Homeಕರ್ನಾಟಕಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಫ್ಯಾಕ್ಟ್‌ಚೆಕ್‌: ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ

- Advertisement -
- Advertisement -

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣವನ್ನು ಇಬ್ಬರು ಬಾಲಕಿಯರು ದಾಖಲಿಸಿದರು. ಸ್ವಾಮೀಜಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪ್ರಕರಣ ದಾಖಲಾಗಲು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಪ್ರಮುಖ ಪಾತ್ರ ವಹಿಸಿತು. ಸಂತ್ರಸ್ತ ಮಕ್ಕಳು ಒಡನಾಡಿಯ ಕದ ತಟ್ಟಿದ್ದರಿಂದ ಪ್ರಕರಣ ಹೊರಬಂತು.

ಪ್ರಭಾವಿ ಮಠಾಧೀಶರೊಬ್ಬರ ಮೇಲೆ ಗುರುತರವಾದ ಆರೋಪ ಬಂದ ಬಳಿಕ, ಒಡನಾಡಿ ಸೇವಾ ಸಂಸ್ಥೆಯನ್ನು ದೂಷಿಸುವ ಕೆಲಸವಾಗುತ್ತಿದೆ. ಒಡನಾಡಿಯ ರೂವಾರಿಗಳಾದ ಪರಶು ಹಾಗೂ ಸ್ಟ್ಯಾನ್ಲಿ ಅವರ ಮೇಲೆ ಗುರುತರ ಆರೋಪಗಳನ್ನು ಹೊರಿಸಲಾಗುತ್ತಿದೆ. ಕಳೆದ ಮೂವತ್ತೆರಡು ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ವಿಚಾರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಬೆದರಿಕೆ ಕರೆಗಳೂ ಬರುತ್ತಿರುವ ಕುರಿತು ದೂರು ದಾಖಲಾಗಿದೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಮತಾಂತರ ಮಾಡುವುದೇ ಒಡನಾಡಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಾಗಿದೆ. ಒಡನಾಡಿಗೆ ಹೊರದೇಶಗಳಿಂದ ಹಣ ಬರುತ್ತಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮತಾಂತರ ಹಾಗೂ ಹೊರದೇಶಗಳಿಂದ ಬರುತ್ತಿರುವ ಹಣದ ಕುರಿತ ಆರೋಪಗಳ ಹಿಂದಿನ ಸತ್ಯಗಳೇನು ಎಂದು ತಿಳಿಯಲು ‘ಒಡನಾಡಿ’ ಸಂಸ್ಥೆಯನ್ನು ಹಾಗೂ ‘ಒಡನಾಡಿ’ಯಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಈಗ ಬಂದಿರುವ ಆರೋಪಗಳಿಗೆ ಕಟುಟೀಕೆಗಳನ್ನು ಒಡನಾಡಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರೆ, ಸ್ಟ್ಯಾನ್ಲಿಯವರು ವಿದೇಶದಿಂದ ಹಣದ ಕುರಿತು ಸ್ಪಷ್ಟನೆಗಳನ್ನು ನೀಡಿದರು.

ಈಗ ಕರಾಟೆ ಟೀಚರ್‌ ಆಗಿ ಕೆಲಸ ಮಾಡುತ್ತಿರುವ ‘ಮೋಹನ ಕುಮಾರಿ’ ಎಂಬವರು ಒಡನಾಡಿಯಲ್ಲಿ ಬೆಳೆದವರು. ಚಿಕ್ಕವಯಸ್ಸಿನಲ್ಲಿಯೇ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಮೋಹನಕುಮಾರಿಯನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಒಡನಾಡಿಗೆ ತಂದು ಬಿಟ್ಟರು. ಒಡನಾಡಿಯಲ್ಲಿ ಬೆಳೆದು, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, “ನನಗೆ ತಂದೆ ತಾಯಿ ಇಲ್ಲ ಎಂಬ ನೋವು ಎಂದಿಗೂ ಕಾಡಲಿಲ್ಲ. ಮುಂದೆಯೂ ಕಾಡಲ್ಲ. ಪರಶು ಅಣ್ಣ ಹಾಗೂ ಸ್ಟ್ಯಾನ್ಲಿ ಅಣ್ಣನೇ ನನಗೆ ಸ್ಫೂರ್ತಿ. ನಮ್ಮ ಆಯ್ಕೆಗಳಿಗೆ ಸಂಪೂರ್ಣ ಸ್ವತಂತ್ರ ನೀಡಿದರು. ಇಂಥದ್ದನ್ನೇ ಮಾಡಬೇಕು, ಹೀಗೆ ಇರಬೇಕು ಎಂದು ಯಾವತ್ತೂ ನಿರ್ಬಂಧ ಹೇರಲಿಲ್ಲ” ಎಂದರು.

ಇದನ್ನೂ ಓದಿರಿ: ಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್‌ ಆರೋಪ

“ಮತ ಎಂಬ ಪದವನ್ನು ನಾನು ಒಡನಾಡಿಯಲ್ಲಿ ಕೇಳಿಯೇ ಇರಲಿಲ್ಲ. ಶಾಲೆಗೆ ಸೇರಿದ ಬಳಿಕವೇ ಈ ಧರ್ಮ, ಜಾತಿ ಎಂಬ ಪದಗಳನ್ನು ನಾನು ಮೊದಲ ಬಾರಿಗೆ ಕೇಳಿದ್ದು. ಯಾವುದೇ ದಾಖಲಾತಿಯಲ್ಲಿ ನನ್ನ ಜಾತಿ ಯಾವುದೆಂದು ನಮೂದಿಸಿಲ್ಲ. ಮಾನವ ಧರ್ಮವೇ ಮುಖ್ಯವೆಂದು ಕಲಿಸಿದವರು ನಮ್ಮ ಅಣ್ಣಂದಿರು. ಜಾತಿ, ಮತದ ಬಗ್ಗೆ ಕೂತು ಎಂದಿಗೂ ಒಡನಾಡಿಯಲ್ಲಿ ಚರ್ಚೆ ಮಾಡಿದ್ದೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಧರ್ಮಾಚರಣೆ ಮಾಡುತ್ತೇನೆಂದರೂ ನಮ್ಮ ಅಣ್ಣಂದಿರು ತಡೆ ನೀಡುವವರಲ್ಲ. ಮೈಂಡ್ ವಾಶ್‌ ಮಾಡಿದವರಲ್ಲ. ಜನರನ್ನು ನೋಡುತ್ತಾ, ಶಾಲೆಗೆ ಹೋಗುತ್ತಾ ಈ ಜಾತಿ, ಧರ್ಮ ಅನ್ನೋದು ಹೇಗಿದೆ? ಸಮಾಜವನ್ನು ಹೇಗೆ ಬಾಧಿಸುತ್ತಿವೆ? ಎಂಬುದನ್ನು ತಿಳಿದುಕೊಂಡೆವು. ನಮಗೆ ವಿಶಾಲ ಬದುಕನ್ನು ಕಲಿಸಿದ್ದು ಒಡನಾಡಿ. ನನ್ನ ವಿವಾಹವೂ ಸರಳವಾಗಿ ಆಯಿತು. ರಾಷ್ಟ್ರಕವಿ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ನನ್ನ ವಿವಾಹವನ್ನು ಮಾಡಿಕೊಡಲಾಯಿತು” ಎಂದು ತಿಳಿಸಿದರು.

ಒಡನಾಡಿಯಲ್ಲೇ ಬೆಳೆದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಮತ್ತೊಬ್ಬ ವಿದ್ಯಾರ್ಥಿನಿ ಸರಸ್ವತಿ. ಕರಾಟೆ, ರಂಗಭೂಮಿ, ಯೋಗ ಮೊದಲಾದ ಕ್ಷೇತ್ರಗಳಲ್ಲಿ ಮೈಸೂರಿನಲ್ಲಿ ಸಕ್ರಿಯವಾಗಿರುವ ಅವರು ಒಡನಾಡಿಯ ಜೊತೆಗಿನ ಅನುಭವಗಳನ್ನು ಹಂಚಿಕೊಂಡರು.

“ಯಾವುದೇ ಧರ್ಮದ ಸೀಮಿತ ಚೌಕಟ್ಟನ್ನು ನಮ್ಮ ಒಡಿನಾಡಿಯಲ್ಲಿ ನಾನು ನೋಡಿಲ್ಲ. ಮಾನವ ಧರ್ಮವೇ ಮುಖ್ಯವಾಗಿತ್ತು. ಹಿಂದೂ ವಿರೋಧಿ ಎಂಬುದೆಲ್ಲ ಸುಳ್ಳು. ನಾನು ಸ್ಟಿಕ್ಟರ್‌ ಹಾಕುತ್ತೇನೆ, ಕುಂಕುಮ ಇಡುತ್ತೇನೆ. ಇದಕ್ಕೆ ಯಾವತ್ತೂ ತಡೆ ನೀಡಿದವರಲ್ಲ. ಬಳೆ ತಗೆದುಕೊಳ್ಳಿ ಎಂದು ಗೌರಿ ಹಬ್ಬದ ಸಂದರ್ಭದಲ್ಲಿ ನಮ್ಮ ಅಣ್ಣಂದಿರು ನಮಗೆ ದುಡ್ಡು ಕೊಡುತ್ತಿದ್ದರು. ಯಾವುದೇ ಧರ್ಮಕ್ಕೆ ನಮ್ಮನ್ನು ಅವರು ಅಂಟಿಹಾಕಲಿಲ್ಲ. ನಮ್ಮ ಪ್ರತಿದಿನದ ಪ್ರಾರ್ಥನೆಯೇ ಮಾನವತೆಯನ್ನು ಸಾರುವಂತಿದೆ. ಮನುಷ್ಯತ್ವ ಇರುವ ಮನಸ್ಸೇ ಪ್ರೀತಿ ಇರಲಿ ಪರರಲಿ. ಜನರ ದುಃಖಕ್ಕೆ ನಮ್ಮ ಸಾಂತ್ವವಿರಲಿ. ನಮ್ಮ ನಿಮ್ಮ ನಡುವೆ ಕಂದಕ ಬೇಡ. ಕಂದಗಳು ನಾವು ಗೆದ್ದೇ ಗೆಲ್ಲುತ್ತೇವೆ ವಿಶ್ವವನ್ನು ಎಂದು ಆತ್ಮಸ್ಥೈರ್ಯ ತುಂಬಿದರು” ಎಂದರು.

ಒಡನಾಡಿಯ ಮತ್ತೊಬ್ಬ ಮಗಳಾದ ರಮ್ಯಾ ಎಂಬುವರು ಮಾತನಾಡಿ, “ಒಡನಾಡಿ ನಮಗಾಗಿ ಒಳ್ಳೆಯ ಕೆಲಸಗಳನ್ನು ಮಾಡಿದೆ. ನಾವು ಅದೃಷ್ಟವಂತರು. ಶಿಕ್ಷಣ ಹಾಗೂ ಸುರಕ್ಷತೆ ಎಂದ ತಕ್ಷಣ ನನಗೆ ಒಡನಾಡಿ ನೆನಪಾಗುತ್ತದೆ” ಎಂದರು.

ಹೆಣ್ಣು ಮಕ್ಕಳಷ್ಟೇ ಅಲ್ಲದೇ, ಗಂಡು ಮಕ್ಕಳನ್ನೂ ಒಡನಾಡಿ ಬೆಳೆಸಿದೆ. ಗಣೇಶ ಎಂಬ ವಿದ್ಯಾರ್ಥಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ನಮ್ಮಲ್ಲಿ ಜಾತಿ ಎಂಬ ವಿಚಾರವೇ ಇಲ್ಲ. ಎರಡು ವರ್ಷದ ಮಗುವಿನಿಂದಲೇ ನಾನು ಅಲ್ಲಿ ಬೆಳೆದೆ. ಮಕ್ಕಳಿಗೆ ಜಾತಿಯ ಕರಾಳತೆ ಬೀರಬಾರದೆಂಬುದು ಒಡನಾಡಿಯ ಆಶಯವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಹಿನ್ನೆಲೆಯ ಮಕ್ಕಳು ಅಲ್ಲಿ ಬೆಳೆದಿದ್ದಾರೆ. ಧರ್ಮ ಎಂಬುದು ಅಲ್ಲಿ ಮುಖ್ಯವಾಗಿಯೇ ಇಲ್ಲ. ಇಪ್ಪತ್ತಮೂರು ವರ್ಷ ಒಡನಾಡಿಯಲ್ಲಿಯೇ ಬೆಳೆದ ನಾನೀಗ ನನ್ನದೇ ಬದುಕು ಕಂಡುಕೊಂಡಿದ್ದೇನೆ” ಎಂದು ವಿವರಿಸಿದರು.

ಒಡನಾಡಿಯ ಸ್ಟ್ಯಾನ್ಲಿ ಹೇಳಿದ್ದೇನು?

ಈಗ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಒಡನಾಡಿಯ ಸ್ಟ್ಯಾನ್ಲಿಯವರು, “ನಮ್ಮ ಸಂಸ್ಥೆಯಲ್ಲಿ ಯಾವುದೇ ಧರ್ಮದ ಕುರುಹುಗಳಿಲ್ಲ. ನಾವು ಏನು ಮಾಡಬೇಕೆಂಬ ಸ್ಪಷ್ಟತೆ ಇದೆ. ತನಿಖೆಯನ್ನು ಮುಚ್ಚಿಹಾಕಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣವನ್ನು ಕೈಗೆತ್ತುಕೊಂಡು ಸಮಗ್ರವಾಗಿ ತನಿಖೆ ನಡೆಸಬೇಕಿದೆ” ಎಂದು ಆಗ್ರಹಿಸಿದರು.

ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು? | Posco case aginest Murugha Mutt seer: Role of Mysuru Odanadi Seva Samsthe - Kannada Oneindia
ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ

ಹೊರದೇಶಗಳಿಂದ ಹಣ ಹರಿದುಬರುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, “ಹೊರಗಿನಿಂದ ಹಣ ಬರಬಾರದೆಂದು ಹೇಳಲು ಇವರ್‍ಯಾರು? ಕಳೆದ 32 ವರ್ಷಗಳಿಂದ ಒಡನಾಡಿ ಕೆಲಸ ಮಾಡುತ್ತಿದೆ. ನೂರಾರು ಮಕ್ಕಳು ಬೆಳೆದಿದ್ದಾರೆ. ಹೊರದೇಶದ ಹಣ ಪಡೆಯಲು ಈ ನೆಲದ ಕಾನೂನಿನಲ್ಲಿ ಅವಕಾಶವಿದೆ. ಹಾಗೆಂದು ಸುಖಾಸುಮ್ಮನೆಯ ಯಾರೂ ದುಡ್ಡು ಕೊಡುವುದಿಲ್ಲ” ಎಂದರು.

“ವರ್ಷಕ್ಕೆ ನಾಲ್ಕು ಸಲ ನಮ್ಮ ಹಣದ ಮೂಲವನ್ನು ಸರ್ಕಾರ ಚೆಕ್ ಮಾಡುತ್ತದೆ. ಇದೆಲ್ಲ ಆರೋಪ ಮಾಡುವವರಿಗೆ ತಿಳಿದಿಲ್ಲ. ಒಂದೊಂದು ರೂಪಾಯಿಯ ದಾಖಲೆ ಇರಿಸಿದ್ದೇವೆ. ಸುಖಾಸುಮ್ಮನೆ ಆರೋಪ ಮಾಡಬಾರದು. ಮಠಗಳಿಗೆ ಹೊರದೇಶಗಳಿಂದ ಬರುವ ಹಣದ ಲೆಕ್ಕ ಕೊಡುತ್ತಾರಾ? ನಮಗೆ ಬಂದಿರುವ ಎಲ್ಲ ಹಣದ ಲೆಕ್ಕವಿದೆ” ಎಂದು ಸವಾಲು ಹಾಕಿದರು.

ಹಿಂದೂ ಧರ್ಮ ಒಡೆಯುತ್ತಿದ್ದಾರೆ ಎಂಬುದು ಮುರುಘಾ ಶರಣರ ವಿಚಾರಗಳಿಗೆ ವಿರುದ್ಧವಲ್ಲವೇ?

ಮುರುಘಾ ರಾಜೇಂದ್ರ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾತನಾಡುತ್ತಾ, “ಹಿಂದೂ ಧರ್ಮವನ್ನು ಒಡೆಯಲು ಯತ್ನಿಸಲಾಗಿದೆ’’ ಎಂಬ ಆರೋಪ ಮಾಡಿದ್ದಾರೆ. ಆದರೆ ‘ಹಿಂದೂ’ ಎಂಬ ಗುರಾಣಿಯನ್ನು ಈಗ ಏಕೆ ಹಿಡಿದುಕೊಂಡು ಬರುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅನುಮಾನಿಸಲು ಅವಕಾಶವಿದೆ. ಯಾಕೆಂದರೆ ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರೇ ಈ ಹಿಂದೆ ಸಾಕಷ್ಟು ಸಲ ಇತರ ಧರ್ಮಕ್ಕಿಂತ ‘ಲಿಂಗಾಯತ ಧರ್ಮ’ ಭಿನ್ನ ಎಂಬ ಅಭಿಪ್ರಾಯವನ್ನು ತಾಳಿದ್ದನ್ನು ಕಾಣಬಹುದು.

ಇದನ್ನೂ ಓದಿರಿ: ಮುರುಘಾ ಶರಣರ ಪ್ರಕರಣ: ಒಡನಾಡಿಗೆ ಬೆದರಿಕೆ; ರಕ್ಷಣೆಗಾಗಿ ಪೊಲೀಸ್ ಮೊರೆಹೋದ ಸಂಸ್ಥೆ

ಲಿಂಗಾಯತ ಧರ್ಮ ಹೋರಾಟ ಉಚ್ಚ್ರಾಯದಲ್ಲಿದ್ದ ಅವಧಿಯದು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಲಿಂಗಾಯತವು ಸ್ವತಂತ್ರ ಧರ್ಮ ಹೇಗೆ?’ ಎಂಬ ಶೀರ್ಷಿಕೆಯಲ್ಲಿ ಮುರುಘಾ ಶಿವಮೂರ್ತಿ ಶರಣರು ಲೇಖನ ಬರೆದಿದ್ದರು. “ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಗ ಪುನಃ ಬಲ ಪಡೆದುಕೊಂಡಿದೆ. ಕೆಲವರು ಲಿಂಗಾಯತವು ಹಿಂದೂಧರ್ಮದ ಒಂದು ಪ್ರಭೇದವೆಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರು, ಲಿಂಗಾಯತವು ಸ್ವತಂತ್ರಧರ್ಮ ಆಗುವ ಎಲ್ಲ ಆಶಯಗಳನ್ನು ಹೊಂದಿದೆ ಎಂದು ಧೈರ್ಯವಾಗಿ ಪ್ರತಿಪಾದಿಸತೊಡಗಿದ್ದಾರೆ. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಲಿಂಗಾಯತವು ಸ್ವತಂತ್ರಧರ್ಮ ಹೇಗೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ” ಎಂಬ ಸಾಲುಗಳನ್ನು ಶರಣರು ಬರೆದಿದ್ದರು.

“ಧರ್ಮವೆನಿಸಿಕೊಳ್ಳಲು ಧಾರ್ಮಿಕ ಸಂವಿಧಾನ ಇರಬೇಕು. ಶರಣರ ವಚನಗಳೇ ಲಿಂಗಾಯತ ಧರ್ಮಕ್ಕೆ ಸಂವಿಧಾನ. ಅವುಗಳೇ ಧರ್ಮಗ್ರಂಥ. ಧರ್ಮಕ್ಷೇತ್ರವಾಗಿ ಬಸವಕಲ್ಯಾಣ, ಕೂಡಲಸಂಗಮ, ಉಳವಿ, ಕದಳಿವನ, ಸೊಲ್ಲಾಪುರ ಮತ್ತಿತರ ಶರಣಕ್ಷೇತ್ರಗಳಿವೆ. ಈ ತತ್ತ್ವ-ಸಿದ್ಧಾಂತವನ್ನು ಪ್ರತಿಪಾದಿಸುತ್ತ ಬಂದಿರುವ ಮಠ-ಪೀಠಗಳಿವೆ. ಶ್ರೀಗುರುಬಸವಲಿಂಗಾಯನಮಃ ಎಂಬುದು ಇವರ ಮಂತ್ರ” ಎಂಬ ಅಭಿಪ್ರಾಯ ತಾಳುವ ಮುರುಘಾ ಶರಣರು, ಲಿಂಗಾಯತ ಧರ್ಮ ಇತರ ಧರ್ಮಕ್ಕಿಂತ, ವೈದಿಕ ಆಚರಣೆಗಳಿಗಿಂತ ಹೇಗೆ ಭಿನ್ನ ಎಂದು ನಿರೂಪಿಸಿದ್ದರು. (ಮುರುಘಾ ಶರಣರ ಪೂರ್ಣ ಲೇಖನವನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿ)

“ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸ್ವಾಗತಾರ್ಹ. ಬಸವಾದಿ ಶರಣರ ಹೋರಾಟಗಳಿಗೆ ಗೌರವ, ಘನತೆ ಸಿಗಬೇಕಾದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು”ಎಂದು ಅವರು ಪ್ರತಿಪಾದಿಸಿದ್ದರು. ಇದು ಕೂಡ ‘ವರದಿ’ಯಾಗಿರುವುದನ್ನು ಗಮನಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...