Homeಕರ್ನಾಟಕಸ್ವಾತಂತ್ರ್ಯಕ್ಕಾಗಿ ಬ್ರಾಹ್ಮಣರೇ ಹೆಚ್ಚಾಗಿ ಹೋರಾಡಿ ಮಡಿದಿದ್ದಾರೆ: ರಾಮದಾಸ್‌

ಸ್ವಾತಂತ್ರ್ಯಕ್ಕಾಗಿ ಬ್ರಾಹ್ಮಣರೇ ಹೆಚ್ಚಾಗಿ ಹೋರಾಡಿ ಮಡಿದಿದ್ದಾರೆ: ರಾಮದಾಸ್‌

- Advertisement -
- Advertisement -

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರೇ ಅತೀ ಹೆಚ್ಚು ಸಂಖ್ಯೆಯಲ್ಲೇ ಭಾಗವಹಿಸಿ ಮಡಿದವರಾಗಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿರುವುದಾಗಿ ವರದಿಯಾಗಿದೆ.

ಮೈಸೂರು ನಗರದ ಆದರ್ಶ ಸೇವಾ ಸಂಘ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ವಿಪ್ರ ಪರಿಷತ್ ಜಂಟಿಯಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರಲ್ಲಿ ಬ್ರಾಹ್ಮಣರೇ ಅತೀ ಹೆಚ್ಚು ಎನ್ನುವುದಕ್ಕೆ ಸರ್ಕಾರಿ ದಾಖಲೆಗಳಿವೆ. ಯಾವುದೇ ಸಾಮಾಜಿಕ ಹೋರಾಟದಲ್ಲಿ ವಿಪ್ರರ ಪಾತ್ರವನ್ನು ಕಡೆಗಣಿಸುವಂತಿಲ್ಲ ಎಂದು ರಾಮ್‌ದಾಸ್‌ ಹೇಳಿರುವುದಾಗಿ ಮೈಸೂರಿನ ಪ್ರಾದೇಶಿಕ ದಿನಪತ್ರಿಕೆ ‘ಆಂದೋಲನ’ ವರದಿ ಮಾಡಿದೆ.

ಬಳಿಕ ಮಾತನಾಡಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಬ್ರಾಹ್ಮಣ ಸಮಾಜ ಎತ್ತ ಸಾಗುತ್ತಿದೆ ಎಂಬುದರ ಕುರಿತು ಹಿರಿಯರಾದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಸಮಾನ ಸ್ಥಾನ-ಮಾನ, ಏನು-ಎತ್ತ ಎಂಬ ಆತಂಕ ಸೃಷ್ಟಿಯಾಗಿರುವುದು ನಿಜ. ಹಾಗಂತ ನಾವು ಎದೆಗುಂದಬೇಕಾಗಿಲ್ಲ. ನಮ್ಮ ಪರಂಪರೆಯ ಸಂಸ್ಕೃತಿಯನ್ನು ಪುನರ್ ರೂಪಿಸಿಕೊಂಡರೆ ಮಾತ್ರ ವಿಪ್ರರಿಗೆ ಗೌರವ ಸಿಗಲು ಸಾಧ್ಯ ಎಂದು ಕರೆ ನೀಡಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯಾಧ್ಯಾಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ನಮಗೆ ಜಾತಿ ಗಣತಿಯಲ್ಲಿ ಅನ್ಯಾಯವಾಗಿದೆ. ರಾಜ್ಯದ ಲ್ಲಿ 42 ಲಕ್ಷ ಜನಸಂಖ್ಯೆ ಇದ್ದ ನಾವು ಉಪ ಪಂಗಡ ಹೆಸರನ್ನು ದಾಖಲಿಸದ ಪರಿಣಾಮ ಜನಸಂಖ್ಯೆ 17 ಲಕ್ಷಕ್ಕೆ ಇಳಿಕೆಯಾಗಿರುವುದು ಅಂಕಿ-ಸಂಖ್ಯೆಯಲ್ಲಿದೆ. ಇದು ನಮಗೆ ನಾವೇ ಮಾಡಿಕೊಂಡ ಅನ್ಯಾಯ. ಮುಂದಿನ ಗಣತಿಯಲ್ಲಾದರೂ ಉಪ ಪಂಗಡಗಳಿಂದ, ತ್ರಿಮತದಿಂದ ಹೊರ ಬಂದು ಒಂದೇ ಹೆಸರಲ್ಲಿ ಗಣತಿಯಲ್ಲಿ ದಾಖಲಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ

ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿ ಹಾಜರಿದ್ದರು. ಆದರ್ಶ ಸೇವಾ ಸಂಘ ಅಧ್ಯಕ್ಷ ಜಿ.ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಡಾ ನಿಕಟಪೂರ್ವ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಆದರ್ಶ ಸೇವಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ರಾಮದಾಸ್ ಅವರ ಈ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ ಕನ್ನಡಪರ ಹೋರಾಟಗಾರ ಎಸ್.ಸಿ.ದಿನೇಶ್‌ಕುಮಾರ್‌ ಟೀಕಿಸಿದ್ದಾರೆ. ರಾಮದಾಸ್‌ ಈ ಹಿಂದೆ ಹಲವು ಸುಳ್ಳುಗಳನ್ನು ಹೇಳಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...