Homeಮುಖಪುಟ'ಮುಲ್ಲಾ ಭಯೋತ್ಪಾದಕ': ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ...

‘ಮುಲ್ಲಾ ಭಯೋತ್ಪಾದಕ’: ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ನಿಂದನೆ

- Advertisement -
- Advertisement -

ದಕ್ಷಿಣ ದೆಹಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ ಗುರುವಾರ ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ಡ್ಯಾನಿಶ್ ಅಲಿ ಅವರನ್ನು “ಭರ್ವಾ (ಪಿಂಪ್), “ಕತ್ವಾ” (ಸುನ್ನತಿ), “ಮುಲ್ಲಾ” “ಅಟಂಕವಾಡಿ” (ಭಯೋತ್ಪಾದಕ) ಮತ್ತು “ಉಗ್ರವಾದಿ” (ಉಗ್ರವಾದಿ) ಎಂದು ಲೋಕಸಭೆಯಲ್ಲಿ ಕರೆದಿದ್ದಾರೆ.

ಸಂಸತ್ತಿನ ಕೆಳಮನೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಚರ್ಚೆಯ ವೇಳೆ ಬಿಜೆಪಿ ನಾಯಕರ ಈ ದ್ವೇಷಪೂರಿತ ಹೇಳಿಕೆ ಹೊರಬಿದ್ದಿದೆ. “ಯೇ ಉಗ್ರವಾದಿ (ಉಗ್ರವಾದಿ), ಯೇ ಆಟಂಕ್ವಾಡಿ ಹೈ, ಉಗ್ರವಾದಿ ಹೈ, ಯೇ ಆಂತಂಕ್ವಾದಿ (ಭಯೋತ್ಪಾದಕ) ಹೈ,” ಎಂದು ಬಿಧುರಿ ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: NDA ಆಡಳಿತದ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ಸಿಎಂಗಳಿಲ್ಲ: ಡೆರೆಕ್ ಓಬ್ರಿಯಾನ್

ಡ್ಯಾನಿಶ್ ಅಲಿ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಧುರಿ ಹೇಳಿಕೆಗೆ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಧ್ವೇಷಪೂರಿತ ಹೇಳಿಕೆ ವೈರಲ್ ಆಗುತ್ತಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ”ಮುಸ್ಲಿಮರನ್ನು, ಒಬಿಸಿಗಳನ್ನು ನಿಂದಿಸುವುದು ಬಿಜೆಪಿಯ ಅಂತರ್ಗತ ಸಂಸ್ಕೃತಿಯಾಗಿದೆ. ಈಗ ಹೆಚ್ಚಿನವರಿಗೆ ಅದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಮುಸ್ಲಿಮರು ತಮ್ಮ ಸ್ವಂತ ನೆಲದಲ್ಲಿ ಭಯದಿಂದ ಬದುಕುವ ಪರಿಸ್ಥಿತಿಯನ್ನು ನರೇಂದ್ರ ಮೋದಿ ಸರ್ಕಾರ ಸೃಷ್ಟಿಸಿದೆ. ಅವರು ನಗುತ್ತಾ ಎಲ್ಲವನ್ನು ಸಹಿಸಿಕೊಂಡಿದ್ದಾರೆ. ಕ್ಷಮಿಸಿ, ಇದು ಅಪರಾಧ ಎಂದು ಎಂದು ನಾನು ಕರೆಯುತ್ತೇನೆ. ಮಾ ಕಾಳಿ ನನ್ನ ಬೆನ್ನಿಗಿದ್ದಾರೆ” ಎಂದು ಬರೆದಿದ್ದಾರೆ.

ಬಿಧುರಿ ಅವರು ಮಾತನಾಡಿರುವ ವಿಡಿಯೋವನ್ನು ಪತ್ರಕರ್ತ ಮೊಹಮ್ಮದ್ ಜುಬೇರ್ ಹಂಚಿಕೊಂಡಿದ್ದು, ”ಬಿಜೆಪಿ ಸಂಸದ ರಮೇಶಬಿಧುರಿ ಅವರು ಸಂಸದ ಡ್ಯಾನಿಶ್ ಅಲಿ ಅವರನ್ನು “ಭರ್ವಾ (ಪಿಂಪ್), “ಕತ್ವಾ” (ಸುನ್ನತಿ), “ಮುಲ್ಲಾ” “ಅಟಂಕವಾಡಿ” (ಭಯೋತ್ಪಾದಕ) ಮತ್ತು “ಉಗ್ರವಾದಿ” (ಉಗ್ರವಾದಿ) ಎಂದು ಲೋಕಸಭೆಯಲ್ಲಿ ರೆಕಾರ್ಡ್‌ನಲ್ಲಿ ಕರೆಯುವುದನ್ನು ಕೇಳಬಹುದು, ಆದರೆ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ಅವರು ಈ ಹೇಳಿಕೆಗೆ ನಗುತ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ವಿಡಿಯೋ ಶೇರ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read