Homeಮುಖಪುಟರಾಜಸ್ಥಾನ: ಮರ ಕಡಿದ ಶಂಕೆಯ ಮೇಲೆ ಮುಸ್ಲಿಂ ಯುವಕನಿಗೆ ಥಳಿಸಿ ಹತ್ಯೆ; ಅರಣ್ಯಾಧಿಕಾರಿಗಳು ಸೇರಿ 10...

ರಾಜಸ್ಥಾನ: ಮರ ಕಡಿದ ಶಂಕೆಯ ಮೇಲೆ ಮುಸ್ಲಿಂ ಯುವಕನಿಗೆ ಥಳಿಸಿ ಹತ್ಯೆ; ಅರಣ್ಯಾಧಿಕಾರಿಗಳು ಸೇರಿ 10 ಆರೋಪಿಗಳ ಬಂಧನ

- Advertisement -
- Advertisement -

ರಾಜಸ್ಥಾನದ ಆಲ್ವಾರ್ ನಲ್ಲಿ ಗುಂಪೊಂದು ಮರ ಕಡಿಯುತ್ತಿದ್ದಾರೆಂದು ಶಂಕಿಸಿ ಮೂವರು ಮುಸ್ಲಿಂ ಯುವಕರಿಗೆ ಥಳಿಸಿದ್ದು, ಅದರಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ವಾಸಿಂ (27) ಹಲ್ಲೆಗೊಳಗಾಗಿ ಮೃತಪಟ್ಟ ಯುವಕ. ಘಟನೆಯಲ್ಲಿ ಆಸಿಫ್ ಮತ್ತು ಅಜರುದ್ದೀನ್  ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅರಣ್ಯದಿಂದ ಮರಗಳನ್ನು ಕಡಿಯುತ್ತಿದ್ದಾರೆ ಎಂಬ ಶಂಕೆಯಲ್ಲಿ ಗುಂಪೊಂದು ಮೂವರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದರಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಿಂದ ಬೆಳಕಿಗೆ ಬಂದಿದೆ.

ಅಲ್ವಾರ್‌ನ ಬನ್ಸೂರ್ ತಹಸಿಲ್‌ನ ರಾಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯಲು ಹೋಗುತ್ತಿದ್ದಾರೆ ಎಂದು ಆರೋಪಿಸಿ ಮೂವರು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದೆ. ಗುರುವಾರ (ಆ.18) ರಾತ್ರಿ ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಮೂವರು ಮುಸ್ಲಿಂ ಯುವಕರು ತಮ್ಮ ಪಿಕಪ್ ಜೀಪಿನಲ್ಲಿ ಹೋಗುತ್ತಿದ್ದಾಗ ಕಾಡಿನಲ್ಲಿ ಸುಮಾರು ಹನ್ನೆರಡು ಜನರ ಗುಂಪೊಂದು ಅವರನ್ನು ತಡೆದಿದೆ. ಮರಗಳನ್ನು ಕಡಿಯಲು ಕಾಡಿಗೆ ಹೋಗುತ್ತಿದ್ದಾರೆ ಎಂಬ ಅನುಮಾನದ ಮೇಲೆ ಗುಂಪು ಮೂವರನ್ನು ಜೀಪಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿದೆ.

ಯುವಕರ ಮೇಲೆ ದಾಳಿ ನಡೆಸಿದ ಗುಂಪಿನೊಂದಿಗೆ ನಾಲ್ವರು ಅರಣ್ಯಾಧಿಕಾರಿಗಳು ಇದ್ದರು ಎಂದು free press journal ವರದಿ ತಿಳಿಸಿದೆ.  ಬಳಿಕ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅಲ್ಲಿ  ಓರ್ವ ಯುವಕ  ಸಾವನ್ನಪ್ಪಿದ್ದಾನೆ.

ಗಾಯಗೊಂಡ ಯುವಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಮೃತ ವಾಸೀಂ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗ ವಾಸಿಂ (27) ಇಬ್ಬರು ಸ್ನೇಹಿತರಾದ ಆಸಿಫ್ ಮತ್ತು ಅಜರುದ್ದೀನ್ ಜೊತೆ ಜೀಪಿನಲ್ಲಿ ತೆರಳುವಾಗ, ನರೋಲ್ ಗ್ರಾಮದ ಬಳಿ ಗುಂಪು ಅವರ  ಜೀಪನ್ನು ನಿಲ್ಲಿಸಿ ಹಲ್ಲೆ ನಡೆಸಿದೆ. ಇದರಿಂದ ಮಗ ಮೃತಪಟ್ಟಿದ್ದಾನೆಂದು ಆರೋಪಿಸಲಾಗಿದೆ.

ಈ ಕುರಿತು ಹರಸೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವರದಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ದಾಳಿಯ ವೇಳೆ ಗುಂಪಿನೊಂದಿಗೆ ಇದ್ದ ನಾಲ್ವರು ಅರಣ್ಯಾಧಿಕಾರಿಗಳೂ ಸೇರಿದ್ದಾರೆ.

ಹೆಚ್ಚುವರಿ ಎಸ್ಪಿ ಜಾಗ್ರಾಮ್ ಮೀನಾ ಈ ಕುರಿತು ಎಎನ್‌ಐ ಜೊತೆ ಮಾತನಾಡಿದ್ದು, ನರೋಲ್ ಗ್ರಾಮದಲ್ಲಿ ನಡೆದ ಗುಂಪು ಹತ್ಯೆಯ ಬಗ್ಗೆ ನಮಗೆ ದೊರೆತ ಮಾಹಿತಿ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಚಿಕಿತ್ಸೆ ವೇಳೆ ಒಬ್ಬರು ಸಾವನ್ನಪ್ಪಿದರು. ನಾವು ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ  ಎಂದು ಹೇಳಿದ್ದಾರೆ.

ಇದನ್ನು ಓದಿ: ಅಮೇಥಿಯಿಂದಲೇ ರಾಹುಲ್ ಗಾಂಧಿ ಸ್ಪರ್ಧೆ: ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...