ಕೊರೊನಾ ಪರೀಕ್ಷೆಗೆ ಅಧಿಕ ಶುಲ್ಕ ವಿಧಿಸಿದ ಆಸ್ಪತ್ರೆಗೆ ನೋಟಿಸ್

ಐಸಿಎಂಆರ್‌ನ ಮಾರ್ಗಸೂಚಿಗಳು ಮತ್ತು ಸರ್ಕಾರಗಳ ಆದೇಶವನ್ನು ಉಲ್ಲಂಘಿಸಿ ಕೊರೊನಾ ಪರೀಕ್ಷೆಗೆ ಅಧಿಕವಾಗಿ ಶುಲ್ಕ ವಿಧಿಸಿದ ಆರೋಪ.

0

ಐಸಿಎಂಆರ್‌ನ ಮಾರ್ಗಸೂಚಿಗಳು ಮತ್ತು ಸರ್ಕಾರಗಳ ಆದೇಶವನ್ನು ಉಲ್ಲಂಘಿಸಿ ಕೊರೊನಾ ಪರೀಕ್ಷೆಗೆ ಅಧಿಕ ಶುಲ್ಕ ವಿಧಿಸಿದ ಆರೋಪದ ಮೇಲೆ ಕರ್ನಾಟಕದ ರಾಷ್ಟ್ರೀಯ ಆರೋಗ್ಯ ಮಿಷನ್, ಶೇಷಾದ್ರಿಪುರಂನ ಅಪೊಲೊ ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ.

ಕೋವಿಡ್ ಪರೀಕ್ಷೆಗೆ ಆಸ್ಪತ್ರೆಯು 4,500 ರೂ. ಮತ್ತು “ಮಾದರಿ ನಿರ್ವಹಣೆ” ಗಾಗಿ 1,500 ರೂ. ಒಟ್ಟು 6,000 ರೂ.ಗಳು ವಿಧಿಸಿದ್ದು, ಇದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ.

ಅಖಿಲ ಭಾರತ ಡ್ರಗ್ ಆಕ್ಷನ್ ನೆಟ್‌ವರ್ಕ್‌ನ ಸಹ-ಕನ್ವೀನರ್ ಮಾಲಿನಿ ಐಸೋಲಾ ಅವರು ಜೂನ್ 25 ರ ಬಿಲ್ಲನ್ನು ಸೋಮವಾರ ಮುಂಜಾನೆ ಟ್ವೀಟ್ ಮಾಡಿದ್ದರು. ಇದರಲ್ಲಿ ಆಸ್ಪತ್ರೆಯೂ ಅಧಿಕ ಶುಲ್ಕ ವಿಧಿಸಿರುವುದು ತೋರಿಸುತ್ತದೆ.

ಈ ಬಗ್ಗೆ ಮಾಧ್ಯಮಗಳು ರಶೀತಿಯ ಪ್ರತಿಯನ್ನು ರಾಜ್ಯ ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಗೆ ಕಳುಹಿಸಿದ್ದು ಅವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸಂಜೆಯ ಹೊತ್ತಿಗೆ, ಕರ್ನಾಟಕದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕರು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಸ್ಪತ್ರೆಗೆ ನೋಟಿಸ್ ಕಳುಹಿಸಿದ್ದಾರೆ ಹಾಗೂ ನೋಟಿಸ್ ತಲುಪಿದ ಎರಡು ದಿನಗಳಲ್ಲಿ ವಿವರಣೆಯನ್ನು ಕೋರಿದ್ದಾರೆ.

“ಯಾವುದೇ ಉತ್ತರವನ್ನು ನೀಡದಿದ್ದರೆ, ನಿಯಮಗಳ ಪ್ರಕಾರ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ” ಎಂದು ನೋಟಿಸ್ ಎಚ್ಚರಿಸಿದೆ.

ಈ ಬಗ್ಗೆ ಅಪೊಲೊ ಆಸ್ಪತ್ರೆಗಳ ಘಟಕದ ಮುಖ್ಯಸ್ಥ ಶೇಷಾದ್ರಿಪುರಂ ಉದಯ್ ದಾವ್ಡಾ ಮಾತನಾಡಿ “ನಾವು ನಮ್ಮ ಮಾದರಿಗಳನ್ನು ಕ್ಯಾನ್ಸೈಟ್ ಪ್ರಯೋಗಾಲಯಕ್ಕೆ ಹೊರಗುತ್ತಿಗೆ ನೀಡುತ್ತೇವೆ, ಅವರು ನಮಗೆ 4,500 ರೂ. ಶುಲ್ಕ ವಿಧಿಸುತ್ತಾರೆ. ಅವರು ಮಾದರಿಗಳನ್ನು ಸಾಗಿಸುವ ಹಾಗೂ ಪಿಪಿಇ ವೆಚ್ಚವನ್ನು ಸರಿದೂಗಿಸುವ ಸೌಲಭ್ಯವನ್ನು ನೀಡುತ್ತಿಲ್ಲ. ಅದನ್ನು ನಾವು ರೋಗಿಗಳಿಗೆ ನಿರ್ವಹಣಾ ಶುಲ್ಕವೆಂದು ಹಾಕುತ್ತೇವೆ” ಎಂದು ಹೇಳಿದ್ದಾರೆ.

ಈ ಶುಲ್ಕ ವಿಧಿಸದಂತೆ ಆರೋಗ್ಯ ಇಲಾಖೆ ಕೇಳಿಕೊಂಡಿದೆ ಆದ್ದರಿಂದ ಆಸ್ಪತ್ರೆಯು ಈಗ ನಿರ್ವಹಣಾ ಶುಲ್ಕವನ್ನು ಭರಿಸಲಿದೆ ಎಂದು ಅವರು ಹೇಳಿದರು.

“ಕೋವಿಡ್ ಪರೀಕ್ಷೆಗೆ ಒಳಗಾದ ಎಲ್ಲಾ ರೋಗಿಗಳ ಮಾಹಿತಿಯನ್ನು ಪಡೆದು, ರೋಗಿಗಳಿಗೆ ಮರುಪಾವತಿ ಮಾಡಲು ನಾನು ಕೇಳಿಕೊಂಡಿದ್ದೇನೆ. ರೋಗಿಯ ಕುಟುಂಬದೊಂದಿಗೆ ನಾನು ಮಾತನಾಡಿದ್ದೇನೆ. ಇನ್ನುಮುಂದೆ, ನಾವು ನಿರ್ವಹಣಾ ಶುಲ್ಕವನ್ನು ಭರಿಸುತ್ತೇವೆ” ಎಂದು ಅವರು ಹೇಳಿದರು.

“ನಾವು ಈಗಾಗಲೇ ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ದರಗಳನ್ನು ಪರಿಷ್ಕರಿಸಲಾಗಿದೆ.” ಎಂದು ಆಸ್ಪತ್ರೆ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪ್ರಸ್ತುತ, ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಿದ ಮಾದರಿಗಳಿಗೆ ಬೆಲೆ 2,250 ರೂ. ಆಗಿದ್ದು, ಇದು ಸ್ಕ್ರೀನಿಂಗ್ ಪರೀಕ್ಷೆಯ ವೆಚ್ಚ ಮತ್ತು ದೃಡೀಕರಣ ಪರೀಕ್ಷೆಯನ್ನು ಒಳಗೊಂಡಿದೆ.


ಓದಿ: ದೆಹಲಿಯ 17 ಜನರಿರುವ ಕುಟುಂಬ ಒಂದೇ ಮನೆಯಲ್ಲಿದ್ದು ಕೊರೊನಾವನ್ನು ಗೆದ್ದಿತು…!


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here