Homeಕರ್ನಾಟಕನರೇಂದ್ರ ಮೋದಿಯೇ ದೇಶದ್ರೋಹಿ-ಕೇಂದ್ರ ಸರ್ಕಾರದ ದಬ್ಬಾಳಿಕೆ ನಿಲ್ಲಲಿ

ನರೇಂದ್ರ ಮೋದಿಯೇ ದೇಶದ್ರೋಹಿ-ಕೇಂದ್ರ ಸರ್ಕಾರದ ದಬ್ಬಾಳಿಕೆ ನಿಲ್ಲಲಿ

- Advertisement -
- Advertisement -

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಭಾಗವಾಗಿ ಫೆಬ್ರವರಿ 6 ರಂದು ಹಮ್ಮಿಕೊಂಡಿದ್ದ ಚಕ್ಕಾ ಜಾಮ್ ಬೆಂಬಲಿಸಿ ತುಮಕೂರಿನಲ್ಲಿ ರಾಜ್ಯ ರೈತ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ರಸ್ತೆ ತಡೆಗೆ ಇಳಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನ ನಿರತರ ನಡುವೆ ವಾಗ್ವಾದ ನಡೆದಿದೆ.

ಬಂಧಿತ ಪ್ರತಿಭಟನಾಕಾರರನ್ನು ಪೊಲೀಸರು ಚಿಲುಮೆ ಸಮುದಾಯ ಭವನದ ಆವರಣದಲ್ಲಿ ಇಟ್ಟರು. ಅಲ್ಲಿಯೇ ಧರಣಿ ಕುಳಿತ ಪ್ರತಿಭಟನಾಕಾರರು ಪೊಲೀಸರು ಶಾಂತಿಯುತ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು. ಮೂರು ಗಂಟೆಗಳ ಕಾಲ ಚಿಲುಮೆ ಸಮುದಾಯ ಭವನ ಆವರಣದಲ್ಲಿಯೇ ಧರಣಿ ನಡೆಸಿದ ಪ್ರತಿಭಟನಾಕಾರರು ಪೊಲೀಸರ ಕ್ರಮವನ್ನು ಖಂಡಿಸಿದರು. ರೈತರೊಂದಿಗೆ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳದೆ ದೌರ್ಜನ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಿಜವಾದ ದೇಶದ್ರೋಹಿ. ಸರ್ಕಾರ ದೇಶದ್ರೋಹ ಕೃತ್ಯದಲ್ಲಿ ತೊಡಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ರೈತ-ಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಎಐಟಿಯುಸಿ, ಎಐಡಿಎಸ್ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು. ಸರ್ಕಾರ ದಬ್ಬಾಳಿಕೆ ಮಾಡಿ ರೈತ ಚಳವಳಿಯನ್ನು ಬಗ್ಗುಬಡಿಯಲು ಯತ್ನಿಸುತ್ತಿದೆ. ರೈತರ ಮೇಲೆ ದಾಳಿ ನಡೆಸುತ್ತಿದೆ. ನೆಪಮಾತ್ರಕ್ಕೆ ಮಾತುಕತೆಗೆ ಕರೆಯುತ್ತಿದೆ. ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, “ರಾಷ್ಟ್ರಮಟ್ಟದ ಕರೆಗೆ ಓಗೊಟ್ಟಿದ್ದೇವೆ. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಸರ್ಕಾರ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಬಜೆಟ್‌ನಲ್ಲೂ ರೈತರಿಗೆ ಪರಿಹಾರ ನೀಡಿಲ್ಲ. ವೈಜ್ಞಾನಿಕ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಬಗ್ಗೆ ಪ್ರಸ್ತಾಪವಿಲ್ಲ. ಅಷ್ಟೇ ಅಲ್ಲ ನೀರಾವರಿಗೂ ಹಣ ಮೀಸಲಿಟ್ಟಿಲ್ಲ. ಇದು ರೈತರಿಗೆ ಅಪಾಯದ ಕರೆಗಂಟೆಯಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಎಳೆದಾಡಿ ಬಂಧನ ಮಾಡಿದೆ. ಪೊಲೀಸರ ಕ್ರಮ ಖಂಡನೀಯ” ಎಂದರು.

“ದೇಶದಲ್ಲಿ ಸರ್ಕಾರಗಳು ಚಳವಳಿಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಹೊರಟರೆ ಅದು ಜನಾಂದೋಲನವಾಗಿ ರೂಪುಗೊಳ್ಳಲಿದೆ. ಹಳ್ಳಿಹಳ್ಳಿಗಳಿಂದಲೂ ರೈತರು ಜನಸಾಮಾನ್ಯರು ಎದ್ದು ಬರಲಿದ್ದಾರೆ ಎಂಬ ಎಚ್ಚರ ಸರ್ಕಾರಕ್ಕೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಸರ್ಕಾರ ರೈತರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಬಂಧಿತ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಹೋರಾಟನಿರತ ರೈತರ ಮೇಲೆ ಹಾಕಿರುವ ದೇಶದ್ರೋಹ, ಕೊಲೆಯತ್ನ ಪ್ರಕರಣಗಳನ್ನು ಹಿಂಪಡೆಯಬೇಕು” ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ನಾವು ರೈತರನ್ನು ಬೆಂಬಲಿಸಬೇಕು, ಏಕೆಂದರೆ… – ನಿರ್ದೇಶಕ ಪ. ರಂಜಿತ್ ಟ್ವೀಟ್

ಆರ್.ಕೆ.ಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ ಮಾತನಾಡಿ, “ರೈತರ ಬದುಕು ದುಸ್ಥರವಾಗಿದೆ. ಕೃಷಿ ಕಾಯ್ದೆಗಳು ಜಾರಿಗೊಂಡರೆ ರೈತರು, ಗ್ರಾಹಕರು, ಜನಸಾಮಾನ್ಯರು ಬದುಕು ತೀವ್ರ ಅಸ್ತವ್ಯಸ್ತಗೊಳ್ಳುತ್ತದೆ. ಕೃಷಿ ಕಾರ್ಪೋರೇಟ್ ಕುಳಗಳ ಹಿಡಿತಕ್ಕೆ ಸಿಕ್ಕಿ ಶೋಷಣೆ ಹೆಚ್ಚುತ್ತದೆ. ಆಹಾರದ ಕೊರತೆ ಹೆಚ್ಚಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, “ಇಂದಿರಾಗಾಂಧಿ, ಮನಮೋಹನ್ ಸಿಂಗ್, ವಾಜಪೇಯಿ ಅಂಥವರು ವಿದ್ಯಾವಂತರಾಗಿದ್ದರು. ಅವರ ಕಾಲದಲ್ಲಿ ಆಡಳಿತ ಪಾರದರ್ಶಕವಾಗಿತ್ತು. ರೈತರು ಸಾರ್ವಜನಿಕರ ರಕ್ಷಣೆಗೆ ಒತ್ತು ನೀಡಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಪ್ರಧಾನಿ ನರೇಂದ್ರ ಮೋದಿ ಅವಿದ್ಯಾವಂತ. ಸರ್ಕಾರದಲ್ಲಿರುವವರಿಗೆ ತಿಳುವಳಿಕೆ ಇಲ್ಲ. ತೋಮರ್ ಅವರಿಗೆ ಕೃಷಿ ಹಿನ್ನೆಲೆ ಗೊತ್ತಿಲ್ಲ. ಸಂಸದರು ಧ್ವನಿ ಎತ್ತುತ್ತಿಲ್ಲ” ಎಂದು ಆರೋಪಿಸಿದರು.

“ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಏಕವ್ಯಕ್ತಿ ಮತ್ತು ಏಕಪಕ್ಷ ಆಡಳಿತ ಅಪಾಯಕಾರಿ ಎಂದು. ಅದೇ ರೀತಿ ಬಿಜೆಪಿ ನಡೆದುಕೊಳ್ಳುತ್ತಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ದೌರ್ಜನ್ಯ ಎಸಗಲಾಗುತ್ತಿದೆ. ಇದು ನಿಲ್ಲಬೇಕು” ಎಂದು ಅವರು ಒತ್ತಾಯಿಸಿದರು.

ಲೇಖಕಿ ಡಾ. ಅರುಂಧತಿ, ಹೋರಾಟಗಾರ್ತಿ ಕಲ್ಯಾಣಿ, ಮಂಜುಳ, ಆಶ್ವಿನಿ ಮೊದಲಾದವರು ಇದ್ದರು.

ಇದನ್ನೂ ಓದಿ: ‘ಅಧಿಕಾರಸ್ಥರು ರೈತರ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸಬೇಕು’: ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗ

ಪಂಜಾಬ್‌ನಲ್ಲಿ 4 ತಿಂಗಳಿಂದಲೂ ರಿಲಯನ್ಸ್ ಪೆಟ್ರೋಲ್ ಬಂಕ್ ಬಂದ್ ಮಾಡಿದ ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...