Homeಮುಖಪುಟಒಣ ಹುಲ್ಲಿಗೆ ಹಸಿರು ಬಣ್ಣ, ಪಾದಚಾರಿ ಮಾರ್ಗಕ್ಕೆ ತ್ರಿವರ್ಣ ಬಣ್ಣ: ಮೋದಿ ಆಗಮನಕ್ಕೆ ಮಧ್ಯ ಪ್ರದೇಶ...

ಒಣ ಹುಲ್ಲಿಗೆ ಹಸಿರು ಬಣ್ಣ, ಪಾದಚಾರಿ ಮಾರ್ಗಕ್ಕೆ ತ್ರಿವರ್ಣ ಬಣ್ಣ: ಮೋದಿ ಆಗಮನಕ್ಕೆ ಮಧ್ಯ ಪ್ರದೇಶ ಸರ್ಕಾರದ ಸರ್ಕಸ್

ತೆಲಂಗಾಣ ರಾಜ್ಯದ ಸಚಿವ ಯತೀಶ್ ರೆಡ್ಡಿ ಆ ವಿಡಿಯೋವನ್ನು ಟ್ವೀಟ್ ಮಾಡಿ, ಇದು ದೇಶಕ್ಕೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.

- Advertisement -
- Advertisement -

ಇಂದು 17ನೇ ಪ್ರವಾಸಿ ದಿನದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಇಂಧೋರ್‌ಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಹೂಡಿಕೆದಾರರ ಶೃಂಗಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಪಾದಚಾರಿ ಮಾರ್ಗಗಳಿಗೆ ತ್ರಿವರ್ಣ ಬಣ್ಣ ಬಳಿದಿರುವ, ಒಣ ಹುಲ್ಲಿಗೆ ಹಸಿರು ಬಣ್ಣ ಬಳಿಯುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಾರ್ಯಕ್ರಮ ನಡೆಸುವ ಸ್ಥಳದ ಗೋಡೆಗಳಿಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯಲಾಗಿದೆ. ಅಲ್ಲದೆ ಒಣಗಿಹೋದ ನೆಲ ಹುಲ್ಲಿನ ರಾಶಿಗೆ ಹಸಿರು ಬಣ್ಣ ಬಳಿಯುವ ಮೂಲಕ ‘ಪ್ರೆಶ್’ ಎಂದು ತೋರಿಸಲು ಕಾರ್ಮಿಕರು ಪರದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಐಡಿಯಾ ಕೊಟ್ಟವರು ಯಾರು? ಒಂದು ವೇಳೆ ಹಸುಗಳೇನಾದರು ನಿಜ ಹುಲ್ಲು ಎಂದು ತಿಂದುಬಿಟ್ಟರೆ ಗತಿಯೇನು ಎಂಬ ಟೀಕೆಗಳು ವ್ಯಕ್ತವಾಗಿವೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ ರಸ್ತೆಯ ಪಾದಚಾರಿ ರಸ್ತೆಗಳಿಗೆ ಭಾರತದ ತ್ರಿವರ್ಣ ಬಣ್ಣವನ್ನು ಬಳಿಯಲಾಗಿದೆ. ಆ ಬಣ್ಣದ ಮೇಲೆ ಜನರು ಓಡಾಡುವುದರಿಂದ ಭಾರತದ ಧ್ವಜಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ತೆಲಂಗಾಣ ರಾಜ್ಯದ ಸಚಿವ ಯತೀಶ್ ರೆಡ್ಡಿ ಆ ವಿಡಿಯೋವನ್ನು ಟ್ವೀಟ್ ಮಾಡಿ, ಇದು ದೇಶಕ್ಕೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ; ನಾನು ಹಿಂದೂ, ಆದರೆ ಹಿಂದುತ್ವ ರಾಜಕೀಯವನ್ನು ವಿರೋಧಿಸುತ್ತೇನೆ; ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...