Homeಮುಖಪುಟ"MPhil ಪದವಿಗೆ ಮಾನ್ಯತೆಯಿಲ್ಲ": ಹೊಸ ಪ್ರವೇಶಾತಿ ಪಡೆಯದಂತೆ ಯುಜಿಸಿ ಸಲಹೆ

“MPhil ಪದವಿಗೆ ಮಾನ್ಯತೆಯಿಲ್ಲ”: ಹೊಸ ಪ್ರವೇಶಾತಿ ಪಡೆಯದಂತೆ ಯುಜಿಸಿ ಸಲಹೆ

- Advertisement -
- Advertisement -

ಎಂಫಿಲ್ (ಮಾಸ್ಟರ್ ಆಫ್ ಫೀಲಾಸಫಿ) ಪದವಿಗೆ ಮಾನ್ಯತೆ ಇಲ್ಲ. 2023-24ರ ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡುತ್ತಿದ್ದರೆ ತಕ್ಷಣ ನಿಲ್ಲಿಸಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿ ಹೊಸ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು ಕೂಡ ಎಂಫಿಲ್ ಪದವಿಗೆ ಪ್ರವೇಶಾತಿ ಪಡೆಯದಂತೆ ಯುಜಿಸಿ ಸೂಚಿಸಿದ್ದು, ಅದಕ್ಕೆ ಮಾನ್ಯತೆ ಇಲ್ಲ ಎಂದಿದೆ.

“ಕೆಲ ವಿಶ್ವವಿದ್ಯಾನಿಲಯಗಳು ಎಂಫಿಲ್‌ ಕೋರ್ಸ್‌ಗೆ ಹೊಸದಾಗಿ ಪ್ರವೇಶಾತಿ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ, ಅ ಕೋರ್ಸ್‌ಗೆ ಮಾನ್ಯತೆ ಇಲ್ಲ ಎಂಬುವುದನ್ನು ತಿಳಿಸಿದ್ದೇವೆ. ವಿದ್ಯಾರ್ಥಿಗಳಿಗೂ ಸಲಹೆ ನೀಡಿದ್ದೇವೆ” ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳು ಎಂಫಿಲ್ ಪದವಿ ನೀಡಬಾರದು. ಯುಜಿಸಿಯ (ಕನಿಷ್ಟ ಮಾನದಂಡಗಳು ಮತ್ತು ಪಿಹೆಚ್‌ಡಿ ಪದವಿಯನ್ನು ನೀಡುವ ಕಾರ್ಯವಿಧಾನಗಳು) ನಿಯಮಾವಳಿಗಳು, 2022ರ ಸಂಖ್ಯೆ 14ರಡಿ ಇದಕ್ಕೆ ಮಾನ್ಯತೆ ಇಲ್ಲ ಎಂದು ಜೋಶಿ ತಿಳಿಸಿದ್ದಾರೆ.

ಎಂಫಿಲ್‌ಗೆ ಮಾನ್ಯತೆ ಯಾಕಿಲ್ಲ?

ಸ್ನಾತಕೋತ್ತರ ಪದವಿ ಮತ್ತು ಪಿಹೆಚ್‌ಡಿ ಅಧ್ಯಯನದ ನಡುವೆ ಎರಡು ವರ್ಷಗಳ ಎಂಫಿಲ್‌ ಪದವಿ ಈ ಹಿಂದೆ ಇತ್ತು. 2020ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ಶಿಕ್ಷಣ ನೀತಿ( NEP-New Education Policy) ಯಲ್ಲಿ ಎಂಫಿಲ್‌ ಕೈ ಬಿಡಲಾಗಿದೆ. ಹೊಸ ಶಿಕ್ಷಣ ನೀತಿ ಸ್ನಾತಕೋತ್ತರ ಪದವಿ ಬಳಿಕ ನೇರವಾಗಿ ಪಿಹೆಚ್‌ಡಿ ಅಧ್ಯಯನಕ್ಕೆ ಅನುವು ಮಾಡಿ ಕೊಡಲಿದೆ.

ಎಂಫಿಲ್ ಮಾನ್ಯತೆ ರದ್ದು ಮಾಡುವಾಗ, ಸಮಯ ಮತ್ತು ಹಣ ಉಳಿಸುವ ಕಾರಣವನ್ನು ಕೇಂದ್ರ ಸರ್ಕಾರ ನೀಡಿದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಬಳಿಕ ಪಿಹೆಚ್‌ಡಿ ಮಾಡುವುದರ ನಡುವೆ ಎರಡು ವರ್ಷಗಳ ಕಾಲ ಸುಖಾ ಸುಮ್ಮನೆ ಎಂಫಿಲ್‌ಗಾಗಿ ಸಮಯ ವ್ಯರ್ಥ ಮತ್ತು ಹಣ ವ್ಯರ್ಥ ಮಾಡುತ್ತಿದ್ದರು ಎಂದಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರ ಮುಸ್ಲಿಂ ಲೀಗ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...