Homeಮುಖಪುಟಅರ್ನಬ್ ಗೋಸ್ವಾಮಿ ಸೇರಿ 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿದ I.N.D.I.A.

ಅರ್ನಬ್ ಗೋಸ್ವಾಮಿ ಸೇರಿ 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿದ I.N.D.I.A.

- Advertisement -
- Advertisement -

INDIA ಒಕ್ಕೂಟದ ನಾಯಕರು ಮುಂಬರುವ ದಿನಗಳಲ್ಲಿ ಕೆಲವು ಸುದ್ದಿವಾಹಿನಿಗಳ ನಿರೂಪಕರ ಕಾರ್ಯಕ್ರಮ ಹಾಗೂ ಸಂವಾದಗಳನ್ನು ಬಹಿಷ್ಕರಿಸುವುದಾಗಿ ಬುಧವಾರ ಪ್ರಕಟಿಸಿತ್ತು. ಇದೀಗ ಯಾವ ಯಾವ ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ ಎಂಬ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ಅರ್ನಬ್ ಗೋಸ್ವಾಮಿ ಸೇರಿದಂತೆ ಒಟ್ಟು 14 ಸುದ್ದಿ ನಿರೂಪಕರ ಹೆಸರುಗಳನ್ನು ಪಟ್ಟಿ ಮಾಡಿದೆ. ಇವರೆಲ್ಲರೂ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಕೆಲವು ಮಹಿಳಾ ನಿರೂಪಕರೂ ಇದ್ದಾರೆ. ರಾಜ್ಯದ ಪ್ರಾದೇಶಿಕ ಸುದ್ದಿ ವಾಹಿನಿ ಕಾರ್ಯಕ್ರಮ ಅಥವಾ ನಿರೂಪಕರ ಹೆಸರು ಪಟ್ಟಿಯಲ್ಲಿಲ್ಲ.

ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು ಬಹಿಷ್ಕರಿಸಲು ಐಎನ್‌ಡಿಐಎ ಬಣ ನಿರ್ಧರಿಸಿದೆ. ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಈ ನಿರೂಪಕರು ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

ಈ ಹಿಂದೆ ಕೂಡ ಕಾಂಗ್ರೆಸ್ ಮಾಧ್ಯಮಗಳಿಂದ ದೂರ ಉಳಿಯುವ ನಿರ್ಧಾರ ಮಾಡಿತ್ತು. 2019ರ ಚುನಾವಣೆ ಸಂದರ್ಭದಲ್ಲಿ ಅದು ತನ್ನ ವಕ್ತಾರರನ್ನು ಸುದ್ದಿವಾಹಿನಿಗಳ ಚರ್ಚೆಗೆ ಕಳುಹಿಸುವುದಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ INDIA ಕೂಟದ ವಿವಿಧ ಪಕ್ಷಗಳು ಈ ಪಟ್ಟಿಯನ್ನು ಹಂಚಿಕೊಂಡಿವೆ.

INDIA ಗುರುತಿಸಿರುವ 14 ಮಂದಿ ನಿರೂಪಕರ ಪಟ್ಟಿ ಇಲ್ಲಿದೆ..

  • ಅದಿತಿ ತ್ಯಾಗಿ
  • ಅಮನ್ ಚೋಪ್ರಾ
  • ಅಮೀಶ್ ದೇವಗನ್
  • ಆನಂದ್ ನರಸಿಂಹನ್
  • ಅರ್ನಬ್ ಗೋಸ್ವಾಮಿ
  • ಅಶೋಕ್ ಶ್ರೀವಾಸ್ತವ
  • ಚಿತ್ರ ತ್ರಿಪಾಠಿ
  • ಗೌರವ್ ಸಾವಂತ್
  • ನವಿಕಾ ಕುಮಾರ್
  • ಪ್ರಾಚಿ ಪರಾಶರ್
  • ರುಬಿಕಾ ಲಿಯಾಖತ್
  • ಶಿವ್ ಅರೂರ್
  • ಸುಧೀರ್ ಚೌಧುರಿ
  • ಸುಶಾಂತ್ ಸಿನ್ಹಾ.

ಇದನ್ನೂ ಓದಿ: INDIA ಒಕ್ಕೂಟದಿಂದ ಟಿವಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರ: ಪಟ್ಟಿ ಸಿದ್ದಪಡಿಸಿದ ಉಪ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...