ಮುಂಬೈನ ಭಂಡಪ್ ಪ್ರದೇಶದ ಮಾಲ್‌ನಲ್ಲಿರುವ ಖಾಸಗಿ ಕೊರೊನಾ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಡ್ರೀಮ್ಸ್ ಮಾಲ್‌ನಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 23 ಅಗ್ನಿಶಾಮಕ ಯಂತ್ರಗಳು ಸ್ಥಳದಲ್ಲೇ ಇವೆ.
ಇದನ್ನೂ ಓದಿ: ಹೆಲಿಕಾಪ್ಟರ್, ಚಂದ್ರಯಾನ, ಐಪೋನ್, ಕೋಟಿ ಹಣ-ತಮಿಳುನಾಡು ಚುನಾವಣಾ ಅಭ್ಯರ್ಥಿಯ ಪ್ರಣಾಳಿಕೆ!
“ಅಗ್ನಿ ದುರಂತದಲ್ಲಿ ಎರಡು ಸಾವುನೋವುಗಳು ವರದಿಯಾಗಿವೆ. ಕೋವಿಡ್ ಆರೈಕೆ ಆಸ್ಪತ್ರೆಗೆ ದಾಖಲಾದ 76 ರೋಗಿಗಳಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಿಗ್ಗೆ 12.30 ಕ್ಕೆ ಮಾಲ್‌ನ ಮೊದಲ ಮಹಡಿಯಲ್ಲಿ ಲೆವೆಲ್-3 ಅಥವಾ ಲೆವೆಲ್-4 ಬೆಂಕಿ ಕಾಣಿಸಿಕೊಂಡಿದೆ” ಎಂದು ಡಿಸಿಪಿ ಪ್ರಶಾಂತ್ ಕದಮ್ ಹೇಳಿದ್ದಾರೆ ಎಂದು ANI ವರದಿ ಮಾಡಿದೆ.
#BREAKING | 2 killed in a major fire at a #COVID19 hospital that broke out in Mumbai's Bhandup area. As many as 70 patients including #COVID infected have been shifted to another hospital. @disha2791 reports! pic.twitter.com/GOmj5NUzvt
— Mirror Now (@MirrorNow) March 26, 2021
ಈ ಘಟನೆಯ ಬಗ್ಗೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮಾತನಾಡಿ, “ನಾನು ಮಾಲ್‌ನಲ್ಲಿ ಆಸ್ಪತ್ರೆಯನ್ನು ನೋಡಿದ್ದು ಇದೇ ಮೊದಲು. ಇದು ತುಂಬಾ ಗಂಭೀರ ಪರಿಸ್ಥಿತಿ. ಏಳು ರೋಗಿಗಳು ವೆಂಟಿಲೇಟರ್‌ನಲ್ಲಿದ್ದರು. 70 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: ‘ಭಾರತೀಯ ಸೇನೆಯಲ್ಲಿ ಲಿಂಗ ತಾರತಮ್ಯ’ – ಸರಿಪಡಿಸಲು ಸುಪ್ರೀಂ ಆದೇಶ