Homeಕರ್ನಾಟಕ"ಸ್ಪಷ್ಟ ಲಿಖಿತ ಭರವಸೆ ದೊರೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ": ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿಸಿ ಅಹೋರಾತ್ರಿ...

“ಸ್ಪಷ್ಟ ಲಿಖಿತ ಭರವಸೆ ದೊರೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ”: ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರಿಕೆ; ಪ್ರತಿಭಟನಾ ಸ್ಥಳಕ್ಕೆ ಸಚಿವ ಡಾ. ಅಜಯ್ ಸಿಂಗ್ ಭೇಟಿ

- Advertisement -
- Advertisement -

ಬೆಂಗಳೂರು, ನವೆಂಬರ್ 28, 2026: ಶಿಕ್ಷಣ ಹಕ್ಕು ಕಾಯಿದೆ (RTE) ಸಮರ್ಪಕ ಜಾರಿ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ನೀತಿಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ ‘ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ, ಕರ್ನಾಟಕ’ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನವೂ ತೀವ್ರಗೊಂಡಿದೆ. ಮುಖ್ಯಮಂತ್ರಿಗಳೊಂದಿಗೆ ನೇರ ಸಭೆ ನಿಗದಿಯಾಗಿ ಸ್ಪಷ್ಟ ಲಿಖಿತ ಭರವಸೆ ದೊರೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ನವೆಂಬರ್ 26ರಿಂದ ಆರಂಭವಾಗಿರುವ ಈ ಅಹೋರಾತ್ರಿ ಸತ್ಯಾಗ್ರಹದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕ ಮಹಿಳೆಯರು, ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿಎಂಸಿ (SDMC) ಪದಾಧಿಕಾರಿಗಳು ಮತ್ತು ಶಿಕ್ಷಣ ಹಕ್ಕು ಹೋರಾಟಗಾರರು ಪಾಲ್ಗೊಂಡಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅವರು, “ಕಳೆದ ಮೂರು ದಿನಗಳಿಂದ ಕೂಲಿ ಮಾಡುವ ಹೆಣ್ಣುಮಕ್ಕಳು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಅವರ ಹಕ್ಕೊತ್ತಾಯಗಳನ್ನು ಕೇಳಲು ಬಾರದ ಮತ್ತು ಕನಿಷ್ಠ ಸ್ಪಂದಿಸದೆ ಇರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಡೆ ಪ್ರಜಾತಂತ್ರ ವ್ಯವಸ್ಥೆಗೆ ಸ್ಫೂರ್ತಿದಾಯಕವಲ್ಲ” ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಶಿಕ್ಷಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವೇದಿಕೆ ಇದೇ ವೇಳೆ ಆಗ್ರಹಿಸಿತು.

ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರು, ಮೂಲಸೌಕರ್ಯ ಮತ್ತು ಅನುದಾನವನ್ನು ಒದಗಿಸುವ ಬದಲು ಅವುಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳ ದತ್ತು ಅಥವಾ ಮೆಂಟರ್‌ಶಿಪ್‌ಗೆ ನೀಡುವ ನೀತಿಯು ಸಾರ್ವಜನಿಕ ಶಿಕ್ಷಣದ ಆಶಯಕ್ಕೆ ವಿರುದ್ಧವಾಗಿದೆ. RTE ಅನುಷ್ಠಾನಕ್ಕೆ ಕನಿಷ್ಠ ಕ್ರಿಯಾ ಯೋಜನೆಯನ್ನೂ ರೂಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು

ಪ್ರತಿಭಟನಾ ಸ್ಥಳಕ್ಕೆ ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು. “ಸರ್ಕಾರ ನಿಮ್ಮ ಪರವಾಗಿದೆ ಹಾಗೂ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು” ಎಂದು ಸಚಿವರು ಭರವಸೆ ನೀಡಿದರು.

ಸಚಿವರ ಈ ಭರವಸೆಯನ್ನು ಸ್ವಾಗತಿಸಿದ ಪ್ರತಿಭಟನಾಕಾರರು, ಕೇವಲ ಮೌಖಿಕ ಭರವಸೆಯಿಂದ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳೊಂದಿಗೆ ನೇರ ಸಭೆ ನಡೆದು, ತಮ್ಮ ಬೇಡಿಕೆಗಳ ಕುರಿತು ಸ್ಪಷ್ಟವಾದ ಲಿಖಿತ ಭರವಸೆ ಸಿಗುವವರೆಗೂ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿಯನ್ನು ಮುಂದುವರಿಸುವುದಾಗಿ ವೇದಿಕೆ ಘೋಷಿಸಿದೆ.

ಹೋರಾಟಗಾರರ ಪ್ರಮುಖ ಹಕ್ಕೊತ್ತಾಯಗಳು:

  1. ಶಿಕ್ಷಣ ಹಕ್ಕು ಕಾಯಿದೆಯ ಸಮರ್ಪಕ ಜಾರಿ: ರಾಜ್ಯದ ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕನ್ನು ಖಚಿತಪಡಿಸಲು RTE ಕಾಯಿದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು. ಇದಕ್ಕಾಗಿ ಶಾಲಾವಾರು ಅಗತ್ಯಗಳು, ಶಿಕ್ಷಕರ ನೇಮಕಾತಿ, ಮೂಲಸೌಕರ್ಯ, ಅನುದಾನ ಮತ್ತು ಅನುಷ್ಠಾನದ ಕಾಲಮಿತಿಯನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿ ಪ್ರಕಟಿಸಬೇಕು.
  2. ಸರ್ಕಾರಿ ಶಾಲೆಗಳ ದತ್ತು / ಮೆಂಟರ್ ಯೋಜನೆ ರದ್ದತಿ: ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳ ದತ್ತು ಅಥವಾ ಮೆಂಟರ್‌ಶಿಪ್‌ಗೆ ನೀಡುವ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು. ಸಾರ್ವಜನಿಕ ಶಿಕ್ಷಣದ ಆಡಳಿತ, ಹೊಣೆಗಾರಿಕೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.

ಈ ಹೋರಾಟದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ, ಗ್ರಾಕೂಸ ಸಂಘಟನೆಯ ಮುಖ್ಯಸ್ಥರಾದ ವಿದ್ಯಾ ಪಾಟೀಲ್, ಅಭಯ್, ಪೋಷಕ ಸಂಘಟನೆಯ ಅಧ್ಯಕ್ಷ ಯೋಗಾನಂದ, SDMC ಸಮನ್ವಯ ವೇದಿಕೆಯ ಕೆ.ಆರ್. ಸೌಮ್ಯ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. “ಶಿಕ್ಷಣವು ದಾನವಲ್ಲ, ಅದು ಪ್ರತಿಯೊಂದು ಮಗುವಿನ ಸಂವಿಧಾನಬದ್ಧ ಹಕ್ಕು. ಸರ್ಕಾರಿ ಶಾಲೆಗಳನ್ನು ಖಾಸಗಿಯವರ ದಯೆ ಮತ್ತು ಕಾರ್ಪೊರೇಟ್‌ಗಳ ಔದಾರ್ಯಕ್ಕೆ ಬಿಡದೆ ಸರ್ಕಾರವೇ ಬಲಪಡಿಸುವವರೆಗೂ ಹೋರಾಟ ನಿಲ್ಲದು” ಎಂದು ವೇದಿಕೆ ಎಚ್ಚರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರು: ಕಡಿಮೆ ಕೂಲಿ ಪ್ರಶ್ನಿಸಿದ ವಲಸೆ ಕಾರ್ಮಿಕರ ಮೇಲೆ ಬಂದೂಕು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ; ಕರ್ನಾಟಕ ಜನಶಕ್ತಿ ಸಂಘಟನೆಯಿಂದ ನಾಳೆ ಪ್ರತಿಭಟನೆಗೆ ಕರೆ

ಚಿಕ್ಕಮಗಳೂರು: ದಿನಕ್ಕೆ 200-300 ರೂಪಾಯಿ ಕೂಲಿ ಸಾಕಾಗುವುದಿಲ್ಲ, ಬೇರೆ ತೋಟಕ್ಕೆ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಕ್ಕೆ ಕಾಫಿ ಎಸ್ಟೇಟ್ ಮಾಲೀಕರು ಬಂದೂಕು ಮತ್ತು ದೊಣ್ಣೆಗಳಿಂದ ಮಹಿಳೆಯರು ಸೇರಿದಂತೆ 34 ವಲಸೆ ಕಾರ್ಮಿಕರ ಮೇಲೆ ಮಾರಣಾಂತಿಕ...

‘ಬಿಜೆಪಿಗೆ ಚುನಾವಣೆಗಳೇ ಮುಖ್ಯ, ದೇಶವಲ್ಲ..’; ಕ್ಷೇತ್ರ ಮರುವಿಂಗಡಣೆ ಮಸೂದೆ ವಿಚಾರವಾಗಿ ಕೇಂದ್ರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ...

“ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಬೆಂಬಲ ನೀಡಿ, ಇಲ್ಲವೇ ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಎದುರಿಸಿ” : ಡಿಎಂಕೆಗೆ ಬಿಜೆಪಿ ಪರೋಕ್ಷ ಎಚ್ಚರಿಕೆ-ವರದಿ

ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡಲು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ನಿರ್ಧರಿಸಿದೆ. ಶನಿವಾರ (ನ.28) ಚೆನ್ನೈನಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ: ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೆ ಸಂದ ಜಯ ಎಂದ ಎಂ.ಕೆ. ಸ್ಟಾಲಿನ್

ಚೆನ್ನೈ: ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಸಂವಿಧಾನ ತಿದ್ದುಪಡಿ ಮಸೂದೆಗೆ ಡಿಎಂಕೆ ಶನಿವಾರ ಅಧಿಕೃತವಾಗಿ ಬೆಂಬಲ...

ನ್ಯಾಯಾಂಗ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲು ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಹ್ಯೂಮನ್ ರೈಟ್ಸ್ ವಾಚ್ ಗಂಭೀರ ಆತಂಕ!

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಕುರಿತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ 'ಹ್ಯೂಮನ್ ರೈಟ್ಸ್ ವಾಚ್' (HRW) ಗಂಭೀರ ಆತಂಕ ವ್ಯಕ್ತಪಡಿಸಿದೆ. ಕಾನೂನು ತಿದ್ದುಪಡಿಗಳು, ರಾಜಕೀಯ...

ತಿರುಪರಂಕುಂದ್ರಂ ಬೆಟ್ಟದ ಭದ್ರತೆ ವಹಿಸಿಕೊಂಡ ಸಿಆರ್‌ಪಿಎಫ್ : ದೀಪ ಬೆಳಗಿಸಲು ಸಿದ್ಧತೆ; ದರ್ಗಾಕ್ಕೆ ಮುಸ್ಲಿಮರ ಭೇಟಿ

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಧುರೈನ ತಿರುಪರಂಕುಂದ್ರಂ ಬೆಟ್ಟದ ಸಂಪೂರ್ಣ ಭದ್ರತೆ ಮತ್ತು ಕಣ್ಗಾವಲು ಹೊಣೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಶನಿವಾರ (ನ.28) ಬೆಳಿಗ್ಗೆ ವಹಿಸಿಕೊಂಡಿದೆ. ಬೆಟ್ಟದ ಮೇಲಿರುವ ದೀಪತ್ತೂಣ್...

ಜಾತಿವಾದಿ ಹೇಳಿಕೆ ಆರೋಪ: ಎಚ್‌ಸಿಯು ಪ್ರಾಧ್ಯಾಪಕರ ಅಮಾನತಿಗೆ ಮಾನವ ಹಕ್ಕುಗಳ ವೇದಿಕೆ ಆಗ್ರಹ

ಹಳೆಯ ವಿದ್ಯಾರ್ಥಿಗಳ ವಿರುದ್ಧ ಜಾತಿವಾದಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಎಚ್‌ಸಿಯು) ಸಹಾಯಕ ಪ್ರಾಧ್ಯಾಪಕ ವಿಜಯ್ ರಾಮದಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾನವ...

ಪಾಕಿಸ್ತಾನದಿಂದ ಹಣ ಪಡೆದ ಆರೋಪ : ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ಗೆ ಅಶುತೋಷ್ ರಾಂಕಾ ಮಾನನಷ್ಟ ನೋಟಿಸ್, 3 ಕೋಟಿ ರೂ. ಪರಿಹಾರ ನೀಡಲು ಆಗ್ರಹ

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರಿಗೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕ ಅಶುತೋಷ್ ರಾಂಕಾ ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ....

ಪಂಜಾಬ್‌| ದಲಿತ ಯುವಕನ ‘ಲಾಕಪ್ ಡೆತ್’ ಆರೋಪ: ನ್ಯಾಯಕ್ಕೆ ಆಗ್ರಹಿಸಿ ಕುಟುಂಬಸ್ಥರ ಪ್ರತಿಭಟನೆ

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಜಿರಾದಲ್ಲಿ 19 ವರ್ಷದ ಜಶನ್‌ದೀಪ್ ಎಂಬ ಯುವಕನ ಸಾವಿನ ಪ್ರಕರಣ ಉದ್ವಿಗ್ನತೆಗೆ ಕಾರಣವಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದರಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶುಕ್ರವಾರ ಶೆರಾವಾಲಾ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ

ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಮುಂಬರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ಬೆಂಬಲಿಸುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ...