Homeಮುಖಪುಟಮುಂಬೈ ಹೈಕೋರ್ಟ್‌: ಅತ್ಯಾಚಾರ ಸಂತ್ರಸ್ತೆ ವರ್ಷದೊಳಗೆ ಪತ್ತೆಯಾದರೆ ಮದುವೆಯಾಗುವಂತೆ ಆರೋಪಿಗೆ ಆದೇಶ!

ಮುಂಬೈ ಹೈಕೋರ್ಟ್‌: ಅತ್ಯಾಚಾರ ಸಂತ್ರಸ್ತೆ ವರ್ಷದೊಳಗೆ ಪತ್ತೆಯಾದರೆ ಮದುವೆಯಾಗುವಂತೆ ಆರೋಪಿಗೆ ಆದೇಶ!

- Advertisement -
- Advertisement -

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿ, ಜೊತೆಗೆ ಒಂದು ವರ್ಷದೊಳಗೆ ಪತ್ತೆಯಾದಲ್ಲಿ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂಬ ಷರತ್ತು ವಿಧಿಸಿದೆ. ಆದಾಗ್ಯೂ, ಆರೋಪಿಗೆ ವಿಧಿಸಿದ ಈ ಷರತ್ತಿನ ಅವಧಿ ಒಂದು ವರ್ಷ ಆಗಿದ್ದು, ಅದರ ನಂತರ ಷರತ್ತು ಇರುವುದಿಲ್ಲ ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಪೀಠವು ಅಕ್ಟೋಬರ್ 12 ರಂದು ನೀಡಿದ ಆದೇಶದಲ್ಲಿ ಹೇಳಿದೆ.

ಆರೋಪಿ ಮತ್ತು 22 ವರ್ಷದ ಯುವತಿ ಒಪ್ಪಿತ ಸಂಬಂಧದಲ್ಲಿದ್ದರು, ಆದರೆ ಆ ಯುವತಿ ಗರ್ಭಿಣಿ ಎಂದು ತಿಳಿದ ನಂತರ ಆರೋಪಿಯು ಅವರಿಂದ ತಪ್ಪಿಸಿಕೊಳ್ಳಲು ಪ್ರಾರಂಭಿಸಿದ್ದನು. ಈ ವೇಳೆ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಯುವತಿಯು 2020 ರ ಫೆಬ್ರವರಿಯಲ್ಲಿ ಯುವಕನ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ನಂತರ ಆತನನ್ನು ಬಂಧಿಸಲಾಯಿತು. ಯುವತಿ ತಮ್ಮ ದೂರಿನಲ್ಲಿ, ತಾವಿಬ್ಬರು 2018 ರಿಂದ ಸಂಬಂಧ ಹೊಂದಿದ್ದಾಗಿ ಮತ್ತು ತಮ್ಮ ಸಂಬಂಧಗಳ ಬಗ್ಗೆ ಇಬ್ಬರ ಕುಟುಂಬಗಳಿಗೆ ತಿಳಿದಿತ್ತು, ಜೊತೆಗೆ ಅವರು ಅದನ್ನು ವಿರೋಧಿಸಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ | ‘ಆಪಾದಿತ ‘ಶಿವಲಿಂಗ’ದ ವೈಜ್ಞಾನಿಕ ತನಿಖೆ ಇಲ್ಲ’; ವಾರಣಾಸಿ ನ್ಯಾಯಾಲಯ ತೀರ್ಪು

2019 ರಲ್ಲಿ, ಯುವತಿಯು ತಾನು ಗರ್ಭಿಣಿ ಎಂಬುವುದನ್ನು ಆರೋಪಿ ಯುವಕನಿಗೆ ತಿಳಿಸಿದ್ದು, ಆದರೆ ಯುವಕನು ತಪ್ಪಿಸಿಕೊಳ್ಳಲು ಪ್ರಾರಂಭಿಸಿದ್ದನು. ತನ್ನ ಗರ್ಭಧಾರಣೆಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ಮಹಿಳೆ ತನ್ನ ಮನೆಯನ್ನು ತೊರೆದಿದ್ದರು. ಜನವರಿ 27, 2020 ರಂದು, ಅವರು ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

ಜನವರಿ 30 ರಂದು ಯುವತಿಯು ಮಗುವನ್ನು ಕಟ್ಟಡದ ಮುಂದೆ ಬಿಟ್ಟು ಹೋಗಿದ್ದು, ನಂತರ ಮಗುವನ್ನು ತ್ಯಜಿಸಿದ್ದಕ್ಕಾಗಿ ಆಕೆಯ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ನ್ಯಾಯಮೂರ್ತಿ ಡಾಂಗ್ರೆ ಅವರು ತಮ್ಮ ಆದೇಶದಲ್ಲಿ, “ಯುವತಿ ನ್ಯಾಯಾಲಯದ ಮುಂದೆ ಬರದೆ ಇರಲು ಇದೇ ಕಾರಣಕ್ಕೆ ಇರಬಹುದು” ಎಂದು ಹೇಳಿದ್ದಾರೆ.

ಈ ನಡುವೆ ಯುವತಿಯನ್ನು ತಾನು ಮದುವೆಯಾಗುವುದಾಗಿ ಮತ್ತು ಮಗುವಿನ ಪಿತೃತ್ವವನ್ನು ಸ್ವೀಕರಿಸಲು ತಾನು ಸಿದ್ಧನಿರುವುದಾಗಿ ಆರೋಪಿ ಯುವಕ ಹೈಕೋರ್ಟ್‌ಗೆ ಭರವಸೆ ನೀಡಿದ್ದಾನೆ. ಆದರೆ ಯುವತಿ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದು, ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗಿದ್ದ ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುರುಘಾ ಶರಣರ ಮೇಲೆ ಮತ್ತೊಂದು ಪ್ರಕರಣ: ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್

“ಇಂತಹ ಸಂದರ್ಭಗಳಲ್ಲಿ ಘಟನೆ ವರದಿಯಾದಾಗ, ಸಂತ್ರಸ್ತೆ ಯುವತಿ ವಯಸ್ಕರಾಗಿದ್ದರು ಮತ್ತು ಸಂಬಂಧವು ಒಮ್ಮತದಿಂದ ಕೂಡಿತ್ತು ಎಂದು ಅವರು ಈಗಾಗಲೇ ಹೇಳಿದ್ದಾರೆ” ಎಂದು ಹೈಕೋರ್ಟ್ ಹೇಳಿದೆ.

“ಅರ್ಜಿದಾರ ಯುವಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ಸಂತ್ರಸ್ತೆ ಒಂದು ವರ್ಷದೊಳಗೆ ಪತ್ತೆಯಾದರೆ, ಯುವಕ ಅವರನ್ನು ವಿವಾಹವಾಗಬೇಕು ಮತ್ತು ವರ್ಷದ ನಂತರ ಈ ಷರತ್ತಿಗೆ ಬದ್ದರಾಗಬೇಕಿಲ್ಲ” ಆದೇಶವು ಹೇಳಿದ್ದು, 25 ಸಾವಿರ ರೂ.ಗಳ ಬಾಂಡ್‌ನಲ್ಲಿ ನ್ಯಾಯಾಲಯವು ಯುವಕನಿಗೆ ಜಾಮೀನು ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...