HomeUncategorizedಹೊಸ ಸಂಸತ್‌ಗೆ ಹೋದರೆ ಹೊಸದೇನೂ ಆಗುವುದಿಲ್ಲ: ಮಲ್ಲಿಕಾರ್ಜುನ್ ಖರ್ಗೆ

ಹೊಸ ಸಂಸತ್‌ಗೆ ಹೋದರೆ ಹೊಸದೇನೂ ಆಗುವುದಿಲ್ಲ: ಮಲ್ಲಿಕಾರ್ಜುನ್ ಖರ್ಗೆ

- Advertisement -
- Advertisement -

ಇಂದು (ಸೆಪ್ಟೆಂಬರ್ 18) ಸಂಸತ್​​ನ ‘ವಿಶೇಷ’ ಅಧಿವೇಶನ ಪ್ರಾರಂಭವಾಗಿದ್ದು, ಅಧಿವೇಶನದ ಮೊದಲ ದಿನ ಸಂವಿಧಾನ ರಚನಾ ಸಭೆಯ ರಚನೆಯಿಂದ 75 ವರ್ಷಗಳ ಸಂಸದೀಯ ಪಯಣದ ಕುರಿತು ಮಾತನಾಡಲಾಯಿತು.

ಇಂದಿನಿಂದ ಆರಂಭವಾದ ವಿಶೇಷ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ನಿನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಅಜೆಂಡಾದಲ್ಲಿ ಏನಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ನಾವು ಈಗಾಗಲೇ ನಮ್ಮ ಕಾರ್ಯಸೂಚಿಯನ್ನು ಪ್ರಕಟಿಸಿದ್ದೇವೆ, ಇಂದು ಚರ್ಚಿಸಲಿರುವ 75 ವರ್ಷಗಳ ಸಂಸತ್ತಿನ ಪಯಣಕ್ಕೆ ಹಾಜರಾಗಲು ನಾನು ಅವರನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸೆ. 19ರಂದು ಹೊಸ ಕಟ್ಟಡದಲ್ಲಿ ಕಲಾಪ ನಡೆಯಲಿದೆ. ರಾಷ್ಟ್ರಗೀತೆಯ ನಂತರ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಲೋಕಸಭೆಯಲ್ಲಿ ಕಲಾಪ ಆರಂಭಿಸಲು ಸದಸ್ಯರು ಸಭೆ ಸೇರುತ್ತಿದ್ದಂತೆ, ಪ್ರತಿಪಕ್ಷಗಳ ಮೈಕ್‌ಗಳನ್ನು ಆಫ್ ಮಾಡಿಲಾಗಿತ್ತು. ಇದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು. ನಂತರ ಸ್ಪೀಕರ್ ಓಂ ಬಿರ್ಲಾ ಅವರು ತಾಂತ್ರಿಕ ದೋಷವಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.

ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ್‌ ಖರ್ಗೆ ಮಾತನಾಡಿ, ”ಅಟಲ್ ಬಿಹಾರಿ ವಾಜಪೇಯಿ 21 ಬಾರಿ, ಮನಮೋಹನ್ ಸಿಂಗ್ 30 ಬಾರಿ ಹೇಳಿಕೆ ನೀಡಿದ್ದಾರೆ . ಆದಾಗ್ಯೂ ಕೆಲವು ‘ಸಾಂಪ್ರದಾಯಿಕ ಕಾಮೆಂಟ್’ಗಳನ್ನು ಹೊರತುಪಡಿಸಿ, ಪ್ರಧಾನಿ ಮೋದಿ ಕೇವಲ ಎರಡು ಬಾರಿ ಮಾತ್ರ ತಮ್ಮ ಹೇಳಿಕೆಯನ್ನು ನೀಡಿದ್ದಾರೆ” ಎಂದು ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.

ನಿಮ್ಮ ರಾಜಕೀಯ ಮಾಡುವ ವಿಧಾನವನ್ನು ಬದಲಿಸಿ, ಹೊಸ ಸಂಸತ್ ಗೆ ನಾವು ಹೋದರೆ ಹೊಸದೇನೂ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ವೇಳೆ ಸಭಾಪತಿ ಜಗದೀಪ್ ಧನ್ಖರ್ ಆಕ್ಷೇಪಿಸಿ ಖರ್ಗೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಸಭಾಪತಿಯನ್ನು ಕೋರಿದರು.

ರಾಜ್ಯಸಭೆಯಲ್ಲಿ ವಿವಿಧ ಅಧಿವೇಶನಗಳಲ್ಲಿ ನಡೆದಿರುವ ಅಡೆತಡೆಗಳ ಬಗ್ಗೆ ಪ್ರತಿಕ್ರಿಯಿಸಿದ ಧನ್ಖರ್, ಪ್ರತಿಪಕ್ಷಗಳು ಸಭಾಪತಿಯ ನಿರ್ಧಾರವನ್ನು ಅಗೌರವಗೊಳಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

”ನೆಹರೂ ಅವರು ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯು ವ್ಯವಸ್ಥೆಯಲ್ಲಿ ಗಮನಾರ್ಹ ನ್ಯೂನತೆಗಳಿವೆ ಎಂದು ನಂಬುತ್ತಾರೆ, ಯಾವುದೇ ಪ್ರಬಲ ವಿರೋಧವಿಲ್ಲದಿದ್ದರೆ, ಅದು ಸರಿಯಲ್ಲ. ಈಗ, ಪ್ರಬಲ ವಿರೋಧವಿದೆ, ಇಡಿ, ಸಿಬಿಐ ಮೂಲಕ ದುರ್ಬಲಗೊಳಿಸುವುದರ ಮೇಲೆ ಕೇಂದ್ರ ಸರ್ಕಾರ ಗಮನ ಕೇಂದ್ರೀಕರಿಸಿದೆ. ಅವರು ತಮ್ಮ ಪಕ್ಷಕ್ಕೆ ಕರೆದೊಯ್ದು ಅಲ್ಲಿ ವಾಷಿಂಗ್ ಮೆಷಿನ್‌ನಲ್ಲಿ ಕೊಳೆ ತೊಳೆದಂತೆ ಅವರ ಮೇಲಿನ ಅಪರಾಧಗಳನ್ನು ಮನ್ನಿಸಿ ಅವರನ್ನು ತಮ್ಮ ಪಕ್ಷದಲ್ಲಿ ಖಾಯಂ ಮಾಡಿಕೊಳ್ಳುತ್ತಾರೆ. ಇವತ್ತು ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು, ಸಂಸತ್​​ಗೆ ಪ್ರಧಾನಿ ಅಪರೂಪಕ್ಕೆ ಬರುತ್ತಾರೆ. ಅವರು ಅವರ ಕಾರ್ಯಕ್ರಮ ಮಗಿಸಿ ನಂತರ ಹೊರಟು ಹೋಗುತ್ತಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನೆಹರು ಸಂಸತ್ತಿನಲ್ಲಿ ದಣಿವರಿಯದೆ ವಿರೋಧ ಪಕ್ಷದ ಧ್ವನಿಯನ್ನು ಆಲಿಸಿದ್ದರು: ಅಧೀರ್ ಚೌಧರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...