Homeಮುಖಪುಟವಿಶ್ವ ಮಣ್ಣು ದಿನ-2021: ’ಮಣ್ಣನ್ನು ಲವಣಯುಕ್ತಗೊಳಿಸುವುದನ್ನು ನಿಲ್ಲಿಸಿ, ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಿ’

ವಿಶ್ವ ಮಣ್ಣು ದಿನ-2021: ’ಮಣ್ಣನ್ನು ಲವಣಯುಕ್ತಗೊಳಿಸುವುದನ್ನು ನಿಲ್ಲಿಸಿ, ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಿ’

- Advertisement -
- Advertisement -

ಇಂದು (ಡಿ.5) ವಿಶ್ವ ಮಣ್ಣು ದಿನ. ಮನುಷ್ಯದಿಯಾಗಿ ಪ್ರಾಣಿ, ಸಸ್ಯ ಸೇರಿ ಎಲ್ಲಾ ಜೀವಿಗಳ ಆಧಾರ ಮಣ್ಣು. ಈ ದಿನ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ. ಮಣ್ಣಿನ ಸವಕಳಿಯನ್ನು ತಪ್ಪಿಸುವ, ಮಣ್ಣನ್ನು ಲವಣಯುಕ್ತಗೊಳಿಸುವುದನ್ನು ಬಿಡುವುದು ಸೇರಿದಂತೆ ಮಣ್ಣು ಸಂರಕ್ಷಣೆಯ ಮಹತ್ವವನ್ನು ತಿಳಿಸುವ ದಿನ ಇದಾಗಿದೆ.

ಈ ಮಣ್ಣು ದಿನವನ್ನು ಔಪಚಾರಿಕವಾಗಿ ಅನುಮೋದಿಸಿದ ಥಾಯ್ಲೆಂಡ್‌ನ ರಾಜ, ಕಿಂಗ್ ಭೂಮಿಬೋಲ್ ಅದುಲ್ಯಾ ದೇಜ್ ಅವರ ಜನ್ಮ ದಿನದಿಂದು ವಿಶ್ವ ಮಣ್ಣು ದಿನ ಆಚರಿಸಲಾಗುತ್ತದೆ. 2002 ರಲ್ಲಿ, ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟ (IUSS) ಜಾಗತಿಕವಾಗಿ ಈ ದಿನವನ್ನು ಆಚರಿಸುವಂತೆ ಪ್ರಸ್ತಾಪಿಸಿತು. ಮಣ್ಣಿನ ಸವಕಳಿ, ಅದರ ಪರಿಣಾಮಗಳು ಮತ್ತು ಅದನ್ನು ತಡೆಯುವುದು ಹೇಗೆ ಎಂಬುದರ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತು.

2013 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಡಿಸೆಂಬರ್ 5, 2014ರಂದು ಮೊದಲ ಅಧಿಕೃತವಾಗಿ ಅಂತರರಾಷ್ಟ್ರೀಯ ವಿಶ್ವ ಮಣ್ಣಿನ ದಿನ ಆಚರಿಸುವುದಾಗಿ ಘೋಷಿಸಿತು. ಪ್ರತಿ ವರ್ಷ ಒಂದೊಂದು ಥೀಮ್‌ನೊಂದಿಗೆ ಈ ದಿನ ಆಚರಿಸಲಾಗುತ್ತದೆ.

ಇದನ್ನೂ ಓದಿ: ರೈತರ ಹೋರಾಟದ ಗೆಲುವು ಮುಂದಿನ ಸಂಘಟನೆಗೆ ಚಿಮ್ಮು ಹಲಗೆಯಾಗಲಿದೆ: ಶ್ರೀಪಾದ್ ಭಟ್

2021 ರ ವಿಶ್ವ ಮಣ್ಣಿನ ದಿನದ ಥೀಮ್ “ಮಣ್ಣನ್ನು ಲವಣಯುಕ್ತಗೊಳಿಸುವುದನ್ನು ನಿಲ್ಲಿಸಿ, ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಿ” ಎಂಬುದು. ಮಣ್ಣಿನ ನಿರ್ವಹಣೆ ಮತ್ತು ಮಣ್ಣಿನ ಲವಣಾಂಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆಗಳ ಪ್ರಾಮುಖ್ಯತೆಯ ಅರಿವನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಮಣ್ಣು ಲವಣಯುಕ್ತಗೊಳ್ಳುವುದರಿಂದ ಕೃಷಿ ಇಳುವರಿ ಕಡಿಮೆಯಾಗುತ್ತದೆ. ಮಣ್ಣು ಜವಳುಗೊಂಡು ಆಮ್ಲ ಮತ್ತು ಕ್ಷಾರಮಯವಾಗಿ  ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ.

ವಿಶ್ವ ಮಣ್ಣಿನ ದಿನದ ಪ್ರಾಮುಖ್ಯತೆಯನ್ನು ವಿವರಿಸಲು, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಣ್ಣಿನ ಮಹತ್ವ ತಿಳಿಸುವ ಹಲವು ವಿಡಿಯೋಗಳನ್ನು ಹಂಚಿಕೊಂಡಿದೆ. ಜಗತ್ತಿನ ಶೇ. 95 ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು ಎಂಬುದನ್ನು ಒತ್ತಿ ತಿಳಿಸಿದೆ.

ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ದೀರ್ಘಕಾಲ ನಿರ್ವಹಣೆ ಮಾಡುವುದರ ಬಗ್ಗೆ ತಿಳಿಸಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ಮಣ್ಣಿನ ಸವಕಳಿ, ರಾಸಾಯನಿಕಗಳ ಬಳಕೆ, ಲವಣಯುಕ್ತಗೊಳ್ಳುವುದು, ಮಣ್ಣಿಗೆ ಪ್ಲಾಸ್ಟಿಕ್ ಸೇರುವುದು ಸೇರಿದಂತೆ ಹಲವು ಸಮಸ್ಯೆಗಳತ್ತ ಎಲ್ಲರ ಗಮನ ಸೆಳೆಯುವ ಗುರಿಯನ್ನು ಈ ದಿನ ಹೊಂದಿದೆ.

Image


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...