HomeಮುಖಪುಟINDIA ಒಕ್ಕೂಟವು ಮಾದ್ಯಮಗಳಿಗೆ ಬಹಿಷ್ಕಾರ ಹಾಕಿರುವ ಬಗ್ಗೆ ಮಾಹಿತಿ ಇಲ್ಲ: ನಿತೀಶ್‌ ಕುಮಾರ್‌

INDIA ಒಕ್ಕೂಟವು ಮಾದ್ಯಮಗಳಿಗೆ ಬಹಿಷ್ಕಾರ ಹಾಕಿರುವ ಬಗ್ಗೆ ಮಾಹಿತಿ ಇಲ್ಲ: ನಿತೀಶ್‌ ಕುಮಾರ್‌

- Advertisement -
- Advertisement -

ಪ್ರತಿಪಕ್ಷಗಳ INDIA ಒಕ್ಕೂಟವು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿರುವುದರ ಬಗ್ಗೆ ಯಾವುದೇ ಮಾಹಿತಿ ನನಗಿಲ್ಲ ಮತ್ತು ಇದು ತಪ್ಪು ನಿರ್ಧಾರ ಎಂದು ಬಿಹಾರದ ಸಿಎಂ ಹಾಗೂ INDIA ಒಕ್ಕೂಟದ ಸದಸ್ಯ ಪಕ್ಷದ ನಾಯಕ ನಿತೀಶ್‌ ಕುಮಾರ್‌ ಅವರು ಹೇಳಿದ್ದಾರೆ.

INDIA ಮೈತ್ರಿಕೂಟದ ಕೆಲ ಸದಸ್ಯರಿಗೆ ಕೆಲ ಟಿವಿ ಆಂಕರ್‌ಗಳ ಕಾರ್ಯಕ್ರಮದಲ್ಲಿ ಸಮಸ್ಯೆಗಳು ಕಂಡು ಬಂದ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಕುಮಾರ್ ಹೇಳಿದರು. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ನಾನು ಯಾವಾಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ದಾಳಿಗೆ ಒಳಗಾಗುತ್ತಿರುವ ಪತ್ರಿಕಾ ಸ್ವಾತಂತ್ರ್ಯದ ಪರವಾಗಿದ್ದೇನೆ ಎಂದು ಹೇಳಿದ್ದಾರೆ.

ನಾವು ಪ್ರಸ್ತುತ ಅಧಿಕಾರದಲ್ಲಿರುವವರನ್ನು ಸೋಲಿಸಿ ನಿಮ್ಮ ವೃತ್ತಿಯನ್ನು ಅಭ್ಯಾಸ ಮಾಡಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ಭರವಸೆ ನೀಡುತ್ತೇವೆ ಎಂದು ನಿತೀಶ್ ಕುಮಾರ್‌ ಅವರು ಇದೇ ವೇಳೆ ಪತ್ರಕರ್ತರಿಗೆ ಹೇಳಿದ್ದಾರೆ.

ನಾನು ಪತ್ರಕರ್ತರ ಬೆಂಬಲಕ್ಕೆ ಇದ್ದೇನೆ. ಎಲ್ಲರಿಗೂ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ಸಿಕ್ಕಾಗ ಪತ್ರಕರ್ತರು ತಮಗೆ ಬೇಕಾದುದನ್ನು ಬರೆಯುತ್ತಾರೆ. ಅವರನ್ನು ನಿಯಂತ್ರಿಸಲಾಗಿದೆಯೇ? ನಾನು ಅದನ್ನು ಮಾಡಿದ್ದೇನೆಯೇ? ಅವರಿಗೆ ಹಕ್ಕುಗಳಿವೆ, ನಾನು ಯಾರ ವಿರುದ್ಧವೂ ಅಲ್ಲ ಎಂದು ಅವರು ಹೇಳಿದ್ದಾರೆ.

INDIA ಒಕ್ಕೂಟದ ನಾಯಕರು 14 ಸುದ್ದಿ ನಿರೂಪಕರು ಆಯೋಜಿಸುವ ಟಿವಿ ಸಂವಾದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಬುಧವಾರ ಪ್ರಕಟಿಸಿತ್ತು. ಆದರೆ ನಿನ್ನೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಮೈತ್ರಿಕೂಟವು ಯಾವುದೇ ಪತ್ರಕರ್ತರನ್ನು ಬಹಿಷ್ಕರಿಸಿಲ್ಲ ಅಥವಾ ನಿಷೇಧಿಸಿಲ್ಲ ಎಂದು ಹೇಳಿದ್ದರು.

ಅವರು ನಮ್ಮ ಶತ್ರುಗಳಲ್ಲ ಅವರು ತಮ್ಮ ವಿರುದ್ಧದ ನಿಲುವುಗಳನ್ನು ಹೊಂದಿರಬಹುದು ಆದರೆ ಯಾವುದೂ ಶಾಶ್ವತವಲ್ಲ,  ಅವರು ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಅದಿತಿ ತ್ಯಾಗಿ, ಅಮನ್ ಚೋಪ್ರಾ, ಅಮಿದ್ ದೇವಗನ್, ಆನಂದ್ ನರಸಿಂಹನ್, ಅರ್ನಾಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ್, ಚಿತ್ರಾ ತ್ರಿಪಾಠಿ, ಗೌರವ್ ಸಾವಂತ್, ನಾವಿಕ ಕುಮಾರ್, ಪ್ರಾಚಿ ಪರಾಶರ್, ರುಬಿಕಾ ಲಿಯಾಕತ್, ಶಿವ ಆರೂರ್, ಸುಧೀರ್ ಚೌಧರಿ ಮತ್ತು ಸುಶಾಂತ್ ಸಿನ್ಹಾ ನಡೆಸಿಕೊಡುವ ದೂರದರ್ಶನ ಚರ್ಚೆಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಲಾಗಿತ್ತು.

ಈ ಬಗ್ಗೆ ಶುಕ್ರವಾರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ಈ ಆಂಕರ್‌ಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಾಗಿ ಪ್ರಾಯೋಜಿತ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ INDIA ಒಕ್ಕೂಟವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದರು.

ಇದನ್ನು ಓದಿ: INDIA ಒಕ್ಕೂಟವು ಯಾವುದೇ ಪತ್ರಕರ್ತರನ್ನು ಬಹಿಷ್ಕರಿಸಿಲ್ಲ: ಪವನ್ ಖೇರಾ ಸ್ಪಷ್ಟನೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...