Homeಮುಖಪುಟಪರಿಷತ್ ಚುನಾವಣೆ: RSS ಪ್ರಧಾನ ಕಚೇರಿಯಿರುವ ನಾಗ್ಪುರದಲ್ಲೇ ಬಿಜೆಪಿಗೆ ಮುಖಭಂಗ

ಪರಿಷತ್ ಚುನಾವಣೆ: RSS ಪ್ರಧಾನ ಕಚೇರಿಯಿರುವ ನಾಗ್ಪುರದಲ್ಲೇ ಬಿಜೆಪಿಗೆ ಮುಖಭಂಗ

- Advertisement -
- Advertisement -

ಮಹಾರಾಷ್ಟ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಭದ್ರಕೋಟೆಯಲ್ಲಿಯೇ ಬಿಜೆಪಿ ಸೋಲು ಕಂಡಿದೆ.

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಿರುವ ನಾಗ್ಪುರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ಒಕ್ಕೂಟದ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದಾರೆ. ಅಲ್ಲದೆ ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ತವರು ಕ್ಷೇತ್ರವಾಗಿದೆ.

ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರನ್ನು ಕೂಡ ವಿರೋಧ ಪಕ್ಷದ ಎಂವಿಎ ಬೆಂಬಲಿತ ಸುಧಾಕರ್ ಅಡಬಾಲೆ ಸೋಲಿಸಿದ್ದಾರೆ. ಶಿವಸೇನಾದಿಂದ ಬಂಡಾಯವೆದ್ದ ಉದ್ಧವ್ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಏಕನಾಥ್ ಶಿಂಧೆ ಅವರು ಎದುರಿಸಿದ ಮೊದಲ ಚುನಾವಣೆಯ ಇದಾಗಿದ್ದು, ಬಿಜೆಪಿ ಭದ್ರಕೋಟೆಯಿರುವ ಕ್ಷೇತ್ರದಲ್ಲೇ ಆಡಳಿತ ಪಕ್ಷಕ್ಕೆ ಸೋಲಾಗಿರುವುದು ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ.

ಇದನ್ನೂ ಓದಿ: ಮೇಘಾಲಯ: ಸಿಎಂ ವಿರುದ್ಧ ಮಾಜಿ ಉಗ್ರಗಾಮಿ ನಾಯಕನಿಗೆ ಟಿಕೆಟ್ ಘೋಷಿಸಿದ ಬಿಜೆಪಿ

ರಾಜ್ಯ ಶಾಸಕಾಂಗದ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ಮುಖ್ಯವಾಗಿ ಬಿಜೆಪಿ ಮತ್ತು ಶಿಂಧೆ ಅವರ ಶಿವಸೇನೆ ಬಣದ ಆಡಳಿತದ ಮೈತ್ರಿ ಮತ್ತು ಶ್ರೀ ಠಾಕ್ರೆ ಅವರ ಶಿವಸೇನಾ ಶಿಬಿರ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೊಂಡಿರುವ ಎಂವಿಎ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆಯಿತು.

ಮೂರು ಶಿಕ್ಷಕರ ಕ್ಷೇತ್ರ ಮತ್ತು ಇಬ್ಬರು ಪದವೀಧರ ಕ್ಷೇತ್ರಗಳಿಂದ ಐದು ಕೌನ್ಸಿಲ್ ಸದಸ್ಯರ 6 ವರ್ಷಗಳ ಅವಧಿ ಫೆಬ್ರವರಿ 7 ರಂದು ಮುಕ್ತಾಯಗೊಳ್ಳುತ್ತಿದ್ದು, ಮುಂಬರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೋಮವಾರ ಮತದಾನ ನಡೆಯಿತು. ಶಿಕ್ಷಕರು ಮತ್ತು ಪದವೀಧರರು ಕೆಲವು ಮಾನದಂಡಗಳನ್ನು ಪೂರೈಸುತ್ತಾರೆ ಮತ್ತು ಮತದಾರರಾಗಿ ನೋಂದಾಯಿಸಲ್ಪಟ್ಟವರು ಈ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು.

ಕೊಂಕಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.91.02 ಅತಿ ಹೆಚ್ಚು ಮತದಾನವಾಗಿದ್ದು, ನಾಸಿಕ್ ವಿಭಾಗದ ಪದವೀಧರರ ಸ್ಥಾನವು ಅತಿ ಕಡಿಮೆ ಶೇ.49.28ರಷ್ಟು ಮತದಾನವಾಗಿದೆ. ಔರಂಗಾಬಾದ್, ನಾಗ್ಪುರ ಮತ್ತು ಕೊಂಕಣ ವಿಭಾಗದ ಶಿಕ್ಷಕರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.86, ಶೇ.86.23 ಮತ್ತು ಶೇ.91.02ರಷ್ಟು ಮತದಾನವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...