Homeಕರ್ನಾಟಕಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್‌ ಆರೋಪ

ಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್‌ ಆರೋಪ

“ಜಗದ್ಗುರುಗಳು ಈಗ ಜಾತಿ ಗುರುಗಳಾಗಿದ್ದಾರೆ. ಸಂಸಾರಿಗಳನ್ನೇ ಪೀಠಾಧಿಪತಿಗಳನ್ನಾಗಿ ನೇಮಿಸಿ ಹೊಸ ರೂಪ ಕೊಡಬೇಕಾಗಿದೆ.”

- Advertisement -
- Advertisement -

“ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಸಾಕ್ಷಿಗಳನ್ನು ನಾಶ ಮಾಡಲಾಗಿದೆ” ಎಂದು ಬಿಜೆಪಿ ನಾಯಕ, ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, “ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ದಾಖಲಾದ ತಕ್ಷಣ ತನಿಖೆ ನಡೆಸಲಿಲ್ಲ. ವಿಳಂಬ ಧೋರಣೆ ಅನುಸರಿಸಿದ್ದರಿಂದ ಸಾಕ್ಷ್ಯಗಳು ನಾಶವಾಗಿವೆ. ಗೃಹ ಇಲಾಖೆಯೇ ಇದಕ್ಕೆ ನೇರ ಹೊಣೆಯಾಗಿದೆ” ಎಂದು ದೂರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತು ತಕ್ಷಣವೇ ಸ್ವಾಮೀಜಿಯನ್ನು ಬಂಧಿಸಬೇಕಾಗಿತ್ತು ಎಂದು ಆವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗದ್ಗುರುಗಳು ಈಗ ಜಾತಿ ಗುರುಗಳಾಗಿದ್ದಾರೆ. ದಲಿತ, ಹಿಂದುಳಿದ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿರುವಾಗ ಅಹಿಂದ ನಾಯಕರು, ಸ್ವಾಮೀಜಿಗಳು ಏನು ಮಾಡುತ್ತಿದ್ದಾರೆ? ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

ಆರೋಪ ಹೊತ್ತಿರುವ ಮುರುಘಾ ಶರಣರ ಪರವಾಗಿ ಕೆಲವು ಸಚಿವರು, ಮಾಜಿ ಸಚಿವರು ಮಾತನಾಡುತ್ತಿರುವುದನ್ನು ನೋಡಿದರೆ ಅವರು ಪೋಕ್ಸೋ ಕಾನೂನುನನ್ನು ಅರ್ಥ ಮಾಡಿಕೊಂಡಿಲ್ಲ ಅನ್ನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನ್ಯಾಯಾಧೀಶರು ಈ ಪ್ರಕರಣದಲ್ಲಿ ನ್ಯಾಯ ಎತ್ತಿಹಿಡಿದಿದ್ದಾರೆ. ಯಾರಿಗಾದರೂ ಒಂದು ಲಕ್ಷ ರೂ. ಕೊಟ್ಟರೆ ಲೆಕ್ಕ ಕೇಳುವ ಸರ್ಕಾರ ಮಠಕ್ಕೆ ಹತ್ತಾರು ಕೋಟಿ ರೂ. ಅನುದಾನ ನೀಡಿದೆ. ಇದರ ಲೆಕ್ಕ ಕೇಳುವವರು ಯಾರು ಇಲ್ಲ” ಎಂದು ಕಿಡಿಕಾರಿದ್ದಾರೆ.

ಸಂಸಾರಿಗಳನ್ನೇ ಪೀಠಾಧಿಪತಿಗಳನ್ನಾಗಿ ನೇಮಿಸಿ ಹೊಸ ರೂಪ ಕೊಡಬೇಕಾಗಿದೆ. ಚೆನ್ನೈನ ಒಡೆಯರ್ ಸಂತತಿಯಲ್ಲಿರುವ ಪೀಠಾಧಿಪತಿಗಳು ಸಂಸಾರಿಕರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂಸಾರಿಯಾಗಿದ್ದಾರೆ. ಇಂತಹ ಉದಾಹರಣೆಗಳು ಇರುವಾಗ ಸಂಸಾರಿಗಳನ್ನೇ ನೇಮಿಸಿದರೂ ತಪ್ಪಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಶರಣ ಪರಂಪರೆಯಲ್ಲಿ ಕೌಂಟುಬಿಕ ಜೀವನ ಹಾಗೂ ಕಾಮದ ದೃಷ್ಟಿಕೋನವೇನು?

ಪೋಕ್ಸೋ ಪ್ರಕರಣ ದಾಖಲಾಗಲು ಪ್ರಮುಖ ಪಾತ್ರ ವಹಿಸಿದ ಒಡನಾಡಿ ಸಂಸ್ಥೆಯ ಪರಶು ಹಾಗೂ ಸ್ಟ್ಯಾನ್ಲಿಯವರಿಗೆ ಜೀವ ಬೆದರಿಕೆಗಳು ಬಂದಿರುವ ಕುರಿತು ಮಾತನಾಡಿದ ಅವರು, “ಒಡನಾಡಿಯ ಸ್ಟ್ಯಾನ್ಲಿ, ಪರಶುರಾಮ್ ಜೀವಕ್ಕೆ ಏನಾದರೂ ಅಪಾಯವಾದಲ್ಲಿ ಸರ್ಕಾರವೇ ಕಾರಣ” ಎಂದು ಎಚ್ಚರಿಸಿದ್ದಾರೆ.

ಹೆಸರಾಂತ ಪೀಠ, ಸ್ವಾಮೀಜಿ ವಿರುದ್ಧ ನಿಲ್ಲುವುದು ಅಷ್ಟು ಸುಲಭವಲ್ಲ. ಯಾವುದೇ ಬೆದರಿಕೆಗೆ ಹೆದರದೆ ಹೆಣ್ಣು ಮಕ್ಕಳ ಪರವಾಗಿ ಒಡನಾಡಿ ಸಂಸ್ಥೆ ನಿಂತಿದೆ. ಸರ್ಕಾರ ಕೂಡಲೇ ಸಂಸ್ಥೆಗೆ ಭದ್ರತೆ ಒದಗಿಸಬೇಕು. ಮಕ್ಕಳಿಗೆ ರಕ್ಷಣೆ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...