Homeಕರ್ನಾಟಕ’ನಿಮ್ಮ ದುರಹಂಕಾರದ ನೆತ್ತಿಯ ಮೇಲೆ ಕಾಲಿಟ್ಟು ನಡೆಯುತ್ತೇವೆ’: ಕರವೇ ಅಭಿಯಾನಕ್ಕೆ ವ್ಯಾಪಕ ಬೆಂಬಲ

’ನಿಮ್ಮ ದುರಹಂಕಾರದ ನೆತ್ತಿಯ ಮೇಲೆ ಕಾಲಿಟ್ಟು ನಡೆಯುತ್ತೇವೆ’: ಕರವೇ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಕರ್ನಾಟಕ ರಕ್ಷಣಾ ವೇದಿಕೆಯು ರೈತ ಹೋರಾಟ ಬೆಂಬಲಿಸಿ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.

- Advertisement -
- Advertisement -

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಶುಕ್ರವಾರ ರೈತ ಹೋರಾಟದೊಂದಿಗೆ ಕರ್ನಾಟಕ (#KarnatakaWithFarmersProtest) ಎಂಬ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿತ್ತು. ಈ ಅಭಿಯಾನವು ಇಂದು ಪ್ರಾರಂಭವಾಗಿದೆ. ಟ್ವಿಟ್ಟರ್‌‌ನಲ್ಲಿರುವ ಸಾವಿರಾರು ಕನ್ನಡಿಗರು ಅಭಿಯಾನದಲ್ಲಿ ಭಾಗವಹಿಸಿ ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

ಅಭಿಯಾನದ ಬಗ್ಗೆ ಶುಕ್ರವಾರದಂದು ಟ್ವೀಟ್ ಮಾಡಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, “ರೈತಪರ ಹೋರಾಟದಲ್ಲಿ ಕರ್ನಾಟಕ ಹಿಂದುಳಿದಿಲ್ಲ. ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಕನ್ನಡದ ಮನಸುಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದ್ದರು.

ನಾರಾಯಾಣ ಗೌಡ ಅವರ ವಿನಂತಿಯಂತೆ ಇಂದು ಹಲವಾರು ಕನ್ನಡಿಗರು ಟ್ವಿಟ್ಟರ್‌‌ನಲ್ಲಿ ರೈತ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ

ಮಹೇಶಾ ಕಾಶಿ ಅವರು, “ಕೃಷಿ ಬಿಲ್ಲನ್ನು ಎಲ್ಲಾ ಭಾಷೆಗಳಿಗೆ ಅನುವಾದ ಮಾಡದ್ದನ್ನು ನೋಡಿದರೆ,ಇಲ್ಲಿ ಏನನ್ನೋ ಮುಚ್ಚಿಟ್ಟು ಮಾಡುವ ಯತ್ನ ಅನಿಸುತ್ತಲ್ಲವೇ?? ರೈತರಿಗೆ ದ್ರೋಹ ಎಸೆಯುವ ಕಾರ್ಯ ಆಗುತ್ತಿದಿಯಾ??” ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಮಂತ್ರಿ ಅಮಿತ್‌ಶಾ ಹಾಗೂ ಪ್ರಧಾನಿಯೊಂದಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!

ಬಸವರಾಜು ಮಹಾದೇವಪುರ ಅವರು, “ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ’ ಎಂಬ ನಾಣ್ನುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು” ಎಂದು ಹೇಳಿದ್ದಾರೆ.

ಫೈಸಲ್ ಪೇರಾಜೆ ಅವರು, “ಯಾರು ಏನು ಹೇಳುತ್ತಿದ್ದಾರೆ ಎಂಬುವುದು ಮುಖ್ಯವಲ್ಲ, ಆದರೆ ಈಗ ಇಡೀ ಕರ್ನಾಟಕ ರೈತ ಪರವಾಗಿ ನಿಂತಿದೆ. ನಮ್ಮ ಜಯ ಖಂಡಿತಾ” ಎಂದು ಟ್ವೀಟ್‌ನಲ್ಲಿ ಬರೆದಿರುವ ಅವರು, “ನಿಮ್ಮ ದುರಹಂಕಾರದ ನೆತ್ತಿಯ ಮೇಲೆ ಕಾಲಿಟ್ಟು ನಡೆಯುತ್ತೇವೆ. ನಡೆವ ದಾರಿಗೆ ಮೊಳೆ ನೆಟ್ಟ ನಿಮ್ಮೆದೆಯೊಳಗೆ ಭಯ ಬಿತ್ತುತ್ತೇವೆ” ಎಂಬ ಬರಹವಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?

ನೂತನ ಅವರು, “ಅನ್ನವನ್ನು ತಿನ್ನಿ, ಸೆಗಣಿಯನ್ನಲ್ಲ. ನೀವು ಏನನ್ನು ತಿನ್ನುತ್ತೀರಿ ಎಂದು ನೀವೆ ತೀರ್ಮಾನಿಸಿ. ನಿಮಗೆ ಬಿರಿಯಾನಿ ಅಥವಾ ಪುಲಿಯೊಗರೆ ಬೇಕಾದರೂ ಅದಕ್ಕೆ ರೈತನೆ ಬೇಕು” ಎಂದು ಹೇಳಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿಯಾನದ ಪರವಾಗಿ ರೈತರಿಗೆ ಬೆಂಬಲಿಸಿ ನೀಡಿರುವ ಹೇಳಿಕೆಯನ್ನು ಕನ್ನಡ ಪರ ಹೋರಾಟಗಾರ ದಿನೇಶ್‌ ಕುಮಾರ್‌ ತಮ್ಮ ಟ್ವಿಟ್ಟರ್ ‌‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರವಿ ಕುಮಾರ್‌ ಅವರು, “ಒಕ್ಕೂಟ ವ್ಯವಸ್ಥೆ ನೆಟ್ಟಗಿರಬೇಕಂದ್ರೆ ಅಧಿಕಾರ ವಿಕೇಂದ್ರಿಕರಣ ಮುಂದುವರೆಸಿ. ಕೇಂದ್ರವು ದೇಶದ ರಕ್ಷಣೆ ಹಾಗು ವಿದೇಶಾಂಗ ನೀತಿ ಮಾತ್ರ ನೋಡಲಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ

ಬಸವರಾಜ ಬೆಂಡಿಗೇರಿಮಠ ಅವರು, “ಬಂಡವಾಳಶಾಹಿಗಳಿಗೆ ಬಕೆಟ್ ಹಿಡಿಯುತ್ತಿರುವ ನೀಚ ಸರ್ಕಾರಗಳ ವಿರುದ್ಧ ಈ ಪ್ರತಿಭಟನೆ ನ್ಯಾಯಕ್ಕಾಗಿ” ಎಂದು ಹೇಳಿದ್ದಾರೆ.

ಪ್ರಖ್ಯಾತ್ ಪುತ್ತೂರು ಅವರು “ರೈತರು ದೇಶದ ಆತ್ಮ ಇದ್ದಂತೆ, ಅವರನ್ನು ಗೌರವಿಸಿ,ಅವರ ನೋವುಗಳಿಗೆ ಸ್ಪಂದಿಸಿ ಧಿಕ್ಕರಿಸಬೇಡಿ” ಎಂದು ಹೇಳಿದ್ದಾರೆ.

ವಿನಯ್ ಕುಮಾರ್‌ ಆಲೂರು ಅವರು, “ರೈತ ಬೆಳೆಯುವ ಅನ್ನ ತಿನ್ನುವ ನಾನು, ರೈತರ ಹೋರಾಟವನ್ನು ಬೆಂಬಲಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...