Homeಮುಖಪುಟದೆಹಲಿಯಲ್ಲಿ ಮತ್ತೇ "ಗೋಲಿ ಮಾರೊ" ಘೋಷಣೆ...!!

ದೆಹಲಿಯಲ್ಲಿ ಮತ್ತೇ “ಗೋಲಿ ಮಾರೊ” ಘೋಷಣೆ…!!

- Advertisement -
- Advertisement -

ದೆಹಲಿಯ ಜನನಿಬಿಡ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಎನ್ನಲಾದ ಜನರ ಗುಂಪು “ಗೋಲಿ ಮಾರೊ…” ಘೋಷಣೆಗಳನ್ನು ಕೂಗಿದ್ದಾರೆ. ಈ ಬಗ್ಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಬಿಳಿ ಶರ್ಟ್ ಕಿತ್ತಳೆ ಟೋಪಿ ಧರಿಸಿದ್ದ ಗುಂಪೊಂದು “ದೇಶದ್ರೋಹಿಗಳನ್ನು ಗುಂಡಿಕ್ಕಿ” ಎಂದು ಘೋಚಣೆ ಕೂಗಿದೆ. ಈ ಬಗ್ಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮಗಳಿಗಾಗಿ ಅವರನ್ನು ತಕ್ಷಣ ದೆಹಲಿ ಮೆಟ್ರೋ ರೈಲ್ವೇ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 10:52 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮೆಟ್ರೋ ಆವರಣದಲ್ಲಿ ಯಾವುದೇ ರೀತಿಯ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಮೆಟ್ರೊ ನಿಲ್ದಾಣದಲ್ಲಿ ರೈಲು ನಿಲ್ಲಲು ಹೊರಟಾಗ ಈ ಗುಂಪು ಘೋಷಣೆಗಳನ್ನು ಪ್ರಾರಂಭಿಸಿತ್ತು.

“ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎನ್ನುವ ಈ ಘೋಷಣೆಗಳನ್ನು ಸಿಎಎ ಪರ ಸಭೆಗಳಲ್ಲಿ ಕೂಗಲಾಗುತ್ತಿದೆ. ಅಲ್ಲದೆ ಕಳೆದ ತಿಂಗಳು ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂಧರ್ಭದಲ್ಲಿ ಕೂಡಾ ಇದನ್ನು ಹೇಳಲಾಗಿತ್ತು. ಪೌರತ್ವ ಕಾನೂನನ್ನು ವಿರೋಧಿಸುವವರನ್ನು “ದೇಶದ್ರೋಹಿ” ಎಂದು ಈ ಘೋಷಣೆಯಲ್ಲಿ ಉದ್ದೇಶಿಸಲಾಗುತ್ತಿದೆ.

ಪೌರತ್ವ ಕಾಯ್ದೆಯ ಪರ ಮತ್ತು ವಿರುದ್ಧದ ಪ್ರತಿಭಟನಾಗಾರರು ಘರ್ಷನೆಯಲ್ಲಿ ತೊಡಗಿದ ನಂತರ ಭಾನುವಾರದಿಂದ ಈವರೆಗೆ ಈಶಾನ್ಯ ದೆಹಲಿಯಲ್ಲಿ 42 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...