Homeಮುಖಪುಟರಾಷ್ಟ್ರೀಯ ರೈತ ದಿನ-2021: ಅನ್ನದಾತರಿಗೆ ಶುಭಾಶಯ ಕೋರಿದ ಗಣ್ಯರು

ರಾಷ್ಟ್ರೀಯ ರೈತ ದಿನ-2021: ಅನ್ನದಾತರಿಗೆ ಶುಭಾಶಯ ಕೋರಿದ ಗಣ್ಯರು

- Advertisement -
- Advertisement -

ಪ್ರತಿ ವರ್ಷ ಡಿಸೆಂಬರ್ 23 ಅನ್ನು ಭಾರತದಲ್ಲಿ ‘ಕಿಸಾನ್ ದಿವಸ್’ (ರಾಷ್ಟ್ರೀಯ ರೈತ ದಿನ) ಎಂದು ಆಚರಿಸಲಾಗುತ್ತದೆ. ದೇಶದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ದೇಶದ ಅನ್ನದಾತರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಈ ವರ್ಷದ ರೈತ ದಿನ ಅನ್ನದಾತರಿಗೆ ವಿಷೇಶವಾಗಿದೆ. ಪಂಜಾಬ್ ಮತ್ತು ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ರೈತರು ವರ್ಷವಿಡೀ ಒಕ್ಕೂಟ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡಿ ಜಯ ಗಳಿಸಿದ್ದಾರೆ.

ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ನೆನಪಿನಲ್ಲಿ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಡಿಸೆಂಬರ್ 23, 1902 ರಂದು ಉತ್ತರ ಪ್ರದೇಶದ ಮೀರತ್‌ನ ನೂರ್ಪುರ್‌ನಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು.

ಮಹಾತ್ಮ ಗಾಂಧಿಯವರ ಅಹಿಂಸೆಯಿಂದ ಪ್ರಭಾವಿತರಾದ ಸಿಂಗ್ ಅವರು ಸ್ವಾತಂತ್ರ್ಯ ಚಳವಳಿಯಲದಲಿ ತೊಡಗಿಕೊಂಡಿದ್ದರು. ಸ್ವಾತಂತ್ರ್ಯದ ನಂತರ, ಅವರು ಗ್ರಾಮೀಣ ಪ್ರದೇಶಗಳ ಏಳಿಗೆಯಲ್ಲಿ ತೊಡಗಿಸಿಕೊಂಡರು. ಉತ್ತರ ಪ್ರದೇಶದ ಭೂ ಸುಧಾರಣೆಗಳ ಬಗ್ಗೆ ಗಮನ ಹರಿಸಿದ್ದರು. ಸಾಲ ವಿಮೋಚನೆ ಮಸೂದೆ 1939 ರ ರಚನೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಇದು ಗ್ರಾಮೀಣ ಸಾಲಗಾರರಿಗೆ ಹೆಚ್ಚಿನ ಪರಿಹಾರವನ್ನು ನೀಡಿತ್ತು.

ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

ಭಾರತದ ಕೃಷಿ ಸುಧಾರಣೆಗಳಿಗೆ ಮಾಜಿ ಪ್ರಧಾನಿ ನೀಡಿರುವ ಕೊಡುಗೆಯನ್ನು ಈ ದಿನದಂದು ಗುರುತಿಸಲಾಗುತ್ತದೆ. ರೈತರ ಉನ್ನತಿಗಾಗಿ ಮತ್ತು ದೇಶಾದ್ಯಂತ ಕೃಷಿಯ ಅಭಿವೃದ್ಧಿಗಾಗಿ ಅವರು ಮಾಡಿದ ಕೆಲಸಕ್ಕಾಗಿ ಸಿಂಗ್ ಅವರಿಗೆ ‘ಭಾರತದ ರೈತರ ಚಾಂಪಿಯನ್’ (Champion of India’s Peasants) ಎಂಬ ಗೌರವವನ್ನು ನೀಡಲಾಗಿದೆ.

ರೈತ ದಿನದ ಹಿನ್ನೆಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, “ಭಾರತ ದೇಶವು ಕೃಷಿ ಆಧಾರಿತ ದೇಶ ಹಾಗೂ ಬೇಸಾಯ ಮನುಷ್ಯನ ಜೀವನಾಧಾರ ಎಂಬುದನ್ನು ಸದಾ ನೆನಪಿನಲ್ಲಿಡೋಣ. ಈ ನಿಟ್ಟಿನಲ್ಲಿ ಸರ್ಕಾರಗಳೂ ರೈತರ ಬೆನ್ನೆಲುಬಾಗಿ ನಿಂತು ಅರಿವು ಮೂಡಿಸಿದಾಗ ರೈತ ದಿನಾಚರಣೆ ಸಾರ್ಥಕವಾಗಲಿದೆ. ಸಮಸ್ತ ಅನ್ನದಾತರಿಗೆ ‘ರೈತ ದಿನಾಚರಣೆ’ಯಂದು ನನ್ನ ಕೃತಜ್ಞತಾ ಪೂರ್ವಕ ನಮನಗಳು” ಎಂದು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡಿ, “ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್ ಅವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಹೃತ್ಪೂರ್ವಕ ಶುಭಾಶಯಗಳು. ಅನ್ನದಾತ ರೈತನೇ ದೇಶದ ಬೆನ್ನೆಲುಬು. ಕೃಷಿಕರ ಬದುಕು ಹಸನಾದಾಗಲೇ ಸಮೃದ್ಧ ರಾಜ್ಯದ ಗುರಿ ನನಸಾಗುವುದು” ಎಂದಿದ್ದಾರೆ.

ರೈತ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಅಧಿಕೃತ ಟ್ವಿಟರ್‌ ಖಾತೆ ಕಿಸಾನ್ ಏಕ್ತಾ ಮೋರ್ಚಾ ಕೂಡ ಟ್ವೀಟ್ ಮಾಡಿ ಅನ್ನದಾತರಿಗೆ ಶುಭಾಶಯ ತಿಳಿಸಿದೆ.


ಇದನ್ನೂ ಓದಿ: ರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ ರೈತರ ಹೋರಾಟ ಯಶಸ್ಸು ಕಂಡದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...