Homeಮುಖಪುಟಮೋದಿ ರಾಮ ಪೂಜೆ ಮಾಡುವುದನ್ನು ಹೇಗೆ ಒಪ್ಪಲಿ? ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ಮೋದಿ ರಾಮ ಪೂಜೆ ಮಾಡುವುದನ್ನು ಹೇಗೆ ಒಪ್ಪಲಿ? ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

- Advertisement -
- Advertisement -

ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿರುವ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ” ರಾಮ ತನ್ನ ಪತ್ನಿ ಸೀತೆ ಮಾತೆಗೋಸ್ಕರ ಒಂದೂವರೆ ದಶಕಗಳ ಕಾಲ ಹೋರಾಟ ಮಾಡಿದ್ದ. ಮೋದಿ ತನ್ನ ಹೆಂಡತಿಯನ್ನು ಕೈ ಬಿಟ್ಟ ವಿಚಾರದಲ್ಲಿ ಪ್ರಸಿದ್ದಿಯಾಗಿದ್ದಾರೆ. ಅಂತಹ ಮೋದಿಯನ್ನು ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂಜೆ ಮಾಡ್ತಾರಾ? ರಾಮ ಭಕ್ತರಾದ ನಾವು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಗೆ ಮೋದಿಗೆ ಹೇಗೆ ಅವಕಾಶ ಕೊಡಲಿ?” ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದರೂ, ಅವರ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಬಯಲಾಗಿರಲಿಲ್ಲ. 2014ರಲ್ಲಿ ಮೋದಿ ತಮ್ಮ ಚುನಾವಣಾ ಅಫಿಡವಿಟ್ ಸಲ್ಲಿಸುವಾಗ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಒದಗಿಸಿದ್ದರು. ಅವರು ನಿವೃತ್ತ ಶಿಕ್ಷಕಿ ಜಶೋದಾಬೆನ್ ಅವರನ್ನು ವಿವಾಹವಾಗಿದ್ದರು. ಬಳಿಕ ಪತ್ನಿಯಿಂದ ದೂರ ಆಗಿದ್ದರು. ತಮ್ಮ ಸಮುದಾಯದ ಸಂಪ್ರದಾಯದಂತೆ ಮೋದಿ ಮತ್ತು ಜಶೋಧಬೆನ್ ವಿವಾಹ ಬಹಳ ವರ್ಷಗಳ ಮುಂಚೆಯೇ ನಡೆದಿತ್ತು ಎಂಬ ವಿಚಾರ ಬಯಲಾಗಿತ್ತು.

ನರೇಂದ್ರ ಮೋದಿಯವರ ಹಿರಿಯ ಸಹೋದರ ಸೋಮ್‌ಭಾಯ್‌ ಮೋದಿ, ತನ್ನ ಸಹೋದರನಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು ಎಂದು ಈ ಹಿಂದೆ ಹೇಳಿಕೊಂಡಿದ್ದರು. “ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಸಮಾಜಕ್ಕಾಗಿ ಕೆಲಸ ಮಾಡುವ ಆಂತರಿಕ ಕರೆಗೆ ಪ್ರತಿಕ್ರಿಯೆಯಾಗಿ” ಮೋದಿ ವೈವಾಹಿಕ ಜೀವನದಿಂದ ಹೊರನಡೆದರು ಎಂದು ಸೋಮ್‌ಭಾಯ್‌ ಹೇಳಿದ್ದರು.

ರಾಮ ಮಂದಿರ ಉದ್ಘಾಟನೆಗೆ ಹಲವಾರು ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಜನಪ್ರಿಯ ನಟರಾದ ಯಶ್, ಪ್ರಭಾಸ್, ರಣಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್ ಸೇರಿದಂತೆ ಇನ್ನಿತರರನ್ನು ಆಹ್ವಾನಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುಬ್ರಮಣಿಯನ್ ಸ್ವಾಮಿ, “ನಟರು ಮೊದಲು ತಮ್ಮ ಪಾಪಗಳಿಂದ ಮುಕ್ತರಾಗಬೇಕು. ಸುಮಾರು 12ಕ್ಕಿಂತ ಹೆಚ್ಚು ಸಿನಿಮಾ ತಾರೆಯರು ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಪೂಜೆಗೆ ಬರುತ್ತಿದ್ದಾರೆ. ಇವರನ್ನು ಯಾಕೆ ಆಹ್ವಾನಿಸಲಾಗಿದೆ. ಸಿನಿಮಾ ತಾರೆಯರು ತಮ್ಮ ಪಾಪಗಳಿಂದ ಮುಕ್ತರಾಗಲು ಅಯೋಧ್ಯೆಗೆ ಬರುದಾರೆ ಸ್ವಾಗತ. ಇಲ್ಲದಿದ್ದರೆ, ದಿನನಿತ್ಯ ಪಾಪಗಳನ್ನು ಮಾಡುವ ತಾರೆಯರು ಮೊದಲು ಕಾಳಿ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಿ ಆಮೇಲೆ ಬರಲಿ” ಎಂದು ಹೇಳಿದ್ದರು.

ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 4,000 ಸಂತರು ಮತ್ತು ನೂರಾರು ಅಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶದ ಬಹುತೇಕ ಪಕ್ಷಗಳ ಮುಖಂಡರಿಗೆ ರಾಮ ಮಂದಿರ ಟ್ರಸ್ಟ್ ಆಹ್ವಾನ ಕೊಟ್ಟಿದೆ. ಸಿಪಿಐ (ಎಂ) ಪಕ್ಷ ಆಹ್ವಾನವನ್ನು ತಿರಸ್ಕರಿಸಿದ್ದು, ಬಿಜೆಪಿ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಎಂದಿದೆ.

ಇದನ್ನೂ ಓದಿ : ರಾಮ ಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸಿದ ಸಿಪಿಐ(ಎಂ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...