Homeಮುಖಪುಟಒಬಿಸಿ ನಾಯಕರು ಮರಾಠರನ್ನು ಗುರಿಯಾಗಿಸಿಕೊಂಡಿದ್ದಾರೆ: ಮನೋಜ್ ಜಾರಂಗೆ

ಒಬಿಸಿ ನಾಯಕರು ಮರಾಠರನ್ನು ಗುರಿಯಾಗಿಸಿಕೊಂಡಿದ್ದಾರೆ: ಮನೋಜ್ ಜಾರಂಗೆ

- Advertisement -
- Advertisement -

ಒಬಿಸಿ ಮುಖಂಡರು ಮರಾಠರ ಮೇಲೆ ಸುಳ್ಳು ಆರೋಪಗಳನ್ನು ದಾಖಲಿಸುವ ಮೂಲಕ ಮರಾಠರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಮಂಗಳವಾರ ಆರೋಪಿಸಿದ್ದು, ಮರಾಠ ಮುಖಂಡರು ಸಮುದಾಯದ ಯುವಕರ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಸೋಮವಾರ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಅವರು, ”ಒಬಿಸಿ ವರ್ಗದ ಅಡಿಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಹಿಂಬಾಗಿಲಿನ ಪ್ರಯತ್ನಗಳನ್ನು ವಿರೋಧಿಸಲಾಗುವುದು ಮತ್ತು ಹಿಂಸಾಚಾರ ಮತ್ತು ಒತ್ತಡ ತಂತ್ರಗಳನ್ನು ಸಹಿಸಲಾಗುವುದಿಲ್ಲ ಎಂದು  ಹೇಳಿಕೆ ನೀಡಿದ ಬೆನ್ನಲ್ಲೇ ಜಾರಂಜ್ ಅವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವಾರ ಬೀಡ್‌ನಲ್ಲಿ ಕೋಟಾ ಆಂದೋಲನ ಹಿಂಸಾಚಾರಕ್ಕೆ ತಿರುಗಿದಾಗ ಎನ್‌ಸಿಪಿ ಶಾಸಕರಾದ ಪ್ರಕಾಶ್ ಸೋಲಂಕೆ ಮತ್ತು ಸಂದೀಪ್ ಕ್ಷೀರಸಾಗರ್ ಅವರ ಮನೆಗಳ ಮೇಲೆ ದಾಳಿ ನಡೆಯಿತು. ಆನಂತರ ಭುಜಬಲ್ ಅವರು ಅವರುಗಳ ಮನೆಗೆ ಭೇಟಿ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಾರಂಗೆ, ”ಸಚಿವರು ಬೀಡಿಗೆ ಭೇಟಿ ನೀಡಿರುವುದು ಮರಾಠರನ್ನು ಗುರಿಯಾಗಿಸಲು” ಎಂದು ಕಿಡಿಕಾರಿದರು.

”ಶಾಂತಿಯುತವಾಗಿ ಧರಣಿ ನಡೆಸುತ್ತಿರುವ ಮರಾಠರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ರಾಜ್ಯದ ಮರಾಠ ನಾಯಕರು ಈ ಬಗ್ಗೆ ಗಮನಹರಿಸಿ ಯುವಕರ ಜೊತೆ ನಿಲ್ಲಬೇಕು. ಇಂದು ಅವರ ಜೊತೆ ನಿಲ್ಲದಿದ್ದರೆ ನಾಳೆ ಕ್ಷಮಿಸುವುದಿಲ್ಲ” ಎಂದರು.

”ಒಬಿಸಿ ವರ್ಗದ ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು” ಎಂದು ಜರಂಜ್ ಒತ್ತಾಯಿಸಿದ್ದಾರೆ.

”ವಿಧ್ವಂಸಕರನ್ನು ತಡೆಯಲು ಅಸಹಾಯಕರಾದ ಇಬ್ಬರು ಪೊಲೀಸರ ಸಮ್ಮುಖದಲ್ಲಿ ಬೀಡ್‌ನಲ್ಲಿರುವ ಹೋಟೆಲ್ ಅನ್ನು ಒಂದು ಗಂಟೆಗಳ ಕಾಲ ಧ್ವಂಸಗೊಳಿಸಲಾಯಿತು ಮತ್ತು ಹಿರಿಯ ನಾಯಕ ಜಯದತ್ತ ಕ್ಷೀರಸಾಗರ್ ಮರಾಠ ಕೋಟಾ ವಿಷಯದ ಬಗ್ಗೆ ಅವರು ಏನನ್ನೂ ಹೇಳದಿದ್ದರೂ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಯಿತು” ಎಂದು ಭುಜಬಲ್ ಈ ಹಿಂದೆ ಹೇಳಿದ್ದರು.

”ಬೀಡಿನಲ್ಲಿರುವ ಹೋಟೆಲ್ ಮಾಲೀಕರಿಗೆ ತಿಳಿದಿರುವ ಜನರಿಂದ ಧ್ವಂಸಗೊಳಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ” ಎಂದು ಜರಂಜ್ ಹೇಳಿದರು.

”ಮರಾಠರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ ಮತ್ತು ಇದು ನಮ್ಮ ಆಂದೋಲನವನ್ನು ಹಾಳುಮಾಡುವ ಪ್ರಯತ್ನವಾಗಿದೆ. ಸಚಿವರು (ಭುಜಬಲ್) ಬೀಡ್‌ನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ, ಅವರಿಗೆ ಹೆಸರುಗಳ ಪಟ್ಟಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರನ್ನು ಬಂಧಿಸುವಂತೆ ಹೇಳಿದರು” ಎಂದು ಅವರು ಪ್ರತಿಪಾದಿಸಿದರು.

”ಒತ್ತಡವನ್ನು ಹೇರಲಾಗುತ್ತಿದೆ. ಅದಕ್ಕೆ ಪೂರಕ ಪಟ್ಟಿಯನ್ನು (ಆರೋಪಿಗಳ) ಸಿದ್ಧಪಡಿಸಲು ಮತ್ತು ಈ ಹೆಸರುಗಳನ್ನು ಸೇರಿಸಲು ಪೊಲೀಸರನ್ನು ಕೇಳಲಾಗುತ್ತಿದೆ. ಸಮುದಾಯದ ಸುಮಾರು 5,000 ರಿಂದ 10,000 ಜನರನ್ನು ಹೆಸರಿಸಲಾಗಿದೆ” ಎಂದು ಮನೋಜ್ ಜಾರಂಗೆ ಆರೋಪಿಸಿದರು.

ಒಬಿಸಿ ನಾಯಕರು ಮರಾಠರನ್ನು ‘ಟ್ರ್ಯಾಪ್’ ಮಾಡಲು ಮತ್ತು ‘ಪಿತೂರಿಯ ಮೂಲಕ ಅವರಿಗೆ ಕಿರುಕುಳ ನೀಡಲು’ ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಮುದಾಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಜಾರಂಗೆ ಹೇಳಿದ್ದಾರೆ.

”ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ನಾಯಕರೊಂದಿಗೆ ಮಾತನಾಡಬೇಕು, ಯಾವುದೇ ಕಲಹ ನಡೆಯದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ (ಮರಾಠ) ಸಮುದಾಯವು ಮುಂದಿನ ಹಂತದ ಆಂದೋಲನದ ಬಗ್ಗೆ ನಿರ್ಧರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

”ಅವರು (ಭುಜಬಲ್) ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದಾರೆಯೇ ಎಂಬುದನ್ನು ಅವರು ಪರಿಶೀಲಿಸಬೇಕು. ಮರಾಠ ಮೀಸಲಾತಿಯಿಂದ ಭುಜಬಲ್ ಏಕೆ ತೊಂದರೆಗೀಡಾಗಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಒಬಿಸಿ ಸಮುದಾಯದ ಜನರು ಸಹ ಅವರು ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಾರೆಂದು ಹೇಳುತ್ತಾರೆ” ಎಂದು ಜಾರಂಗೆ ಹೇಳಿಕೊಂಡಿದ್ದಾರೆ.

”ಮರಾಠ ಸಮುದಾಯದವರು ರಾಜ್ಯದ ಹಳ್ಳಿಗಳಲ್ಲಿ ಸರಣಿ ಉಪವಾಸ ಸತ್ಯಾಗ್ರಹಗಳನ್ನು ಆರಂಭಿಸಬೇಕು ಮತ್ತು ಡಿಸೆಂಬರ್ 1ರೊಳಗೆ ಇಂತಹ ಆಂದೋಲನಗಳು ಎಲ್ಲಾ ಗ್ರಾಮಗಳನ್ನು ನಡೆಯುವಂತೆ ನೋಡಿಕೊಳ್ಳಬೇಕು” ಎಂದು ಜಾರಂಗೆ ಮನವಿ ಮಾಡಿದರು.

ಇದನ್ನೂ ಓದಿ:  ಮಹಿಳಾ ಮೀಸಲಾತಿ ಕಾನೂನು ರದ್ದುಗೊಳಿಸುವುದು ತುಂಬಾ ಕಷ್ಟ: ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...