ತು  64.88 ಲಕ್ಷ ರೂ. ಮೌಲ್ಯದ್ದಾಗಿದೆ” ಎಂದು ADR ವರದಿ ಹೇಳಿದೆ.

ಆದರೆ ಬಿಜೆಪಿ ದಾನಿಗಳ ವಿಳಾಸ, ಪ್ಯಾನ್ ಕಾರ್ಡ್ ಮಾಹಿತಿಯನ್ನು ಒದಗಿಸಿಲ್ಲ. ಜೊತೆಗೆ ಭೂಮಿ ಕೃಷಿಭೂಮಿಯೇ ಅಥವಾ ವಾಣಿಜ್ಯವೇ ಎಂಬುದನ್ನೂ ಕೂಡ ಬಹಿರಂಗಪಡಿಸಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ: ‘ಯೋಗಿ ನಿಮ್ಮ ಚರ್ಮ ಸುಲಿಯುತ್ತಾರೆ!’; ರೈತರಿಗೆ ಬಹಿರಂಗವಾಗಿ ಬೆದರಿಸಿದ ಯುಪಿ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇವರು ಬ್ರಷ್ಟಾಚಾರದ ಮೂಲ, ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ!?

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...