Homeಮುಖಪುಟಟೌನ್ ಹಾಲ್ ಹೊರಗೆ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ...!!

ಟೌನ್ ಹಾಲ್ ಹೊರಗೆ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ…!!

- Advertisement -
- Advertisement -

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಹೊರಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬಾರದು ಎಂಬ ನಿರ್ಣಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು(ಶನಿವಾರ) ಅಂಗೀಕರಿಸಿತು. ಟೌನ್ ಹಾಲ್ ನಿಂದ ಬಿಬಿಎಂಪಿ ಗೆ ಆದಾಯ ಗಳಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

“ಟೌನ್ ಹಾಲ್ ಹೊರಗಿನ ಜಾಗವನ್ನು ವಿವಿಧ ಸಂಘಟನೆಗಳು ದಿನನಿತ್ಯ ವಿವಿಧ ಪ್ರತಿಭಟನೆಗಳಿಗೆ ಬಳಸಿಕೊಳ್ಳುತ್ತಿವೆ ಇದರಿಂದಾಗಿ ಕಾರ್ಯಕ್ರಮಗಳಿಗೆ ಟೌನ್ ಹಾಲನ್ನು ಬಾಡಿಗೆಗೆ ಪಡೆಯಲು ಜನರು ಮುಂದೆ ಬರುತ್ತಿಲ್ಲ” ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ಟೌನ್ ಹಾಲ್ ನ ಹೊರಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಬಾರದು ಎಂದು ಬಿಬಿಎಂಪಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್‌ನಂತಹ ಸ್ಥಳಗಳನ್ನು ಹಾಗೂ ನಗರದ ಇತರ ಗೊತ್ತುಪಡಿಸಿದ ಸ್ಥಳಗಳನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ.

ಕಾರ್ಯಸೂಚಿಯನ್ನು ಮೇಯರ್ ಪರಿಚಯಿಸಿದರು. ಯಾವುದೆ ಚರ್ಚೆಯಿಲ್ಲದೆ ನಿರ್ಣಯವನ್ನು ಬಿಜೆಪಿ ಕೌನ್ಸಿಲರ್‌ಗಳ ಸರಳ ಬಹುಮತದೊಂದಿಗೆ ಅಂಗೀಕರಿಸಲಾಯಿತು.

ನಟ ಹಾಗೂ ಪ್ರಗತಿಪರ ಹೋರಾಟಗಾರ ಚೇತನ್ ಕುಮಾರ್ “ಟೌನ್ ಹಾಲ್ ಮುಂದೆ ಯಾವುದೇ ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲವೆಂದು ಬಿ.ಬಿ.ಎಂ.ಪಿ ಆದೇಶ ಹೊರಡಿಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಧ್ವನಿಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಪ್ರತಿಭಟನೆಯಿಂದ ಟೌನ್ ಹಾಲ್ ಗೆ ಆದಾಯ ಕಡಿಮೆ ಆಗಿದೆ ಎಂದು ಮೇಯರ್ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರ ಧ್ವನಿಯ ವಿರೋದಿಯಾಗಿರುವ ಈ ಮೇಯರ್ ಗೆ ಸರ್ಕಾರಕ್ಕೆ ಆದಾಯ ಮಾಡಿಕೊಡುವ ಉದ್ದೇಶವಿದ್ದರೆ, 1% ಜನಸಂಖ್ಯೆ ಇರುವ ಶ್ರೀಮಂತರ ಮೇಲೆ ತೆರಿಗೆಯನ್ನ ಹೆಚ್ಚಿಸಲಿ, ಸಾಂವಿಧಾನಿಕ ಹಕ್ಕುಗಳನ್ನ ಉಲ್ಲಂಘಿಸುವ ಕೆಲಸ ಬೇಡ” ಎಂದಿದ್ದಾರೆ.

ಜನರ ಪ್ರತಿಭಟಿಸುವ ಹಕ್ಕನ್ನು ಬಿಜೆಪಿ ಕಸಿದುಕೊಳ್ಳಲು ಹೊರಟಿದೆ ಎಂದು ವಿರೋಧ ಪಕ್ಷಗಳು ನಿರ್ಣಯದ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ಮಾರ್ಚ್ 3 ಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...