Homeಮುಖಪುಟಸಂಸತ್ತಿನ ಹಳೆಯ ಕಟ್ಟಡ ಭಾರತದ ಪರಂಪರೆಯ ಭಾಗ, ಅದನ್ನು ಬಳಸಿಕೊಳ್ಳಬೇಕು: ರಾಜೀವ್‌ ಶುಕ್ಲಾ

ಸಂಸತ್ತಿನ ಹಳೆಯ ಕಟ್ಟಡ ಭಾರತದ ಪರಂಪರೆಯ ಭಾಗ, ಅದನ್ನು ಬಳಸಿಕೊಳ್ಳಬೇಕು: ರಾಜೀವ್‌ ಶುಕ್ಲಾ

- Advertisement -
- Advertisement -

ಸಂಸತ್ತಿನ ಹಳೆಯ ಕಟ್ಟಡ ಭಾರತದ ಪರಂಪರೆಯ ಭಾಗವಾಗಿದೆ ಮತ್ತು ಅದನ್ನು ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ರಾಜೀವ್‌ ಶುಕ್ಲಾ ಅವರು ಹೇಳಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್‌ ಸಂಸದ ರಾಜೀವ್‌ ಶುಕ್ಲಾ, ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರತಿಪಕ್ಷಗಳಿಗೆ ಅವಕಾಶವಿದೆ. ಅದಕ್ಕೆ ಅವಕಾಶ ನೀಡಬೇಕು, ಸಂಸತ್ತಿನ ಹಳೆಯ ಕಟ್ಟಡ ಭಾರತದ ಪರಂಪರೆಯ ಭಾಗವಾಗಿದೆ ಮತ್ತು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌದರಿ ಅವರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಸದನದಲ್ಲಿ ತಮ್ಮ ಭಾಷಣದ ವೇಳೆ ಸಮಯದ ಮಿತಿಯನ್ನು ಮೀರಿದಾಗ ಸ್ಪೀಕರ್ ಹೇಗೆ ಗಂಟೆ ಬಾರಿಸುತ್ತಿದ್ದರು ಎಂಬುದನ್ನು ಚೌಧರಿ ನೆನಪಿಸಿಕೊಂಡರು. ಭಾರತ-ಪಾಕಿಸ್ತಾನ ವಿಭಜನೆ, ಬಡತನ ಮತ್ತು ಇತರ ಸವಾಲುಗಳಿಂದ ದೇಶವು ತತ್ತರಿಸುತ್ತಿರುವ ಸಮಯದಲ್ಲಿ ಭಾರತಕ್ಕೆ ನೆಹರೂ ಅವರ ಕೊಡುಗೆಯನ್ನು ಅವರು  ನೆನಪಿಸಿಕೊಂಡಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವವು ಹಲವು ಸದ್ಗುಣಗಳನ್ನು ಬಯಸುತ್ತದೆ ಎಂದು ಪಂಡಿತ್ ನೆಹರು ಹೇಳಿದ್ದರು.  ಪಂಡಿತ್ ನೆಹರು ಸಂಸತ್ತಿನಲ್ಲಿ ಭಾರಿ ಬಹುಮತವನ್ನು ಪಡೆದಿದ್ದರೂ, ವಿರೋಧ ಪಕ್ಷದ ಧ್ವನಿಯನ್ನು ಆಲಿಸುವಲ್ಲಿ ಅವರು ದಣಿವರಿಯಲಿಲ್ಲ. ಪ್ರಶ್ನೆಗಳಿಗೆ ಉತ್ತರಿಸುವಾಗ ಎಂದಿಗೂ ಅಪಹಾಸ್ಯ ಅಥವಾ ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ. ಸಂಸತ್ತಿನಲ್ಲಿ ಭಾಷಣ ಮಾಡುವಾಗ ಜವಾಹರಲಾಲ್ ನೆಹರು ಅವರು ತಮ್ಮ ಸಮಯದ ಮಿತಿಯನ್ನು ಮೀರಿದಾಗ ಸ್ಪೀಕರ್ ಬೆಲ್ ಕೂಡ ಬಾರಿಸುತ್ತಿದ್ದರು ಎಂದು ಚೌದರಿ ಅವರು ತಮ್ಮ ಮಾತಿನಲ್ಲಿ ನೆನಪಿಸಿಕೊಂಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಕುರಿತು ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು ಮಾತನಾಡಿದ್ದು,  ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯುಪಿಎ ಕಲ್ಪನೆಯ ಕೂಸು. ನಾವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿದ್ದೇವೆ. ನಾವು ಸಂಪೂರ್ಣವಾಗಿ ಮಹಿಳಾ ಮೀಸಲಾತಿ ಪರ ಇದ್ದೇವೆ. ಕೇಂದ್ರ ಸರಕಾರಕ್ಕೆ ಈ ಕುರಿತು ಪ್ರಾಮಾಣಿಕತೆ ಇದ್ದರೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಹೊಸ ಸಂಸತ್‌ಗೆ ಹೋದರೆ ಹೊಸದೇನೂ ಆಗುವುದಿಲ್ಲ: ಮಲ್ಲಿಕಾರ್ಜುನ್ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...