ಜಾರ್ಖಂಡ್ ರಾಜ್ಯದ ಧನಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್‌ರವರಿಗೆ ಜಾಮೀನು ನೀಡದ ಕಾರಣಕ್ಕೆ ದುಷ್ಕರ್ಮಿಗಳು ಆಟೋದಿಂದ ಗುದ್ದಿ ಕೊಲೆಗೈದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸುಮೊಟೋ ಪ್ರಕರಣವೆಂದು ದಾಖಲಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ವಿಚಾರಣೆಯ ಸದ್ಯದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಜಾರ್ಖಂಡ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡೈರಕ್ಟರ್ ಜನರಲ್ ಆಫ್‌ ಪೊಲೀಸ್‌ಗೆ ಸೂಚಿಸಿದೆ. ಅಲ್ಲದೆ ಜಾರ್ಖಂಡ್ ಹೈಕೋರ್ಟ್ ನಡೆಸುವ ವಿಚಾರಣೆಯಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವುದಿಲ್ಲಿ ಎಂದು ಸ್ಪಷ್ಟಪಡಿಸಿದೆ.

ಧನಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್‌ರವರು ಬುಧವಾರ ಬೆಳಿಗ್ಗೆ 5 ಗಂಟೆಯ ಸಮಯದಲ್ಲಿ ಜಾಗಿಂಗ್ ಮಾಡುತ್ತಿದ್ದರು. ಅವರ ಮನೆಯಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ಅವರು ರಸ್ತೆ ಬದಿಯಲ್ಲಿ ಜಾಗ್ ಮಾಡುತ್ತಿರುವಾಗಿ ಹಿಂದಿನಿಂದ ಬಂದ ಆಟೋವೊಂದು ಅವರನ್ನೇ ಗುರಿಯಾಗಿಸಿಕೊಂಡು ಗುದ್ದಿದೆ. ಇದರ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಿದರೂ ಸಹ ಅವರು ಬದುಕುಳಿಯಲಿಲ್ಲ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಹಿರಿಯ ವಕೀಲರಾದ ವಿಕಾಸ್‌ ಸಿಂಗ್‌ರವರು ಈ ಪ್ರಕರಣವನ್ನು ಸುಪ್ರಿಂ ಸುಮೋಟೊ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದರು. “ಈ ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸಬೇಕು. ಜಾಮೀನು ನೀಡದ ಕಾರಣಕ್ಕೆ ಮಾಫಿಯಾಗಳು ರಸ್ತೆಯಲ್ಲಿಯೇ ಒಬ್ಬ ನ್ಯಾಯಾಧೀಶರನ್ನು ಕೊಲ್ಲುವುದಾದರೆ ಈ ದೇಶದಲ್ಲಿ ನ್ಯಾಯಾಂಗವಿದೆಯೇ? ಇದು ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಅವರು ಕಿಡಿಕಾರಿದ್ದರು.


ಇದನ್ನೂ ಓದಿ: ಜಾರ್ಖಂಡ್ ನ್ಯಾಯಾಧೀಶರಿಗೆ ಆಟೋದಿಂದ ಗುದ್ದಿ ಸಾಯಿಸಿದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಸೆರೆ

LEAVE A REPLY

Please enter your comment!
Please enter your name here