Homeಮುಖಪುಟಹಲವು ಮಹಾನಗರಗಳಲ್ಲಿ 13 ತಿಂಗಳಲ್ಲಿಯೇ ಅತ್ಯಧಿಕ ಏರಿಕೆ ಕಂಡ ಪೆಟ್ರೋಲ್‌ ಬೆಲೆ..

ಹಲವು ಮಹಾನಗರಗಳಲ್ಲಿ 13 ತಿಂಗಳಲ್ಲಿಯೇ ಅತ್ಯಧಿಕ ಏರಿಕೆ ಕಂಡ ಪೆಟ್ರೋಲ್‌ ಬೆಲೆ..

- Advertisement -
- Advertisement -

ದೇಶದ ಹಲವು ಮಹಾನಗರಗಳಲ್ಲಿ ಕಳೆದ 13 ತಿಂಗಳಲ್ಲಿಯೇ ಪೆಟ್ರೋಲ್ ಬೆಲೆ ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್‌ಗೆ 77.79ರೂಗೆ ತಲುಪಿದ್ದು, ಈ ಹಿಂದಿನ ಅಧಿಕ ಎಂದರೆ 2018ರ ನವೆಂಬರ್‌ನಲ್ಲಿ 77.90ರೂ ತಲುಪಿತ್ತು.

ಕಳೆದ ವರ್ಷ ಜನವರಿಯಲ್ಲಿ ಅದು 69.21 ರೂ ಇದ್ದ ಬೆಲೆ ಈಗ 77.79ರೂ ತಲುಪಿರುವುದರಿಂದ ಒಂದು ವರ್ಷದಲ್ಲಿಯೇ 8.58ರೂ ಹೆಚ್ಚಾಗಿದೆ. ಅಂದರೆ ಒಂದು ವರ್ಷದಲ್ಲಿ ಶೇ.12.4% ಏರಿಕೆಯಾಗಿದೆ.

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಎರಡು ಮೂರು ತಿಂಗಳಿಂದ ಸುಮಾರು 16% ನಷ್ಟು ಬೆಲೆ ಏರಿಕೆಯಾಗಿದ್ದು, ಒಂದು ಬ್ಯಾರೆಲ್‌ ಕಚ್ಛಾತೈಲಕ್ಕೆ 57.19 ಡಾಲರ್‌ನಿಂದ 66.33 ಡಾಲರ್‌ಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಆರ್ಥಿಕ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್ ಬೆಲೆ 80.87ರೂ ತಲುಪಿದ್ದರೆ, ಇನ್ನೇನು ಚುನಾವನೆ ಎದುರಿಸಲಿರುವ ದೆಹಲಿಯಲ್ಲಿ 75.25ರೂ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...