Homeಮುಖಪುಟ'ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಬೇಡಿ..'; ರಾಜಕೀಯ ಪಕ್ಷಗಳಿಗೆ ಆಯೋಗದಿಂದ ಸೂಚನೆ

‘ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಬೇಡಿ..’; ರಾಜಕೀಯ ಪಕ್ಷಗಳಿಗೆ ಆಯೋಗದಿಂದ ಸೂಚನೆ

- Advertisement -
- Advertisement -

ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದು, ಭಿತ್ತಿಪತ್ರಗಳು, ಕರಪತ್ರಗಳ ಹಂಚುವಿಕೆ ಅಥವಾ ಘೋಷಣೆಗಳನ್ನು ಸೇರಿದಂತೆ ಯಾವುದೇ ರೀತಿಯ ಪ್ರಚಾರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಸೋಮವಾರ ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸುವುದರ ಬಗ್ಗೆ ಚುನಾವಣಾ ಸಮಿತಿಯು ತನ್ನ ‘ಶೂನ್ಯ ಸಹಿಷ್ಣುತೆ’ಯನ್ನು ಪಕ್ಷಗಳಿಗೆ ಕಳುಹಿಸಿದ ಸಲಹೆಯಲ್ಲಿ ತಿಳಿಸಿದೆ. ‘ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಳ್ಳುವುದು, ಮಗುವನ್ನು ವಾಹನದಲ್ಲಿ ಅಥವಾ ರ್ಯಾಲಿಗಳಲ್ಲಿ ಯಾವುದೇ ರೀತಿಯಲ್ಲಿ ಪ್ರಚಾರ ಕಾರ್ಯಗಳಿಗೆ ಬಳಸಬಾರದು’ ಎಂದು ಆಯೋಗ ತಿಳಿಸಿದೆ.

‘ಈ ನಿರ್ಬಂಧವು ಯಾವುದೇ ರಾಜಕೀಯ ಪ್ರಚಾರದದಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಹೇಳಿದ್ದು, ರ್ಯಾಲಿಗಳಲ್ಲಿ ಕವಿತೆ, ಹಾಡುಗಳು, ಭಾಷಣದಲ್ಲಿ ಬಳಸಿಕೊಳ್ಳವಾರದು” ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

‘ಆದರೆ, ರಾಜಕೀಯ ಪಕ್ಷದ ಯಾವುದೇ ಚುನಾವಣಾ ಪ್ರಚಾರ ಚಟುವಟಿಕೆಯಲ್ಲಿ ಭಾಗಿಯಾಗದ, ರಾಜಕೀಯ ನಾಯಕರ ಸಮೀಪದಲ್ಲಿ ಅವರ ಪೋಷಕರೊಂದಿಗೆ ಮಗುವಿನ ಉಪಸ್ಥಿತಿಯು ಮಾರ್ಗಸೂಚಿಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದೆ.

ಇದನ್ನೂ ಓದಿ; ‘ನನ್ನ ಬಂಧನದ ಹಿಂದೆ ರಾಜಭವನದ ಪಾತ್ರವೂ ಇದೆ..’; ಸದನದಲ್ಲಿ ಹೇಮಂತ್ ಸೊರೇನ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read