HomeಮುಖಪುಟINDIA ಒಕ್ಕೂಟವು ಯಾವುದೇ ಪತ್ರಕರ್ತರನ್ನು ಬಹಿಷ್ಕರಿಸಿಲ್ಲ: ಪವನ್ ಖೇರಾ ಸ್ಪಷ್ಟನೆ

INDIA ಒಕ್ಕೂಟವು ಯಾವುದೇ ಪತ್ರಕರ್ತರನ್ನು ಬಹಿಷ್ಕರಿಸಿಲ್ಲ: ಪವನ್ ಖೇರಾ ಸ್ಪಷ್ಟನೆ

- Advertisement -
- Advertisement -

INDIA ಒಕ್ಕೂಟದ ನಾಯಕರು 14 ಸುದ್ದಿ ನಿರೂಪಕರು ಆಯೋಜಿಸುವ ಟಿವಿ ಸಂವಾದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಬುಧವಾರ ಪ್ರಕಟಿಸಿತ್ತು. ಇದೀಗ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಮೈತ್ರಿಕೂಟವು ಯಾವುದೇ ಪತ್ರಕರ್ತರನ್ನು ಬಹಿಷ್ಕರಿಸಿಲ್ಲ ಅಥವಾ ನಿಷೇಧಿಸಿಲ್ಲ ಎಂದು ಶನಿವಾರ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ”ಅವರು ನಮ್ಮ ಶತ್ರುಗಳಲ್ಲ … ಅವರು ತಮ್ಮ ವಿರುದ್ಧದ ನಿಲುವುಗಳನ್ನು ಹೊಂದಿರಬಹುದು ಆದರೆ ಯಾವುದೂ ಶಾಶ್ವತವಲ್ಲ… ಅವರು ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸುತ್ತೇವೆ” ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿಗೆ ನಿಕಟವಾಗಿರುವ ಸುದ್ದಿ ನಿರೂಪಕರ ಪಟ್ಟಿಯನ್ನು ಒಕ್ಕೂಟವು ಬುಧವಾರ ಬಿಡುಗಡೆ ಮಾಡಿದ ನಂತರ ಕಾಂಗ್ರೆಸ್ ವಕ್ತಾರ ಪವನ್ ಖೇರಾ  ಈ ಮಾತುಗಳನ್ನು ಹೇಳಿದ್ದಾರೆ.

ಅದಿತಿ ತ್ಯಾಗಿ, ಅಮನ್ ಚೋಪ್ರಾ, ಅಮಿದ್ ದೇವಗನ್, ಆನಂದ್ ನರಸಿಂಹನ್, ಅರ್ನಾಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ್, ಚಿತ್ರಾ ತ್ರಿಪಾಠಿ, ಗೌರವ್ ಸಾವಂತ್, ನಾವಿಕ ಕುಮಾರ್, ಪ್ರಾಚಿ ಪರಾಶರ್, ರುಬಿಕಾ ಲಿಯಾಕತ್, ಶಿವ ಆರೂರ್, ಸುಧೀರ್ ಚೌಧರಿ ಮತ್ತು ಸುಶಾಂತ್ ಸಿನ್ಹಾ ನಡೆಸಿಕೊಡುವ ದೂರದರ್ಶನ ಚರ್ಚೆಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಲಾಗಿತ್ತು.

ಈ ಬಗ್ಗೆ ಶುಕ್ರವಾರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ”ಈ ಆಂಕರ್‌ಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಾಗಿ ”ಪ್ರಾಯೋಜಿತ ಪತ್ರಿಕೋದ್ಯಮ”ದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ INDIA ಒಕ್ಕೂಟವು ಈ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದರು.

”ಮಾಧ್ಯಮವು ಪ್ರಜಾಪ್ರಭುತ್ವದ ರಕ್ಷಕ, ಸರ್ಕಾರದ ತಪ್ಪುಗಳನ್ನು ಸರಿಪಡಿಸುವುದು ಮಾಧ್ಯಮಗಳ ಪಾತ್ರ ಮುಖ್ಯವಾಗಿರುತ್ತದೆ. ಅದೇ ರೀತಿ ಮಾಧ್ಯಮಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಪಕ್ಷಗಳನ್ನು ಬೆಂಬಲಿಸುತ್ತಿದ್ದರು. ಆದರೆ ದುರದೃಷ್ಟವಶಾತ್, ಮಾಧ್ಯಮದ ಕೆಲವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಪ್ರತಿಪಕ್ಷವನ್ನು ನಾಶಪಡಿಸುತ್ತಿದ್ದಾರೆ” ಎಂದು ವೇಣುಗೋಪಾಲ್ ಹೇಳಿದ್ದರು.

INDIA ಒಕ್ಕೂಟದ ಈ ಕ್ರಮಕ್ಕೆ ಬಿಜೆಪಿ ಟೀಕೆ ಮಾಡಿತ್ತು. ಕಾಂಗ್ರೆಸ್ ”ತುರ್ತು ಕಾಲದ ಮನಸ್ಥಿತಿ” ಹೊಂದಿದೆ ಎಂದು ಆರೋಪಿಸಿತು.

ಇದನ್ನೂ ಓದಿ: ಅರ್ನಬ್ ಗೋಸ್ವಾಮಿ ಸೇರಿ 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿದ I.N.D.I.A.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...