Homeಕರ್ನಾಟಕಬೆಲೆ ಏರಿಕೆಯ ಬಿಸಿ: ನಂದಿನಿ ಹಾಲು, ಮೊಸರು ದರದಲ್ಲಿ ಲೀಟರ್‌ಗೆ 3 ರೂ ಏರಿಕೆ

ಬೆಲೆ ಏರಿಕೆಯ ಬಿಸಿ: ನಂದಿನಿ ಹಾಲು, ಮೊಸರು ದರದಲ್ಲಿ ಲೀಟರ್‌ಗೆ 3 ರೂ ಏರಿಕೆ

- Advertisement -
- Advertisement -

ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 3 ರೂ ಏರಿಕೆ ಮಾಡುವುದಾಗಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ನಿರ್ಧಿರಿಸಿದೆ. ಪರಿಷ್ಕೃತ ದರವು ನವೆಂಬರ್ 15ರ ಮಂಗಳವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಇದು ಈಗಾಗಲೇ ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರ ಮೇಲಿನ ಮತ್ತೊಂದು ಹೊರೆಯಾಗಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ವತಿಯಿಂದ ಹಾಲಿನ ಪರಿಷ್ಕೃತ ದರದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಂತೆ ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್‌ಗೆ 48 ರೂಗಳಿಂದ 51 ರೂಗಳಿಗೆ ಮತ್ತು ಟೋನ್ಡ್‌ ಹಾಲಿನ ದರ 37ರೂಗಳಿಂದ 40 ರೂಗಳಿಗೆ ಏರಿಸಲಾಗಿದೆ. ಸ್ಪೆಷಲ್ ಹಾಲಿನ ದರ 43 ರೂಗಳಿಂದ 46 ರೂಗಳಿಗೆ ಏರಿಸಲಾಗಿದೆ. ಅದೇ ರೀತಿ ಮೊಸರಿನ ಬೆಲೆಯನ್ನು 45 ರೂಗಳಿಂದ 48 ರೂಗಳಿಗೆ ಏರಿಸಲಾಗಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.

ಡಬಲ್ ಟೋನ್ಡ್ ಹಾಲು 36 ರೂಗಳಿಂದ 39 ರೂಗಳಿಗೆ, ಸಂತೃಪ್ತಿ ಹಾಲು 50 ರೂಗಳಿಂದ 53 ರೂಗಳಿಗೆ ಮತ್ತು ಶುಭಂ ಹಾಲಿನ ದರವನ್ನು 43 ರೂಗಳಿಂದ 46 ರೂಗಳಿಗೆ ಏರಿಸಲಾಗಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸೆಪ್ಟಂಬರ್ 12 ರಂದು ನಡೆದ ವಾರ್ಷಿಕ ಸಭೆಯಲ್ಲಿ ಹಾಲಿನ ದರ ಹೆಚ್ಚಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದಿದ್ದರು. ಅದೀಗ ಜಾರಿಗೆ ಬಂದಿದೆ.

ಇದನ್ನೂ ಓದಿ: ‘ವಾಟ್ಸ್‌ಅಪ್‌‌ ಕಮ್ಯುನಿಟಿ’ ರಚಿಸುವುದು ಹೇಗೆ? ಏನಿದರ ವಿಶೇಷ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...