Homeಮುಖಪುಟ‘ದೇಶದ ಸಂಸತ್ತು ಗಾಢ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿದೆ’; ಮೋದಿ-ಅಮಿತ್ ಶಾ ವಿರುದ್ಧ ಒಬ್ರಿಯಾನ್ ಕಿಡಿ

‘ದೇಶದ ಸಂಸತ್ತು ಗಾಢ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿದೆ’; ಮೋದಿ-ಅಮಿತ್ ಶಾ ವಿರುದ್ಧ ಒಬ್ರಿಯಾನ್ ಕಿಡಿ

- Advertisement -
- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅವರದೇ ಪಕ್ಷದ ನಾಯಕರಾದ ವಾಜಪೇಯಿ-ಅಡ್ವಾಣಿಯವರಿಗೆ ಹೋಲಿಕೆ ಮಾಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ‘ಸಂಸತ್ತು ಗಾಢ ಕತ್ತಲೆ ಕೋಣೆಯಾಗಿ (ಚೇಂಬರ್) ಮಾರ್ಪಟ್ಟಿದೆ’ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘2001ರ ಸಂಸತ್ ದಾಳಿಯ ನಂತರ, ಆಗಿನ ಪ್ರಧಾನಿ ಮತ್ತು ಗೃಹ ಸಚಿವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಟೀಕಿಸಿದ್ದಾರೆ.

‘2001 ಸಂಸತ್ ದಾಳಿ ನಡೆದಾಗ, ಸಂಸತ್ತಿನಲ್ಲಿ 3 ಕೆಲಸದ ದಿನ ಪೂರ್ಣ ಚರ್ಚೆ. ಪ್ರಧಾನ ಮಂತ್ರಿ ರಾಜ್ಯಸಭೆಯಲ್ಲಿ, ಗೃಹ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. 2023ರ ಉಲ್ಲಂಘನೆ; ಸರ್ಕಾರ ಮೌನವಾಗಿದೆ. ಗೃಹ ಸಚಿವರಿಂದ ಚರ್ಚೆ ಮತ್ತು ಹೇಳಿಕೆಗೆ ಒತ್ತಾಯಿಸಿದ್ದಕ್ಕಾಗಿ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತು ಗಾಢವಾದ ಕತ್ತಲೆಯ ಕೋಣೆಯಾಗಿ ಮಾರ್ಪಟ್ಟಿದೆ’ ಎಂದು ಮೋದಿ-ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.

2001ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದ ದಿವಾದ ಡಿಸೆಂಬರ್ 13 ರಂದು, ಲೋಕಸಭೆಯಯಲ್ಲಿ ಶೂನ್ಯ ವೇಳೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸಾರ್ವಜನಿಕ ಗ್ಯಾಲರಿಯಿಂದ ಸಂಸತ್ತಿನ ಜಿಗಿದಿದ್ದ ಇಬ್ಬರು ಯುವಕರು, ತಮ್ಮ ಬೂಟುಗಳಲ್ಲಿ ಬಚ್ಚಿಟ್ಟಿದ್ದ ಡಬ್ಬಿಗಳಿಂದ ಹಳದಿ ಹೊಗೆಯನ್ನು ಬಿಡುಗಡೆ ಮಾಡಿದ್ದರು.

ಘಟನೆಯ ನಂತರ ವಿರೋಧ ಪಕ್ಷದ ಸಂಸದರು ಭದ್ರತೆ ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿ, ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದರು.

ಈ ವಾಗ್ವಾದಿಂದ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಪ್ರತಿಪಕ್ಷಗಳ ಸಂಸದರು ಅಶಿಸ್ತಿನ ಕಾರಣಕ್ಕಾಗಿ ಚಳಿಗಾಲ ಅಧಿವೇಶನದಿಂದ ಅಮಾನತುಗೊಂಡರು. ಒಬ್ರೇನ್ ಅಮಾನತುಗೊಂಡ ಮೊದಲ ರಾಜ್ಯಸಭಾ ಸಂಸದರಾಗಿದ್ದಾರೆ. ಅಮಾನತುಗೊಂಡ ನಂತರವೂ ಅವರು ಸದನದಲ್ಲಿ ಉಳಿದುಕೊಂಡಿದ್ದಕ್ಕಾಗಿ ಅವರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ಪ್ರಸ್ತಾಪವನ್ನು ಸಹ ಮಾಡಿದ್ದಾರೆ. ಈ ವಿಷಯವನ್ನು ಸದನದ ವಿಶೇಷಾಧಿಕಾರ ಸಮಿತಿಗೆ ವಹಿಸಲಾಗಿದೆ.

ಸಂಸತ್ತಿನ ದಾಖಲೆಗಳ ಪ್ರಕಾರ, ಡಿಸೆಂಬರ್ 2001ರ ಸಂಸತ್ತಿನ ಮೇಲಿನ ದಾಳಿಯ ನಂತರ, ಉಭಯ ಸದನಗಳಲ್ಲಿ ಚರ್ಚೆ ನಡೆದಿದೆ. ಅಂದಿನ ಗೃಹ ಸಚಿವ ಎಲ್ಕೆ ಅಡ್ವಾಣಿ ಚರ್ಚೆಗೆ ಉತ್ತರ ನೀಡಿದ್ದರು. ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಉಭಯ ಸದನಗಳಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ; ಪೂಂಛ್‌ನಲ್ಲಿ ನಾಗರಿಕರ ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...