Homeಮುಖಪುಟಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

- Advertisement -
- Advertisement -

ಸರಿಯಾಗಿ ಒಂದು ವರ್ಷದ ಹಿಂದೆ ಬರೆದಿದ್ದ ಈ ಲೇಖನವು ಮೊದಲು ಹಫಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿತ್ತು. ನರೇಂದ್ರ ಮೋದಿಯವರ ನೇತೃತ್ವದ ಈಗಿನ ಸರ್ಕಾರವು ಮತ್ತೆ ಗೆದ್ದುಬಂದ ಸರ್ಕಾರವಾದ್ದರಿಂದ ಒಂದು ಹಿನ್ನೋಟದ ಅಗತ್ಯವೂ ಇದೆ. ಹಾಗಾಗಿ ಇದನ್ನು ಪುನರ್‍ಮುದ್ರಿಸಲಾಗಿದೆ.

ಒಂದು ಹಳೆಯ ಜಾನಪದ ಕತೆ ಹೀಗಿದೆ: ತನ್ನ ಪಾಪಗಳನ್ನು ತೊಳೆಯಲು ಒಬ್ಬ ವ್ಯಕ್ತಿ ದೀರ್ಘಕಾಲ ಘನಘೋರ ತಪಸ್ಸು ಮಾಡುತ್ತಾನೆ. ದೇವರು ಆತನ ಮುಂದೆ ಪ್ರತ್ಯಕ್ಷನಾಗಿ ಒಂದು ವರವನ್ನು ದಯಪಾಲಿಸುತ್ತಾನೆ. ಆದರೆ, ಒಂದು ಶರತ್ತು ಇದೆ. ಅದೆಂದರೆ, ಅವನು ಏನು ಕೇಳುತ್ತಾನೋ ಅದರ ಎರಡು ಪಾಲು ಅವನ ಗೆಳೆಯನಿಗೆ ಸಿಗುತ್ತದೆ. ಗೆಳೆಯನಿಗೆ ಸಿಗುತ್ತದೆ ಎಂದು ಚಿಂತಿತನಾದ ಆ ವ್ಯಕ್ತಿ ಸ್ವಲ್ಪ ಕಾಲ ಯೋಚಿಸಿ, ತನ್ನ ಒಂದು ಕಣ್ಣು ತೆಗೆಯುವಂತೆ ಹೇಳುತ್ತಾನೆ. ಅವನ ಗೆಳೆಯ ಎರಡೂ ಕಣ್ಣು ಕಳೆದುಕೊಂಡು ಸಂಪೂರ್ಣ ಕುರುಡನಾಗುತ್ತಾನೆ.
ನರೇಂದ್ರ ಮೋದಿಯ ಭಾರತದಲ್ಲಿ ಇದು ಕತೆಯಾಗಿ ಉಳಿದಿಲ್ಲ. ಅದು ಒಂದು ಆಡಳಿತ ಪದ್ಧತಿಯಾಗಿ ಬೆಳೆದಿದೆ. ಒಬ್ಬ ವ್ಯಕ್ತಿಯ ಅತ್ಯಂತ ಅಭದ್ರತೆಯೇ ಆಡಳಿತಕ್ಕೆ ಚಾಲಕಶಕ್ತಿಯಾಗಿದೆ. ಅದು ಹೇಗೆಂದರೆ ತನ್ನ ಸಂಕಷ್ಟಗಳನ್ನು “ಇತರರ” ವಿರುದ್ಧ ಹೋಲಿಸಲು ಕಲಿಸುವುದರ ಮೂಲಕ. ಕಳೆದ ಐದು ವರ್ಷಗಳಲ್ಲಿ ಈ “ಇತರರು” ಬೇರೆಬೇರೆ ರೂಪ ತಳೆದಿದ್ದಾರೆ- ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು, ರೈತರು, ನಿರುದ್ಯೋಗಿಗಳು ಮತ್ತು ಉದ್ಯೋಗ ಮಾಡಲಾಗದವರು.

ಯಾರಾದರೂ ಇದನ್ನು ಮತ್ತೆಮತ್ತೆ ಮಾಡುವುದು ಹೇಗೆ ಸಾಧ್ಯ? ಅದು ಕೊನೆಯೇ ಇಲ್ಲದ ಮೋಸದ ಮೂಲಕ; ಸರಕಾರದ ಮೇಲೆ ಜನರಿಗೆ ಇರುವ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ; ಬಡಾಯಿಯ ಧೋರಣೆಗಳನ್ನು ರೂಪಿಸುವ ಮೂಲಕ; ರಣಕೇಕೆ ಹಾಕುವ ಮೂಲಕ; ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಮೂಲಕ.

ಈ ಪ್ರಕ್ರಿಯೆಯಲ್ಲಿ ಅವರು ಜನರ ಗಮನವನ್ನು ಸರಕಾರದ ವೈಫಲ್ಯದಿಂದ ದೂರಕ್ಕೆ ಸೆಳೆಯಲು ಯಶಸ್ವಿಯಾಗಿದ್ದಾರೆ. ಚುನಾವಣಾ ಕಾಲ ಮುಗಿಯುತ್ತಿರುವಂತೆ ಸರಕಾರದ ವೈಫಲ್ಯಗಳನ್ನು ನೆನಪಿಸುವುದು ಅತೀ ಮುಖ್ಯ- ನಾವು ಸರಕಾರದ ಭಾಗವಾಗಿರುವುದಕ್ಕಾಗಿ ಮಾತ್ರವಲ್ಲ; ಬಿಜೆಪಿ ಸರಕಾರವು ಮಾಡಿರುವ ರಾಚನಿಕ ಮತ್ತು ಸಾಂಸ್ಥಿಕ ಹಾನಿಯ ಪರಿಣಾಮ ಮುಂಬರುವ ಕೆಲವು ವರ್ಷಗಳ ತನಕ ಕಾಡಲಿರುವುದರಿಂದ.

ನೋಟು ಅಮಾನ್ಯೀಕರಣ

ಅತ್ಯಂತ ದೊಡ್ಡ ಆರ್ಥಿಕ ಅಪಹಾಸ್ಯವೆಂದರೆ ಖಂಡಿತವಾಗಿಯೂ ನೋಟು ಅಮಾನ್ಯೀಕರಣ. ಮೋದಿ ನವೆಂಬರ್ 2016ರಲ್ಲಿ ಜನರು ತಮ್ಮದೇ ಕಷ್ಟಪಟ್ಟು ದುಡಿದ ಹಣವನ್ನು ಪಡೆಯಲು ಸಾಲುಗಟ್ಟಿ ಬೇಡುವಂತೆ ಮಾಡಿದ್ದರು. ಉದ್ದವಾದ ಸರತಿ ಸಾಲು ಮತ್ತು ಜನರು ಎದುರಿಸಿದ ಸಂಕಷ್ಟಕ್ಕೆ ಅತಿರಿಕ್ತವಾಗಿ ದೊಡ್ಡ ಹೊಡೆತವೆಂದರೆ, ಇಡೀ ಪ್ರಕ್ರಿಯೆಯೇ ಒಂದು ದೊಡ್ಡ ನಾಟಕವಾಗಿತ್ತು. ಕಪ್ಪು ಹಣವೆಂಬ ಮಿಥ್ಯೆಯನ್ನು ತೊಲಗಿಸುವ ಬದಲಾಗಿ ಅದು ಆರ್ಥಿಕತೆಯಿಂದ ಹಣವನ್ನೇ ತೊಲಗಿಸಿತು. ಸ್ಥಾಪಿತವಾಗಿದ್ದ ವ್ಯಾಪಾರ ಜಾಲಗಳು ಸರ್ವನಾಶವಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ 2019ರ ವರದಿಯಂತೆ ಅಮಾನ್ಯೀಕರಣದ ಬಳಿಕ 50 ಲಕ್ಷ ಉದ್ಯೋಗಗಳು ನಷ್ಟವಾದವು. ಬಡವರೇ ಹೆಚ್ಚಾಗಿ ಇದರ ಭಾರವನ್ನು ಹೊತ್ತರು. ಇದರ ದುಷ್ಪರಿಣಾಮಗಳ ಕುರಿತು ರಿಸರ್ವ್ ಬ್ಯಾಂಕ್ ಮೊದಲಾಗಿಯೇ ಸರಕಾರವನ್ನು ಎಚ್ಚರಿಸಿತ್ತು. ಆದರೂ ಮೋದಿ ಮತ್ತವರ ಕೂಟವು ಇದನ್ನು ಕಡೆಗಣಿಸಿ ಮುಂದಡಿಯಿಟ್ಟಿತು. ಯಾಕೆ? ಯಾಕೆಂದರೆ, ಭ್ರಷ್ಟಾಚಾರ ನಿರ್ಮೂಲನೆಗೆ ಸರಕಾರ ಬದ್ಧ ಎಂದು ತೋರಿಸುವ ದೊಡ್ಡ ಪ್ರದರ್ಶನವೊಂದು ನಡೆಯಬೇಕಿತ್ತು.

ಆರ್ಥಿಕ ಒಳಗೊಳ್ಳುವಿಕೆ

ಬಿಜೆಪಿ ಸರಕಾರವು ಆರ್ಥಿಕ ಒಳಗೊಳ್ಳುವಿಕೆಯ ಕುರಿತು ಭಾರೀ ಭರವಸೆಗಳನ್ನು ನೀಡಿತ್ತು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜನ ಧನ್ ಯೋಜನಾ (ಪಿಎಂಜೆಡಿವೈ) ಅಡಿಯಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆರ್ಥಿಕ ಒಳಗೊಳ್ಳುವಿಕೆಯು ಅಗತ್ಯವಾಗಿದ್ದರೂ, ಕೇವಲ ಬ್ಯಾಂಕ್ ಖಾತೆ ತೆರೆಯುವುದರಿಂದ ಯಾವುದೇ ಆರ್ಥಿಕ ಒಳಗೊಳ್ಳುವಿಕೆಯು ಸಾಧ್ಯವಾಗದು. ಇಲ್ಲಿ ವಾದಿಸಲಾಗಿರುವಂತೆ ಸಕಾಲಿಕ ಹೂಡಿಕೆ ಮತ್ತು ಗ್ರಾಹಕ ಶಕ್ತಿ ಹೆಚ್ಚುವಂತೆ ಮಾಡುವ ಸಲುವಾಗಿ ಕೈಗೆಟಕುವ ಸಾಲ ಒದಗಿಸುವ ವ್ಯವಸ್ಥೆ ಬಡವಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಉದ್ಯೋಗಾವಕಾಶ ಕುಸಿತ ಮತ್ತು ನೈಜ ಸಂಬಳದ ಕುಸಿತದಿಂದ ಬಡವರಲ್ಲಿ ಸಾಕಷ್ಟು ಉಳಿತಾಯವಿಲ್ಲ. ಇದು ಅವರು ಔಪಚಾರಿಕ ಆರ್ಥಿಕ ವ್ಯವಸ್ಥೆಯಲ್ಲಿ ಪಾಲುಗೊಳ್ಳದಂತೆ ಮಾಡುತ್ತದೆ. ಆದುದರಿಂದಲೇ ದೊಡ್ಡ ಸಂಖ್ಯೆಯಲ್ಲಿ ಇಂತಹಾ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿವೆ.

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 14.06 ಬ್ಯಾಂಕ್ ಶಾಖೆಗಳಿವೆ. ಈ ಸಂಖ್ಯೆ ಕಳೆದ 15 ವರ್ಷಗಳಿಂದ ಏರುತ್ತಿದೆಯಾದರೂ, ಏರಿಕೆಯ ದರ ತೀರಾ ನಿಧಾನವಾಗಿದೆ. ಬ್ಯಾಂಕುಗಳು ಗ್ರಾಮೀಣ ಜನರನ್ನು ಮುಟ್ಟುವಂತೆ ಮಾಡಲು ಯಾವುದೇ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಬದಲಾಗಿ ಸರಕಾರವು ಕಾಗದದ ದಾಖಲೆಗಳಿಲ್ಲದ ಬ್ಯಾಂಕಿಂಗ್ (ಬಿ.ಸಿ. ಅಂದರೆ, ಬ್ಯಾಂಕಿಂಗ್ ಕರೆಸ್ಪೋಂಡೆಂಟ್ಸ್) ಮೂಲಕ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು ತಳ್ಳಲು ಯತ್ನಿಸುತ್ತಿದೆ. ಈ ಮೂಲಕ ಪಾವತಿ ಪಡೆಯುವ ಗ್ರಾಮೀಣ ಜನತೆಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಅಪ್‍ಡೇಟ್ ಮಾಡುವಂತಹ ಮೂಲಸೌಕರ್ಯಗಳೂ ಇಲ್ಲ. ಈ ಬಿ.ಸಿ.ಗಳು ಉತ್ತಮವಾದ ನಿಯಂತ್ರಣ ಮತ್ತು ಕಣ್ಗಾವಲು ವ್ಯವಸ್ಥೆ ಹೊಂದಿದ್ದರೂ, ನಿಜವಾದ ಬ್ಯಾಂಕ್‍ಗಳಿಗೆ ಬದಲಿಯಾಗುವುದು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯಲ್ಲಿ ಈ ಬಿ.ಸಿ.ಗಳಿಗೆ ಸದ್ಯಕ್ಕೆ ಯಾವುದೇ ಉತ್ತರದಾಯಿತ್ವ ನಿಯಮಗಳಿಲ್ಲ. ಆರ್ಥಿಕ ಒಳಗೊಳ್ಳುವಿಕೆಗೆ ಸ್ಪಷ್ಟವಾದ ಧೋರಣೆಗಳು ಇಲ್ಲದೇ ಇರುವುದರಿಂದ ಈಗಾಗಲೇ ಸಿಬ್ಬಂದಿ ಕೊರತೆ ಹೊಂದಿರುವ ಸಾರ್ವಜನಿಕ ರಂಗದ ಗ್ರಾಮೀಣ ಬ್ಯಾಂಕ್‍ಗಳು ತೀರಾ ಒತ್ತಡದಲ್ಲಿವೆ.

ಪ್ರಧಾನಮಂತ್ರಿ ಜನ ಧನ ಯೋಜನೆಯು ಬಿಜೆಪಿಯ ಜೆಎಎಂ (ಜನ ಧನ್-ಆಧಾರ್ ಮೊಬೈಲ್)ನ ಆಧಾರ್‍ನ ಸುಲಲಿತ ವ್ಯವಸ್ಥೆಯ ಜೊತೆಗೆಯೇ ಆರಂಭವಾಯಿತಾದರೂ ಸಾಕಷ್ಟು ಇತರ ಸಮಸ್ಯೆಗಳೂ ಇದ್ದವು. ಮೊದಲನೆಯದಾಗಿ, 2015ರಲ್ಲಿ ಮಾಹಿತಿ ಹಕ್ಕು ಕಾಯಿದೆಯ ಅನುಸಾರ ಸಲ್ಲಿಸಲಾದ ಅರ್ಜಿಗೆ ಬಂದ ಉತ್ತರದ ಪ್ರಕಾರ, ಆಧಾರ್ ಸಂಖ್ಯೆಗಳನ್ನು ನೀಡಲಾಗುವ ಮೊದಲೇ ಜನರಲ್ಲಿ ಆಗಲೇ ಕನಿಷ್ಟ ಎರಡು ಗುರುತಿನ ದಾಖಲೆಗಳು ಇದ್ದವು. ಬಹುತೇಕ ಉದ್ದೇಶಿತ ಜನರು ಒಂದು ಸರಕಾರಿ ಗುರುತು ದಾಖಲೆ ಹೊಂದಿದ್ದು, ಆಗಲೇ ಇಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯ ಮೂಲಕ ಹಣವು ಗ್ರಾಮೀಣ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗಿರುವಾಗ ಆಧಾರ್ ಕಾರ್ಡನ್ನು ಹೊಸದಾಗಿ ಪರಿಚಯಿಸಿದುದರ ಹಿಂದಿನ ತರ್ಕವೇ ಪ್ರಶ್ನಾರ್ಹವಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಆಧಾರ್ ಸಂಬಂಧಿಸಿದ ಅನೇಕ ಹಣ ವರ್ಗಾವಣೆಗಯು ಹಲವಾರು ಕಾರಣಗಳಿಗಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಆಗುವುದು, ಪಾವತಿ ತಿರಸ್ಕೃತವಾಗುವುದು ನಡೆದೇ ಇದೆ. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿನ ಅನೇಕ ಪಾವತಿಗಳಿಗೆ ಇದೇ ಗತಿಯಾಗಿರುವುದು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‍ಬಿ) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀರಾ ಹತಾಶೆಯ ವಿಷಯ. ಆಧಾರ್ ಸಂಬಂಧಿ ಬಯೋಮೆಟ್ರಿಕ್ ವೈಫಲ್ಯಗಳ ಕಾರಣದಿಂದ ಪಡಿತರ ನಿರಾಕರಿಸಲಾಗಿರುವುದು ಕನಿಷ್ಟ 75ರಷ್ಟು ಹಸಿವಿನಿಂದ ಸಾವಿಗೆ ಕಾರಣವಾಗಿದೆ. ಇಂತಹಾ ಮಹಾನ್ ತಪ್ಪಿಗಾಗಿ ಯಾಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಯಿತು ಎಂಬ ಬಗ್ಗೆ ಬಿಜೆಪಿ ಸರಕಾರವು ತೆಪ್ಪಗಿದೆ. ವೃದ್ಧಾಪ್ಯ ವೇತನಕ್ಕೂ ಇದೇ ಗತಿಯಾಗಿದೆ.

ಉದ್ಯೋಗ ಖಾತರಿ

ಉದ್ಯೋಗ ಖಾತರಿ ಯೋಜನೆಗೆ ಈ ತನಕಕ್ಕಿಂತ ಅತ್ಯಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಗೆ ವ್ಯತಿರಿಕ್ತವಾಗಿ ಈ ಅನುದಾನ ಪಾತಾಳ ತಲುಪಿದೆ. ಪ್ರತಿವರ್ಷವೂ ಸರಾಸರಿಯಾಗಿ 23 ಶೇಕಡಾ ಅನುದಾನ ವಾಸ್ತವವಾಗಿ ಹಿಂದಿನ ವರ್ಷದ ಪಾವತಿ ಬಾಕಿಯಾಗಿತ್ತು. ಈ ವರ್ಷದ 60,000 ಕೋಟಿ ರೂ. ಅನುದಾನದಲ್ಲಿ 10,000 ಕೋಟಿ ರೂ. ಹಿಂದಿನ ವರ್ಷಗಳ ಪಾವತಿ ಬಾಕಿಯಾಗಿತ್ತು ಎಂದು ಲೇಖಕರ ಲೆಕ್ಕಾಚಾರ. ಇದರಿಂದ ಕೃಷಿ ಬಿಕ್ಕಟ್ಟನ್ನು ಬಿಜೆಪಿ ಸರಕಾರವು ಇನ್ನಷ್ಟು ಉಲ್ಭಣಗೊಳಿಸಿದೆ. ವಾಸ್ತವವಾಗಿ ಈ ವರ್ಷದ ಅನುದಾನವು 2010-11ರ ಅನುದಾನಕ್ಕಿಂತಲೂ ಕಡಿಮೆ. ಜನರ ಕೆಲಸದ ಬೇಡಿಕೆಗಿಂತ 33 ಶೇಕಡಾ ಕಡಿಮೆ ಉದ್ಯೋಗ ನೀಡಲಾಗುತ್ತಿದೆ. ಸರಾಸರಿಯಾಗಿ ದೇಶದಾದ್ಯಂತ ಉದ್ಯೋಗ ಖಾತರಿ ಯೋಜನೆಯ ಸಂಬಳ ಮಾಮೂಲಿ ಕೃಷಿ ಕೂಲಿಗಿಂತಲೂ ಕಡಿಮೆಯಾಗಿದೆ.

ನಿರುದ್ಯೋಗ

ಸೋರಿಕೆಯಾದ ಸರಕಾರಿ ದಾಖಲೆಗಳ ಪ್ರಕಾರವೇ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿದೆ. ಐವರಲ್ಲಿ ಒಬ್ಬರು ಶಿಕ್ಷಿತ ಯುವಜನರು ನಿರುದ್ಯೋಗಿಯಾಗಿದ್ದಾರೆ. 20-24ರ ಹರೆಯದಲ್ಲಿರುವ ನಗರವಾಸಿ ಯುವಕರು ದುಡಿಯಬಲ್ಲ ಜನರ ಸಂಖ್ಯೆಯಲ್ಲಿ 13.5 ಶೇಕಡಾ ಇದ್ದಾರೆ. ಅವರಲ್ಲಿಯೇ 60 ಶೇಕಡಾ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಮುದ್ರಾ ಯೋಜನೆಯೂ ಇದೇ ರೀತಿಯಲ್ಲಿ ವಿಫಲಗೊಂಡಿದೆ. ಇದಕ್ಕೆ ಸರಕಾರದ ಪ್ರತಿಕ್ರಿಯೆ ಏನು? ಅದುವೇ ಅಂಕಿ ಅಂಶಗಳನ್ನು ಮುಚ್ಚಿಡುವುದು! ದೋಷಪೂರಿತ ಜಿಎಸ್‍ಟಿ ಚಿಕ್ಕ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಸರ್ವನಾಶ ಮಾಡಿದೆ.

ಕೇವಲ ಆರ್ಥಿಕತೆಯಲ್ಲ…

ಮಾಹಿತಿ ಆಯೋಗ, ಚುನಾವಣಾ ಆಯೋಗ ಇತ್ಯಾದಿ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸಲಾಗಿದೆ. ಭಾರತವನ್ನು ಲಿಂಚಿಸ್ಥಾನ್ ಎಂದು ಕರೆಯುವಂತೆ ಮಾಡಲಾಗಿದೆ. ಭಾರತದ ನೈತಿಕ ಸತ್ವವನ್ನು ಗುಣಪಡಿಸುವವರು ಯಾರು? ವಿಷವುಣಿಸಲಾದ ಜನರು ಮಾಡುವುದಾದರೂ ಏನನ್ನು? ಪ್ರಜಾಪ್ರಭುತ್ವದ ಈ ಉತ್ಸವವನ್ನು ಸಾವು ಸುಳ್ಳುಗಳು, ವಿಡಿಯೋ ಟೇಪುಗಳ ಸಂತೆಯನ್ನಾಗಿ ಮಾಡಿದ್ದಾರೆ. ದ್ವೇಷ, ನೈತಿಕ ಅಧಃಪತನ ಇತ್ಯಾದಿಗಳನ್ನು ನೋಡಿದರೆ, ನಾವು ಆರಂಭದಲ್ಲಿ ಹೇಳಿದ ಜಾನಪದ ಕತೆಯ ಮನುಷ್ಯನಾಗಿದ್ದೇವೆಯೆ?

ಮೂಲ: ರಾಜೇಂದ್ರನ್ ನಾರಾಯಣ್, ಸಯನ್‍ದೇಬ್ ಚೌಧರಿ
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

(ರಾಜೇಂದ್ರನ್ ನಾರಾಯಣ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಮತ್ತು ಸಯನ್‍ದೇಬ್ ಚೌಧರಿ ದಿಲ್ಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...