Homeನಾನು ಗೌರಿಪೆಟ್ರೋಲ್-ಡೀಸೆಲ್; 21ನೇ ದಿನವೂ ಬೆಲೆ ಏರಿಕೆ; ಬೆಂಗಳೂರಿನಲ್ಲಿ ಪೆಟ್ರೋಲ್ 82.9 ರೂ

ಪೆಟ್ರೋಲ್-ಡೀಸೆಲ್; 21ನೇ ದಿನವೂ ಬೆಲೆ ಏರಿಕೆ; ಬೆಂಗಳೂರಿನಲ್ಲಿ ಪೆಟ್ರೋಲ್ 82.9 ರೂ

- Advertisement -
- Advertisement -

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಿದೆ. 21 ನೆ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿರುವ ಸಮಯದಲ್ಲಿ ಜನರನ್ನು ದಿಕ್ಕೆಡಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು ಸಾಮಾನ್ಯವಾದ ಸಂಗತಿ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 21 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 41.50 ಡಾಲರ್ ಇದೆ. ಒಂದು ಡಾಲರ್ ಗೆ ರೂಪಾಯಿ ಮೌಲ್ಯ 75.66 ರಷ್ಟಿದೆ. ಆದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಏರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ ಇರುವುದರಿಂದ ಹಾಗೂ ಕೊರೋನಾ ಮತ್ತು ಲಾಕ್ಡೌನ್ ನಂತಹ ಕಷ್ಟದ ಸಂದರ್ಭ ಇದಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಬೇಕು. ಜನರಿಂದ ಹಣ ಸುಲಿಯಲು ಇದು ಸೂಕ್ತ ಕಾಲವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಆದರೂ ಪ್ರತಿಪಕ್ಷಗಳ ಮಾತಿಗೆ ಕಿಮ್ಮತ್ತು ಕೊಡದ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇದೆ.

ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್ ಗೆ 32.98 ರೂಪಾಯಿ ಮತ್ತು ಡೀಸೆಲ್ ಗೆ 31.83 ರೂಪಾಯಿ ಹಾಗೂ ಪೆಟ್ರೋಲ್ ಮೇಲಿನ ಡೀಲರ್ ಕಮಿಷನ್ 3.60 ರೂಪಾಯಿ ಮತ್ತು ಡೀಸೆಲ್ ಮೇಲಿನ ಡೀಲರ್ ಕಮಿಷನ್ 2.53 ರೂಪಾಯಿ ವಿಧಿಸುತ್ತಿದೆ. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ನೇರವಾಗಿ ಅರ್ಧ ಹಣ ಕೇಂದ್ರ ಸರ್ಕಾರದ ತಿಜೋರಿ ಸೇರಲಿದೆ.

ನಿರಂತರವಾಗಿ ಕಳೆದ 21 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಈವರೆಗೆ ಪ್ರತಿ ಲೀಟರ್ ಪೆಟ್ರೋಲ್ಗೆ 9.12 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 11.01 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 25 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಗೆ 21 ಪೈಸೆ ಹೆಚ್ಚಿಸಲಾಗಿದೆ. ದೇಶದ ವಿವಿದ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂತಿವೆ.

ಪೆಟ್ರೋಲ್, ಡೀಸೆಲ್ ಬೆಲೆ

• ಭೂಪಾಲ್- ಪೆಟ್ರೋಲ್ 88.03ರೂ., ಡೀಸೆಲ್ 79.81 ರೂ.
• ಮುಂಬೈ- ಪೆಟ್ರೋಲ್ 87.14 ರೂ., ಡೀಸೆಲ್ 78.71 ರೂ.
• ಚೆನ್ನೈ- ಪೆಟ್ರೋಲ್ 83.59 ರೂ., ಡೀಸೆಲ್ 77.61 ರೂ.
• ಪಾಟ್ನಾ- ಪೆಟ್ರೋಲ್ 83.27 ರೂ., ಡೀಸೆಲ್ 77.30 ರೂ.
• ಬೆಂಗಳೂರು- ಪೆಟ್ರೋಲ್ 82.97 ರೂ., ಡೀಸೆಲ್ 76.05 ರೂ.
• ಕೋಲ್ಕತ್ತಾ- ಪೆಟ್ರೋಲ್ 82.05 ರೂ., ಡೀಸೆಲ್ 75.52 ರೂ.
• ಲಕ್ನೊ- ಪೆಟ್ರೋಲ್ 80.94ರೂ., ಡೀಸೆಲ್ 72.37 ರೂ.
• ನೋಯ್ಡಾ- ಪೆಟ್ರೋಲ್ 80.92ರೂ., ಡೀಸೆಲ್ 72.33 ರೂ.
• ದೆಹಲಿ- ಪೆಟ್ರೋಲ್ 80.38 ರೂ., ಡೀಸೆಲ್ 80.40ರೂ.
• ರಾಂಚಿ- ಪೆಟ್ರೋಲ್ 80.26 ರೂ., ಡೀಸೆಲ್ 76.39ರೂ.
• ಫರೀದಾಬಾದ್- ಪೆಟ್ರೋಲ್ 78.83ರೂ., ಡೀಸೆಲ್ 73.00 ರೂ.
• ಗುರುಗ್ರಾಂ- ಪೆಟ್ರೋಲ್ 78.59ರೂ., ಡೀಸೆಲ್ 72.53 ರೂ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...