Homeಮುಖಪುಟರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ ನಳೀನ್ ಕುಮಾರ್ ಕಟೀಲ್: ತೀವ್ರ...

ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ ನಳೀನ್ ಕುಮಾರ್ ಕಟೀಲ್: ತೀವ್ರ ಟೀಕೆ

- Advertisement -
- Advertisement -

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೊಮ್ಮೆ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ಕೀಳು ಮಟ್ಟದ ಅಸಹ್ಯಕರ ಹೇಳಿಕೆ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ವೈಯಕ್ತಿಯ ತೇಜೋವಧೆ ಮಾಡುವ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಟೀಲ್, “ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೋವಿಡ್ 19 ಲಸಿಕೆ ತೆಗೆದುಕೊಳ್ಳಬೇಡಿ, ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಜನರಿಗೆ ಹೇಳಿದರು. ಆದರೆ ರಾತ್ರಿ ವೇಳೆ ಕದ್ದು ರಾಹುಲ್ ಗಾಂಧಿ, ಸಿದ್ದರಾಮಯ್ಯ ಲಸಿಕೆ ತೆಗೆದುಕೊಂಡರು. ಅದಕ್ಕೆ ಮೊನ್ನೆ ನಮ್ಮ ಎಂಎಲ್‌ಸಿ ಮಂಜುನಾಥ್ ಹೇಳಿದರು, ಅದಕ್ಕೆ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ. ಏಕೆಂದರೆ ಹೇಗೂ ಅವರಿಗೆ ಮಕ್ಕಳಾಗುವುದಿಲ್ಲ ಅಂತ” ಎಂದಿದ್ದಾರೆ.

ನಳೀನ್ ಕುಮಾರ್ ಕಟೀಲ್ ಮೌಖಿಕ ಅತಿಸಾರದಿಂದ ಬಳಲುತ್ತಿದ್ದಾರೆ – ಕಾಂಗ್ರೆಸ್

“ಕರ್ನಾಟಕದ ಬಿಜೆಪಿಯ ಸರ್ಕಸ್‌ನಲ್ಲಿ ಜೋಕರ್ ಒಬ್ಬ ಶಾಶ್ವತ ಮೌಖಿಕ ಅತಿಸಾರದಿಂದ ಬಳಲುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಎರಡೂ ವಿಷಯದಲ್ಲಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಸುದ್ದಿಯಾಗಲು ಅವಿವೇಕದ ಹೇಳಿಕೆಗಳನ್ನು ನೀಡುತ್ತಾರೆ. ಅವರೆ ನಳೀನ್ ಕುಮಾರ್ ಕಟೀಲ್ ಆಗಿದ್ದು ದಯವಿಟ್ಟು ಆತನನ್ನು ನಿರ್ಲಕ್ಷಿಸಿ” ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣ್‌ದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.

ಮುಂದುವರಿದು “ಇಂತಹ ಮೂರ್ಖತನಗಳು ಯಾವಾಗಲೂ ಹೇಡಿಗಳು ಮತ್ತು ಮೂರ್ಖರ ಆಶ್ರಯವಾಗಿದೆ – ಇದು ಬಿಜೆಪಿಯ ಹುಟ್ಟುಗುಣವಾಗಿದೆ. ಅವರು ವಿಜ್ಞಾನ ಮತ್ತು ವಿಜ್ಞಾನಿಗಳನ್ನು ಅವಮಾನಿಸುತ್ತಾರೆ. ಅವರು ವೈಜ್ಞಾನಿಕ ಮನೋಭಾವವನ್ನು ವಿರೋಧಿಸುತ್ತಾರೆ. ಅವರು ಸಾಂಪ್ರದಾಯಿಕತೆಯನ್ನು ಉತ್ತೇಜಿಸುತ್ತಾರೆ. ಅವರನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆಯಬೇಕು” ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, “ನಮ್ಮ ಅಧ್ಯಕ್ಷರು ಯಾವ ಸಂದರ್ಭದಲ್ಲಿ ಆ ಟೀಕೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ನಾನು ಆ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಮತ್ತು ಅದರಿಂದ ದೂರವಿರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರವರು “ಎಷ್ಟೊಂದು ಅಸಹ್ಯಕರ” ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರಾಗಲಿ, ಸಿದ್ದರಾಮಯ್ಯನವರಾಗಲಿ ಕೋವಿಡ್ ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂಬ ಹೇಳಿಕೆಯನ್ನು ಎಂದೂ ನೀಡಿಲ್ಲ. ರಾಹುಲ್ ಗಾಂಧಿ ಮದುವೆಯಾಗದಿರುವುದು ಅವರ ವೈಯಕ್ತಿಕ ವಿಷಯ. ಆದರೂ ಅನಾವಶ್ಯಕವಾಗಿ ಅವರ ಹೆಸರನ್ನು ಎಳೆದುತಂದು ನಳೀನ್ ಕುಮಾರ್ ಕಟೀಲ್ ಅಸಹ್ಯವಾಗಿ ಅಪಹಾಸ್ಯ ಮಾಡುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರನ ಲಂಚದ ಬೇಡಿಕೆಯನ್ನು ಸೆರೆ ಹಿಡಿದ ಸ್ಮಾರ್ಟ್‌ ವಾಚ್: ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದು ಹೀಗೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...