Homeಮುಖಪುಟಮಹಾರಾಷ್ಟ್ರ ಉಪಚುನಾವಣೆ: ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ಗೆಲುವಿಗಾಗಿ ನಾಮಪತ್ರ ಹಿಂಪಡೆದ ಬಿಜೆಪಿ

ಮಹಾರಾಷ್ಟ್ರ ಉಪಚುನಾವಣೆ: ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ಗೆಲುವಿಗಾಗಿ ನಾಮಪತ್ರ ಹಿಂಪಡೆದ ಬಿಜೆಪಿ

- Advertisement -
- Advertisement -

ಮಹಾರಾಷ್ಟ್ರದ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯು ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ತಮ್ಮ ವಿರೋಧಿ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ಗೆಲುವಿಗೆ ನೆರವಾದ ಅಪರೂಪದ ಘಟನೆ ನಡೆದಿದೆ.

ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಶಾಸಕರಾಗಿದ್ದ ರಮೇಶ್ ಲಟ್ಕೆ ಎಂಬುವವರು ಕಳೆದ ವರ್ಷ ಮೃತಪಟ್ಟಿದ್ದರು. ಹಾಗಾಗಿ ಆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಲಾಗಿತ್ತು. ಅವರ ಪತ್ನಿ ರುತುಜ ಲಟ್ಕೆಯವರಿಗೆ ಉದ್ಧವ್ ಬಣ ಟಿಕೆಟ್ ನೀಡಿತ್ತು. ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಸೂಚಿಸಿತ್ತು. ಬಿಜೆಪಿಯು ಮುರ್ಜಿ ಪಟೇಲ್ ಎಂಬುವವರಿಗೆ ಟಿಕೆಟ್ ನೀಡಿತ್ತು. ಸದ್ಯ ಅವರು ನಾಮಪತ್ರ ವಾಪಸ್ ಹಿಂಪಡೆಯುವ ಮೂಲಕ ಎದುರಾಳಿಯ ಸುಲಭ ಗೆಲುವಿಗೆ ಕಾರಣರಾಗಿದ್ದಾರೆ.

ಉದ್ಧವ್ ಠಾಕ್ರೆ ಬಣದ ಶಿವಸೇನೆಯ ರುತುಜ ಲಟ್ಕೆಯವರಿಗೆ ಪಕ್ಷಬೇಧವಿಲ್ಲದೆ ಬೆಂಬಲ ಹರಿದುಬಂದಿತ್ತು. ಅವರನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಮೊದಲು ಬೆಂಬಲ ಘೋಷಿಸಿದ್ದರು. ನಂತರ ಬಿಜೆಪಿ ಪಕ್ಷಕ್ಕೆ ಪತ್ರ ಬರದು ಅವರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂದು ಮನವಿ ಮಾಡಿದ್ದರು. ಸಿಎಂ ಏಕನಾಥ್ ಶಿಂಧೆಯವರ ಬಣದ ಶಿವಸೇನೆ ಶಾಸಕ ಪ್ರತಾಪ್ ಸರ್‌ನಾಯ್ಕ್ ಕೂಡ ಪಕ್ಷದ ವತಿಯಿಂದ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂದು ಪತ್ರ ಬರೆದಿದ್ದರು. ಎನ್‌ಸಿಪಿ ಮುಖಂಡ ಶರದ್ ಪವಾರ್ ಕೂಡ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂದು ಮನವಿ ಮಾಡಿದ್ದರು.

ಅಂಧೇರಿಯ ಶಾಸಕರಾಗಿದ್ದ ರಮೇಶ್ ಲಟ್ಕೆಯವರು ಕಳೆದ ವರ್ಷ ಅನಿರೀಕ್ಷಿತ ಸಾವಿಗೀಡಾಗಿದ್ದರು. ಆ ಸ್ಥಾನಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿತ್ತು. ಕೇವಲ ಒಂದೂವರೆ ವರ್ಷ ಅಧಿಕಾರವಧಿಯ ಆ ಸ್ಥಾನವನ್ನು ಅವರಿಗೆ ಪತ್ನಿಗೆ ಬಿಟ್ಟುಕೊಡಬೇಕು ಎಂಬ ಅನುಕಂಪದ ಮಾತುಗಳು ಕೇಳಿಬಂದಿದ್ದವು. ಹಾಗಾಗಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ನಾಮಪತ್ರ ಸಲ್ಲಿಸಿಲ್ಲ ಎನ್ನಲಾಗಿದೆ.

ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಮುಖ್ಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಉಪ ಚುನಾವಣೆಯು ನವೆಂಬರ್ 03ರಂದು ನಡೆಯಲಿದೆ.

ಇದನ್ನೂ ಓದಿ; ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಈ ಕ್ಷಣಕ್ಕಾಗಿ ಬಹುದಿನದಿಂದ ಕಾಯುತ್ತಿದ್ದೆ – ಮತ ಚಲಾಯಿಸಿದ ನಂತರ ಸೋನಿಯಾ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...